ಜಡಭರತಅವರ ಇದೇ ಹೆಸರಿನ ಕಾದಂಬರಿ ಆಧಾರಿತ ಚಿತ್ರ. ಧರ್ಮಸೆರೆ ೧೯೭೯ನೇ ವರ್ಷದಲ್ಲಿ ಪ್ರಕಟವಾದ ಚಲನಚಿತ್ರ. ಪುಟ್ಟಣ್ಣ ಕಣಗಾಲ್ ಈ ಚಿತ್ರದ ನಿರ್ದೇಶಕರು. == ಕಥೆ == ದೊಡ್ಡ ಮಗಳು ಮೂಕಿ(ಆರತಿ), ಎರಡನೆಯಾಕೆ ವಾಚಾಳಿ. ಹೆಣ್ಣು ನೋಡಬಂದ ಹುಡುಗ(ಶ್ರೀನಾಥ್) ತಂಗಿಯನ್ನು ಮದುವೆಯಾಗುವುದಾಗಿ ಹೇಳಿದಾಗ ಹೂಗುಟ್ಟುವ ತಂದೆ, ತಾಳಿ ಕಟ್ಟುವ ಸಮಯದಲ್ಲಿ ಅಕ್ಕನ ಮದುವೆಯಾಗದೆ ತಂಗಿಗೆ ಮದುವೆ ಮಾಡಲಾಗದು, ಮೂಕಿ ಅಕ್ಕನಿಗೂ ತಾಳಿ ಕಟ್ಟಿ, ನನ್ನ ಧರ್ಮಸೆರೆಯನ್ನು ನಿವಾರಿಸಿ ಎಂದು ಭಾವಿ ಅಳಿಯನ ಕಾಲು ಹಿಡಿಯುತ್ತಾನೆ.ಮನೆಗೆಲಸದವಳಾಗಿಯೋ ಅಥವಾ ಹೇಗಾದರೂ ಸರಿಯೇ, ಆಕೆಯನ್ನು ಬಾಳಿಸಿ ಎಂದಾಗ ಶ್ರೀನಾಥ್ ವಿಧಿಯಿಲ್ಲದೆಯೇ ಅಕ್ಕ-ತಂಗಿ ಇಬ್ಬರಿಗೂ ತಾಳಿ ಕಟ್ಟುತ್ತಾನೆ.ತಂದೆಯ ಧರ್ಮಸೆರೆಯೇನೋ ಕಳೆಯಿತು, ಮುಂದಿನ ಬಾಳುವೆ ಹೇಗೆ ಎಂಬುದನ್ನು ಈ ಚಿತ್ರದಲ್ಲಿ ಚಿತ್ರಿಸಲಾಗಿದೆ. == ಹಾಡುಗಳು == ಈ ಚಿತ್ರದ "ಈ ಸಂಭಾಷಣೆ ನಮ್ಮ ಈ ಪ್ರೇಮ ಸಂಭಾಷಣೆ" ಹಾಡು ಜನಪ್ರಿಯವಾಗಿದೆ. == ತಾರಾಬಳಗ == ಆರತಿ ಶ್ರೀನಾಥ್ ಸತ್ಯ ಪ್ರಿಯಾ ಸತ್ಯ ಭಾಮ ಜಯಶ್ರೀ ಬೇಬಿ ನಂದಿನಿ ಸೀತಾರಾಮ್ ಮುಸೂರಿ ಕೃಷ್ಣಮೂರ್ತಿ ನಂಜುಂಡಸ್ವಾಮಿ ಪ್ರಣವ ಮೂರ್ತಿ ಕಿರಣ್ ದ್ವಾರಕಾನಾಥ ಶಿವರಾಮ್ ಚಂದ್ರಶೇಖರ್ ಜೈ ಜಗದೀಶ್ ಯೋಗ ನರಸಿಂಹ ವಿಶ್ವನಾಥ ರಾವ್ ದಿಕ್ಕಿ ಮಾಧವ ರಾವ್ ಶರಪಂಜರ ಅಯ್ಯಂಗಾರ್ ಅಪ್ಪು ರಾವ್