ಧೀರಶಂಕರಾಭರಣ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ ೨೯ನೇ ರಾಗ. ಈ ರಾಗವು ಶಂಕರಾಭರಣ ಎಂದು ಜನಬಳಕೆಯಲ್ಲಿದೆ. ಕಟಪಯಾದಿ ಸೂತ್ರಕ್ಕೆ ಹೊಂದಿಕೊಳ್ಳುವಂತೆ 'ಧೀರ' ಎಂಬ ಮುಂಪ್ರತ್ಯಯವನ್ನು ಸೇರಿಸಿ ಧೀರಶಂಕರಾಭರಣ ಎಂಬ ಹೆಸರನ್ನು ಬಳಸುತ್ತಾರೆ. ಶಂಕರಾಭರಣ ರಾಗವು ಕರುಣಾ ರಸ ಭಕ್ತಿ ಪ್ರಧಾನ ರಾಗ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಬಿಲಾವಲ್ ರಾಗಕ್ಕೆ ಸಮಾನವಾಗಿದೆ. == ರಾಗ ಲಕ್ಷಣ ಮತ್ತು ಸ್ವರೂಪ == ಜಂಟೀಸ್ವರ ಪ್ರಯೋಗಗಳು, ದಾಟುಸ್ವರ ಪ್ರಯೋಗಗಳು ಈ ರಾಗದಲ್ಲಿ ವಿಶೇಷವಾಗಿ ಕಂಡು ಬರುತ್ತವೆ. ಸರ್ವಕಾಲಿಕರಾಗ, ತ್ರಿಸ್ಥಾಯಿಯಲ್ಲಿ ಹಾಡಬಹುದು. ಸರ್ವಸ್ವರ ಮೂರ್ಛನಕಾರಕ ರಾಗ. ರಚನೆಗಳನ್ನು ಷಡ್ಜ, ಗಾಂಧಾರ, ಮಧ್ಯಮ ಮತ್ತು ತಾರಷಡ್ಜಗಳಲ್ಲಿ ಪ್ರಾರಂಭಿಸಬಹುದು. ಈ ರಾಗದ ಆರೋಹಣ ಮತ್ತು ಅವರೋಹಣದ ಸ್ವರಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೩ ಮ೧ ಪ ದ೨ ನಿ೩ ಸ' ಅವರೋಹಣ ಸ' ನಿ೩ ದ೨ ಪ ಮ೧ ಗ೩ ರಿ೨ ಸ == ಜನ್ಯ ರಾಗಗಳು == ಈ ರಾಗದಲ್ಲಿ ಅತ್ಯಂತ ಜನಪ್ರಿಯ ರಾಗಗಳಾದ ಆರಭಿ, ಅಠಾಣ, ಬಿಲಹರಿ, ಹಂಸಧ್ವನಿ, ಶುದ್ಧ ಸಾವೇರಿ ಮತ್ತು ದೇವಗಾಂಧಾರಿ ಜನ್ಯವಾಗಿವೆ. == ಜನಪ್ರಿಯ ರಚನೆಗಳು == ಈ ರಾಗದಲ್ಲಿರುವ ಜನಪ್ರಿಯ ರಚನೆಗಳು == ಉಲ್ಲೇಖಗಳು == 1) ಕರ್ನಾಟಕ ಸಂಗೀತ : ಮಾಧ್ಯಮಿಕ ಹಂತ - ಕರ್ನಾಟಕ ಸರ್ಕಾರ, ಸಾರ್ವಜನಿಕ ಶಿಕ್ಷಣ ಇಲಾಖೆ. == ಬಾಹ್ಯ ಸಂಪರ್ಕಗಳು == ಯೂ ಟ್ಯೂಬ್‍ನಲ್ಲಿ ಶಂಕರಾಭರಣ ರಾಗದ ಬಗ್ಗೆ ಒಂದು ಮಾತುಕತೆ ನೈವೇಲಿ ಸಂತಾನ ಗೋಪಾಲನ್ ರವರ ಶಂಕರಾಭರಣ ರಾಗದ ಗಾಯನ