ಧೃತಿ ಒಂದು ಸಂಸ್ಕೃತ ಶಬ್ದವಾಗಿದೆ. ಇದು ಯಮಗಳಲ್ಲಿ ಒಂದು. ಇದರರ್ಥ 'ದೃಢ ನಿಶ್ಚಯದಿಂದ ಕಾರ್ಯನಿರ್ವಹಿಸುವುದು' (ಭಗವದ್ಗೀತೆ ೧೮.೨೬), 'ಸಹನೆ' (ಭಾಗವತ ಪುರಾಣ ೫.೫.೧೦-೧೩), 'ಸ್ಥಿರ ಸಂಕಲ್ಪ' (ಚೈತನ್ಯ ಚರಿತಾಮೃತ ಮಧ್ಯ ೨೪.೧೧) ಮತ್ತು 'ಏಕನಿಷ್ಠ ಸಾಧನೆ' (ಚೈತನ್ಯ ಚರಿತಾಮೃತ ಮಧ್ಯ ೨೪.೧೭೪), 'ನಿಯಮಿತವಾಗಿ ಧರಿಸುವುದು' (ಚೈತನ್ಯ ಚರಿತಾಮೃತ ಮಧ್ಯ ೨೪.೩೩೩) ಮತ್ತು ಹನ್ನೊಂದು ರುದ್ರಾಣಿಗಳಲ್ಲಿ ಒಂದನ್ನು (ಭಾಗವತ ಪುರಾಣ ೩.೧೨.೧೩) ಸೂಚಿಸುತ್ತದೆ. ಧೃತಿ ಶಬ್ದಕ್ಕೆ ಸರಿಯಾದ ಆಂಗ್ಲ ಸಮಾನಾರ್ಥಕ ಶಬ್ದವಿಲ್ಲ. ಇದು ಧೃ (ಸಹಿಸು ಎಂಬ ಅರ್ಥ) ಮೂಲದಿಂದ ವ್ಯುತ್ಪನ್ನವಾಗಿದೆ. ಇದನ್ನು ಒಂದು ಗುರಿಯತ್ತ ನಿರಂತರವಾಗಿ ಪ್ರಯತ್ನಿಸುವಂತೆ ಮಾಡುವ ಮನುಷ್ಯನಲ್ಲಿನ ಸೂಕ್ಷ್ಮ ಶಕ್ತಿ ಎಂದು ವ್ಯಾಖ್ಯಾನಿಸಲಾಗುತ್ತದೆ. ಇದು ಎಲ್ಲ ವಿರೋಧಗಳು ಮತ್ತು ಅಡೆತಡೆಗಳನ್ನು ಎದುರಿಸಿ ಜಯಿಸಲು ಧೈರ್ಯ, ಉತ್ಸಾಹ ಮತ್ತು ದೃಢನಿಷ್ಠೆಯನ್ನು ಒದಗಿಸುತ್ತದೆ. == ಉಲ್ಲೇಖಗಳು ==