ಧೌಲಿ ಒಡಿಶಾ ರಾಜ್ಯದ ಭುವನೇಶ್ವರದ ೮ ಕಿ.ಮಿ. ದಕ್ಷಿಣಕ್ಕೆ ದಯಾ ನದಿಯ ದಂಡೆಯ ಮೇಲೆ ಸ್ಥಿತವಾಗಿದೆ. ಇದು ಒಂದು ಗುಡ್ಡವಾಗಿದ್ದು ಪಕ್ಕದಲ್ಲಿ ವಿಶಾಲವಾದ ತೆರೆದ ಸ್ಥಳವಿದೆ. ಇದು ಒಂದು ಶಿಲಾರಾಶಿಯ ಮೇಲೆ ಕೆತ್ತಲಾದ ಸಾಮ್ರಾಟ್ ಅಶೋಕನ ಪ್ರಧಾನವಾದ ಶಾಸನಗಳನ್ನು ಹೊಂದಿದೆ. ಈ ಶಾಸನಗಳು ಗುಡ್ಡದ ಶಿಖರಕ್ಕೆ ಕರೆದೊಯ್ಯುವ ರಸ್ತೆಯ ಪಕ್ಕದಲ್ಲಿ ಇವೆ. == ಮಹತ್ವ == ಧೌಲಿ ಗುಡ್ಡವು ಕಳಿಂಗ ಯುದ್ಧವು ನಡೆದ ಪ್ರದೇಶವೆಂದು ಭಾವಿಸಲಾಗಿದೆ. ಇಲ್ಲಿ ಕಂಡುಬಂದಿರುವ ಶಿಲಾಶಾಸನಗಳಲ್ಲಿ ಸಂ. ೧-೯, ೧೪ ಮತ್ತು ಎರಡು ಪ್ರತ್ಯೇಕ ಕಲಿಂಗ ಶಾಸನಗಳು ಸೇರಿವೆ. ಕಲಿಂಗದ ಶಾಸನ ೬ರಲ್ಲಿ, ಅವನು "ಇಡೀ ವಿಶ್ವದ ಕಲ್ಯಾಣ"ಕ್ಕಾಗಿ ತನ್ನ ಕಾಳಜಿಯನ್ನು ವ್ಯಕ್ತಪಡಿಸುತ್ತಾನೆ. ಶಾಸನಗಳ ಮೇಲಿರುವ ಬಂಡೆಯಲ್ಲಿ ಕೊರೆದ ಆನೆಯು ಒಡಿಶಾದ ಅತ್ಯಂತ ಮುಂಚಿನ ಬೌದ್ಧ ಶಿಲ್ಪವಾಗಿದೆ. ಈ ಕಲ್ಲಿನ ಆನೆಯು ಕೇವಲ ಪ್ರಾಣಿಯ ಮುಂಭಾಗಗಳನ್ನು ತೋರಿಸುತ್ತದೆ, ಆದರೆ ಇದಕ್ಕೆ ರೂಪ ಮತ್ತು ಚಲನೆಯ ಸೂಕ್ಷ್ಮವಾದ ಭಾವವಿದೆ. ಇದು ಮೌರ್ಯರ ಕಲೆಯ ಕೆಲವೇ ಅವಶೇಷಗಳಲ್ಲಿ ಒಂದು ಎಂದು ಪರಿಗಣಿತವಾಗಿದೆ. == ಛಾಯಾಂಕಣ == == ಉಲ್ಲೇಖಗಳು == == ಹೊರಗಿನ ಕೊಂಡಿಗಳು == ()