ನಂದಿ ()ಮುಖ್ಯವಾಗಿ ದಕ್ಷಿಣ ಭಾರತದಲ್ಲಿ ಮಹಾರಾಷ್ಟ್ರದಿಂದ ಕೇರಳದವರೆಗೂ ಕಂಡುಬರುವ ಒಂದು ಮರ.ಇದು ದೊಡ್ಡ ಪ್ರಮಾಣದ ಪರ್ಣಪಾತಿ ಮರವಾಗಿದ್ದು ಮಲೆನಾಡು ಪ್ರದೇಶದಲ್ಲಿ ಬೆಳೆಯುತ್ತದೆ. ಕನ್ನಡದಲ್ಲಿ ಈ ಮರಕ್ಕೆ ನಂದಿ ಮರ, ಬಿಳಿ ನಂದಿ, ಬೆಳಂದಾರು ಬೆಂದೇಗು ಎಂದು ಹೆಸರಿದೆ. ಮರಾಠಿಯಲ್ಲಿ ನಾನಾ, ತಮಿಳಿನಲ್ಲಿ ಚೆನ್ನಂಗಿ, ವೆಂತೆಕ್ಕು ಎಂದೂ ಕರೆಯುತ್ತಾರೆ. == ಸಸ್ಯಶಾಸ್ತ್ರೀಯ ವರ್ಗೀಕರಣ == ಲೈತ್ರಾಸಿಯೆ ಕುಟುಂಬಕ್ಕೆ ಸೇರಿದ ಈ ಸಸ್ಯದ ಶಾಸ್ತ್ರೀಯ ಹೆಸರು ಲಾಗರ್ಸ್ಟ್ರೊಮಿಯ ಲಾನ್ಸಿಯೋಲಾಟ ಎಂಬುದಾಗಿದೆ. == ಸಸ್ಯದ ಗುಣಲಕ್ಷಣಗಳು == ಇದು ಬಿಳಿ ಬೂದು ಬಣ್ಣದ ಕಾಂಡವನ್ನು ಹೊಂದಿದ್ದು, ಬುಡದಿಂದ ಮೇಲಿನವರೆಗೆ ನಯವಾಗಿದೆ. ತೊಗಟೆ ತೆಳುವಾದ ಹಾಳೆಯಂತೆ ಕಳಚಿ ಬೀಳುತ್ತದೆ. ಬೇಸಿಗೆಯಲ್ಲಿ ಎಲೆ ಉದುರಿಸಿ ಹೂಗಳು ಮೂಡುತ್ತದೆ ಇದರ ದಾರುವು ಗಡುಸಾಗಿದ್ದು, ತಿಳಿ ಕಂದು ಬಣ್ಣವಿದೆ. ನಯವಾದ ಸಮ ಕಣರಚನೆಯನ್ನು ಹೊಂದಿದೆ. ಹೊಳಪು ಬರುತ್ತದೆ. ದಾರುವು ಸೀಳಿಕೆ ಸ್ವಭಾವದ್ದಾಗಿದೆ. == ಉಪಯೋಗಗಳು == ಇದು ಒಂದು ಮುಖ್ಯ ಚೌಬೀನೆ ಮರ. ಗೃಹ ನಿರ್ಮಾಣ, ಹಲಗೆಗಳಿಗೆ, ಗಾಡಿಗಳ ತಯಾರಿಕೆಗೆ, ಪದರಹಲಗೆ ತಯಾರಿಸಲು ಮುಂತಾಗಿ ಉಪಯೋಗವಾಗುತ್ತದೆ. == ಆಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ == ಉಲ್ಲೇಖ ==