ಆಧುನಿಕ ಖಗೋಳವಿಜ್ಞಾನದಲ್ಲಿ, ನಕ್ಷತ್ರಪುಂಜ ವೆಂಬುದು, ಅಂತರರಾಷ್ಟ್ರೀಯವಾಗಿ ನಿರ್ಣಯಿಸಲಾದ ಬಾನಿನ ಗೋಳದ ಅವಿಭಾಜ್ಯ ಅಂಗವಾಗಿದೆ. ಐತಿಹಾಸಿಕವಾಗಿ, ಪರಸ್ಪರ ಸನಿಹದಲ್ಲಿದ್ದ ನಕ್ಷತ್ರಗಳಿಂದ ರಚನೆಯಾದ ಸಮೂಹಗಳನ್ನು ಗುರುತಿಸಲು/ಉಲ್ಲೇಖಿಸಲು ಈ ಉಕ್ತಿಯನ್ನು ಬಳಸಲಾಗುತ್ತಿತ್ತು; ಈ ಪದ್ಧತಿ ಇಂದೂ ಚಾಲ್ತಿಯಲ್ಲಿದೆ. == ವ್ಯಾಖ್ಯಾನ == ಆಡುಭಾಷೆಯಲ್ಲಿ, ಆಕಾಶಕಾಯಗಳ, ಅದರಲ್ಲೂ ಸಾಮಾನ್ಯವಾಗಿ ನಕ್ಷತ್ರಗಳ ಸಮೂಹ ರಚಿಸುವ ನಿರ್ದಿಷ್ಟ ಆಕಾರವನ್ನು ನಕ್ಷತ್ರಪುಂಜ ಎನ್ನಲಾಗುತ್ತದೆ. ಚಾಲ್ತಿ ವ್ಯವಸ್ಥೆಯಲ್ಲಿ ಮುಖ್ಯವಾಗಿ, ನಕ್ಷತ್ರಪುಂಜಗಳನ್ನು ಆಕಾಶದಲ್ಲಿ ಆಕಾರಗಳಿಗಿಂತಲೂ ಹೆಚ್ಚಾಗಿ ಜಾಲದಂತಿರುವ ಖಂಡಗಳಾಗಿ ಪರಿಗಣಿಸಲಾಗುತ್ತದೆ. ಆದರೂ, ಖಗೋಳವಿಜ್ಞಾನಿಗಳು ನಕ್ಷತ್ರಪುಂಜ ಎಂಬ ಉಕ್ತಿಯನ್ನು ಇಂದಿಗೂ ಬಳಸುವರು. ಅಧಿಕೃತವಾಗಿ ನಕ್ಷತ್ರಪುಂಜ ಎಂದು ವಿಂಗಡಿಸಲಾಗಿರದ ನಕ್ಷತ್ರಗಳ ಸಮೂಹದ ಆಕಾರವನ್ನು ನಕ್ಷತ್ರ-ಗುಂಪು ಎನ್ನಲಾಗಿದೆ. ಬಿಗ್‌ ಡಿಪ್ಪರ್‌ ( ) ಎಂಬ ನಕ್ಷತ್ರ-ಗುಂಪು ಇದಕ್ಕೆ ಚಿರಪರಿಚಿತ ಉದಾಹರಣೆಯಾಗಿದೆ. ಈ ನಕ್ಷತ್ರ-ಗುಂಪು ಇನ್ನೂ ದೊಡ್ಡದಾದ ದೊಡ್ಡ ಕರಡಿ( )ಯ ಆಕೃತಿಯ ನಕ್ಷತ್ರಪುಂಜದ ಭಾಗ ಎಂದು ಪರಿಗಣಿಸಲಾದ ಕಾರಣ, ಅಂತರರಾಷ್ಟ್ರೀಯ ಖಗೋಳವೈಜ್ಞಾನಿಕ ಒಕ್ಕೂಟ ( ) (ಐಎಯು ()) 'ಬಿಗ್‌ ಡಿಪ್ಪರ್'‌ ಎಂಬ ಉಕ್ತಿಯನ್ನು ಬಳಸುತ್ತಿಲ್ಲ. 1922ರಲ್ಲಿ, ಬಾನಿನ ಗೋಳವನ್ನು 88 ಅಧಿಕೃತ ನಕ್ಷತ್ರಪುಂಜಗಳನ್ನಾಗಿ ವಿಭಾಗಿಸುವಲ್ಲಿ ಐಎಯು ಒಕ್ಕೂಟಕ್ಕೆ ಹೆನ್ರಿ ನೊರಿಸ್‌ ರಸೆಲ್‌ ನೆರವಾದರು. ಮಾದರಿಯಾಗಿ, ಈ ಅಧುನಿಕ ನಕ್ಷತ್ರಪುಂಜಗಳು 'ಒರಿಯಾನ್‌ ()', 'ಲಿಯೊ ()' ಮತ್ತು 'ಸ್ಕಾರ್ಪಿಯಸ್ ()' ‌ ಎಂಬ ತಮ್ಮ ಗ್ರೆಕೊ-ರೋಮನ್‌ ಪೂರ್ವಜರ ಹೆಸರುಗಳನ್ನು ಹಂಚಿಕೊಂಡಿವೆ. ಆಕಾಶದಲ್ಲಿನ ಈ ಆಕೃತಿಗಳನ್ನು ಮೂಲತಃ ಒಂದು ಪೌರಾಣಿಕ ಘಟನೆ, ಜೀವಿ ಅಥವಾ ವ್ಯಕ್ತಿಯೊಂದಿಗೆ ಸಂಬಂಧಿಸಲಾಗಿತ್ತು. ಜೊತೆಗೆ, ದಿಕ್ಸೂಚಿಯ ಆವಿಷ್ಕಾರಕ್ಕೆ ಮುಂಚೆ, ಅಂದರೆ, ಸಂಶೋಧನೆಗಳ ಯುಗದಲ್ಲಿ, ನಕ್ಷತ್ರಪುಂಜಗಳ ಗುರುತಿಸಬಹುದಾದ ಆಕೃತಿಗಳ ಸೂಕ್ತ ವಿಂಗಡಣೆಯು, ನೆಲ ಅಥವಾ ಸಮುದ್ರದಲ್ಲಿ ಸಂಚರಿಸುವ ದೃಷ್ಟಿಯಿಂದ ಬಹಳ ಮುಖ್ಯ ಹಾಗೂ ಉಪಯುಕ್ತವಾಗಿತ್ತು. ಖಗೋಳವಿಜ್ಞಾನದ ತಾಂತ್ರಿಕ ಆಧುನೀಕರಣದಿಂದಾಗಿ, ಆಕೃತಿ-ಆಧಾರಿತ ನಕ್ಷತ್ರಪುಂಜ ನಾಮಕರಣ ವ್ಯವಸ್ಥೆಯಿಂದ ದೂರ ಸರಿದು, ಪ್ರದೇಶ-ಮಾಪನಾ ಆಧಾರಿತ ವ್ಯವಸ್ಥೆ ಆಯ್ದುಕೊಳ್ಳುವುದು ಬಹಳ ಮುಖ್ಯವಾಯಿತು. ಇದರಿಂದಾಗಿ ಹಲವು ಐತಿಹಾಸಿಕ ಆಕೃತಿಗಳ ಗುರುತಿಸುವಿಕೆಗಳು ಗತಕಾಲವಾದವು. == ಗಡಿರೇಖೆಗಳು == 1930ರಲ್ಲಿ, ಯುಜೆನ್‌ ಡೆಲ್ಪೊರ್ಟ್‌, ಎಲ್ಲಾ 88 ಅಧಿಕೃತ ನಕ್ಷತ್ರಪುಂಜಗಳ ನಡುವಣ ಗಡಿರೇಖೆಗಳನ್ನು ಮೊದಲ ಬಾರಿಗೆ ಕಲ್ಪಿಸಿದರು. ಈ ಗಡಿಗಳು ಖಗೋಳ ರೇಖಾಂಶ ( ) ಮತ್ತು ದಿಕ್ಪಾತ ()ಗಳ ಉದ್ದನೆಯ ಹಾಗೂ ಅಡ್ಡ ರೇಖೆಗಳಿಗೆ ಹೊಂದಿಕೊಂಡಿರುತ್ತವೆ. ('ಖಗೋಳ ರೇಖಾಂಶ' ಎಂದರೆ ಯಾವುದೇ ಬಿಂದುವಿನ ಮೂಲಕ ಹಾದು ಹೋಗುವ ಹೊರಾವೃತ್ತ (ಖಗೋಲ ಧ್ರುವಗಳ ಮೂಲಕ ಹಾದು ಹೋಗುವ ಮಹಾವೃತ್ತ)ವೂ ಖಮಧ್ಯ ರೇಖೆಯೂ ಛೇದಿಸುವ ಬಿಂದುವು ಮೇಷ ಸಂಕ್ರಾಂತಿ ಬಿಂದುವಿನಿಂದ ಪೂರ್ವಕ್ಕೆ ಎಷ್ಟು ದೂರವಿದೆಯೋ ಆ ದೂರ. 'ದಿಕ್ಪಾತ' ಎಂದರೆ ಖಾಗೋಳಿಕ ಧ್ರುವಗಳ ಮೂಲಕ ಹಾದು ಹೋಗುವ ಮಹಾವೃತ್ತದ ಮೇಲೆ ಅಳೆಯಲಾಗುವ, ಆಕಾಶಕಾಯವೊಂದು ಖಾಗೋಳಿಕ ವಿಷುವದ್‌ ವೃತ್ತದಿಂದ ಉತ್ತರಕ್ಕೆ ಅಥವಾ ದಕ್ಷಿಣಕ್ಕೆ ಇರುವ, ಕೋನಿಯ ದೂರ.) ಈ 88 ನಕ್ಷತ್ರಪುಂಜಗಳಲ್ಲಿ 37 ಉತ್ತರ ಗೋಳಾರ್ಧದಲ್ಲಿ ಹಾಗೂ 51 ದಕ್ಷಿಣ ಗೋಳಾರ್ಧದಲ್ಲಿವೆ. ಆದರೂ, ಯುಜೆನ್‌ ಬಳಸಿದ ದತ್ತಾಂಶ ಸಂಗ್ರಹವು B1875.0 ಕಾಲ ()ದಷ್ಟು ಹಿಂದಿನದಾಗಿತ್ತು. ಆ ಕಾಲದಲ್ಲಿ ಬೆಂಜಮಿನ್‌ ಎ. ಗೌಲ್ಡ್‌ ಮೊದಲ ಬಾರಿಗೆ ಬಾನಿನ ಗೋಳದಲ್ಲಿ ಗಡಿಗಳನ್ನು ಕಲ್ಪಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಗೌಲ್ಡ್‌ ಅವರ ಈ ಪ್ರಸ್ತಾಪವನ್ನು ಆಧರಿಸಿ ಡೆಲ್ಪೊರ್ಟ್‌ ತಮ್ಮ ಕಾರ್ಯ ನಡೆಸಿದ್ದುಂಟು. ಇಷ್ಟು ಮುಂಚಿನ ಕಾಲದ ದಿನಾಂಕದ ಪರಿಣಾಮವಾಗಿ, ವಿಷುವತ್ತುಗಳ ಅಕ್ಷಭ್ರಮಣದಿಂದಾಗಿ, ಆಧುನಿಕ ನಕ್ಷತ್ರ ನಕ್ಷೆಯಲ್ಲಿರುವ ಗಡಿಗಳು (ಉದಾಹರಣೆಗೆ J2000 ಇಪಾಕ್‌) ಆಗಲೇ ಭಾಗಶಃ ಓರೆಯಾಗಿದ್ದು, ಇನ್ನೆಂದಿಗೂ ನಿಖರವಾಗಿ ಉದ್ದ ಅಥವಾ ಅಡ್ಡಲಾಗಿರದು. ಮುಂಬರುವ ಹಲವು ವರ್ಷ-ಶತಮಾನಗಳ ಕಾಲ ಇದರ ಪ್ರಭಾವವು ಹೆಚ್ಚುತ್ತದೆ. == ಸಾಮೀಪ್ಯ == ನಕ್ಷತ್ರಪುಂಜದಲ್ಲಿನ ನಕ್ಷತ್ರಗಳು ಪರಸ್ಪರ ಖಭೌತವೈಜ್ಞಾನಿಕ ಸಂಬಂಧ ಹೊಂದಿರುವುದು ಬಹಳ ಅಪರೂಪ. ಭೂಮಿಯಿಂದ ನೋಡಿದರೆ ಅವು ಪರಸ್ಪರ ಸನಿಹದಲ್ಲಿರುವಂತೆ ತೋರುತ್ತವೆ; ಬಹಳಷ್ಟು ಜ್ಯೋತಿರ್ವರ್ಷಗಳಷ್ಟು ದೂರ ಸ್ಥಿತವಾಗಿವೆಯೆಂಬುದನ್ನು ಮರೆಮಾಚುತ್ತವೆ. ಆದರೂ, ಇದಕ್ಕೆ ಕೆಲವು ಅಪವಾದಗಳಿವೆ: ದೊಡ್ಡ ಕರಡಿಯ ಆಕೃತಿಯಲ್ಲಿರುವ ನಕ್ಷತ್ರಪುಂಜವು ಬಹುಶಃ ಇಡಿಯಾಗಿ ಪರಸ್ಪರ ಸನಿಹದಲ್ಲಿರುವ ನಕ್ಷತ್ರಗಳಿಂದ ಕೂಡಿದೆ. ಈ ಸಂಗತಿಗೆ ದೊಡ್ಡ ಕರಡಿ ಚಲನಾ ಗುಂಪು ಸಮರೂಪ ಎನ್ನಲಾಗಿದೆ. == ವಿಶ್ವದಾದ್ಯಂತ ನಕ್ಷತ್ರಪುಂಜಗಳು == === ಗ್ರೆಕೊ-ರೋಮನ್‌ === ಪಾಶ್ಚಾತ್ಯ ಪ್ರಪಂಚದಲ್ಲಿ, ಉತ್ತರ ಗೋಳಾರ್ಧದ ಆಕಾಶವು ಪುರಾತನ ಗ್ರೀಕರು ನೀಡಿದ ವಿವರಣೆ ಆಧರಿಸಿ ನಕ್ಷತ್ರಪುಂಜಗಳಾಗಿ, ಸಾಂಪ್ರದಾಯಿಕವಾಗಿ ವಿಭಾಗಿಸಲಾಗಿದೆ. ನಕ್ಷತ್ರಪುಂಜಗಳೊಂದಿಗೆ ಸಂಬಂಧಿತ ಮೊದಲ ಪುರಾತನ ಗ್ರೀಕ್‌ ಕೃತಿಗಳು, ನಕ್ಷತ್ರ ಪೌರಾಣಿಕ ಕಥೆಗಳ ಗ್ರಂಥಗಳಾಗಿದ್ದವು. ಕ್ರಿಸ್ತಪೂರ್ವ ಸುಮಾರು ಎಂಟನೆಯ ಶತಮಾನದಲ್ಲಿ ಹೆಸಿಯೊಡ್‌ ರಚಿತ ಕವನವು ಇವುಗಳಲ್ಲಿ ಅತಿಪುರಾತನದ್ದಾಗಿದೆ. ಇದರಲ್ಲಿ ಕೇವಲ ತುಣುಕುಗಳು ಮಾತ್ರ ಉಳಿದುಕೊಂಡಿವೆ. ಅಲೆಕ್ಸಾಂಡರ್‌ ಕಾಲದ ನಂತರದ ಬರಹಗಾರ ಮಿಥ್ಯಾ-ಇರಾಟೊಸ್ಥಿನ್ಸ್‌ ಹಾಗೂ ಆರಂಭಕಾಲಿಕ ರೋಮನ್‌ ಬರಹಗಾರ ಶೈಲಿಯ ಮಿಥ್ಯಾ ಹೈಜಿನಸ್‌ ರಚಿಸಿದ ಕೃತಿಗಳು, ನಕ್ಷತ್ರಪುಂಜಗಳ ಪೌರಾಣಿಕ ಮೂಲಗಳಿಗೆ ಸಂಬಂಧಿಸಿವೆ. ಕ್ರಿಸ್ತಶಕ ಎರಡನೆಯ ಶತಮಾನದಲ್ಲಿ, ಗ್ರೀಕ್‌ ಖಗೋಳವಿಜ್ಞಾನಿ ಟಾಲೆಮಿ, 'ಅಲ್ಮಾಗೆಸ್ಟ್ ' ಎಂಬ ತಮ್ಮ ಪ್ರಭಾವೀ ಕೃತಿಯಲ್ಲಿ, ನಕ್ಷತ್ರಪುಂಜಗಳ ಬಗೆಗೆ ಸುದೀರ್ಘ ವಿವರಣೆ ನೀಡಿದರು. === ಚೀನೀ ನಕ್ಷತ್ರಪುಂಜಗಳು === ಚೀನೀ ನಕ್ಷತ್ರಪುಂಜಗಳು ಪಾಶ್ಚಾತ್ಯ ನಕ್ಷತ್ರಪುಂಜಗಳಿಗಿಂತಲೂ ವಿಭಿನ್ನವಾಗಿವೆ. ಚೀನೀಯ ಪುರಾತನ ಖಗೋಳವಿಜ್ಞಾನದ ಸ್ವತಂತ್ರ ಬೆಳವಣಿಗೆಯೇ ಇದಕ್ಕೆ ಕಾರಣ. ಒಂದು ವ್ಯತ್ಯಾಸವೇನೆಂದರೆ, ಪಾಶ್ಚಾತ್ಯ ರಾಶಿಚಕ್ರ()ದಲ್ಲಿನ 12 ನಕ್ಷತ್ರಪುಂಜಗಳಿಗೆ ಹೋಲಿಸಿದರೆ, ಚೀನೀ ರಾಶಿಚಕ್ರದಲ್ಲಿ 28 "ಕ್ಸಿಯು" (宿) ಅಥವಾ 'ಭವನಗಳು' (ಅಕ್ಷರಶಃ ಅನುವಾದ) ಇವೆ. === ಭಾರತೀಯ === ವೈದಿಕ ಜ್ಯೋತಿಷ್ಯಶಾಸ್ತ್ರದಲ್ಲಿ, ರಾಶಿಚಕ್ರದ 12 ನಕ್ಷತ್ರಪುಂಜಗಳನ್ನು ರಾಶಿ ಗಳು ಎನ್ನಲಾಗಿದೆ. ಅಂಡಾಕಾರದ ಖಗೋಲ ವೃತ್ತದಲ್ಲಿರುವ ಈ ಹನ್ನೆರಡೂ ರಾಶಿಗಳು, ಪಾಶ್ಚಾತ್ಯ ರಾಶಿ ಸಂಕೇತಗಳೊಂದಿಗೆ ನಿಕಟವಾಗಿ ಸಂಬಂಧಿತವಾಗಿವೆ. ಆ 360 ಡಿಗ್ರಿಯ ಭಾರತೀಯ ರಾಶಿಚಕ್ರ(ಖಗೋಲ ಕ್ರಾಂತಿವೃತ್ತ)ವನ್ನು 27 ನಕ್ಷತ್ರಗಳ ವಿಭಾಗಗಳನ್ನಾಗಿ(13.33333=13 1/3ಡಿಗ್ರಿ)ವಿಂಗಡಿಸಲಾಗಿದೆ. === ಬ್ಯಾಬಿಲೊನೀಯ === ಗ್ರೀಕರಿಗೆ ತಿಳಿದಿರುವ ರಾಶಿಚಕ್ರದ ನಕ್ಷತ್ರಪುಂಜಗಳು ಮತ್ತು ಹಲವು ಇತರೆ ಅಂಶಗಳ ಮೂಲಗಳನ್ನು, ಮುಲ್‌. ಹಾಗೂ ಇತರೆ ಬ್ಯಾಬಿಲೊನೀಯ ಪಠ್ಯಗಳಲ್ಲಿ ಕಾಣಬಹುದಾಗಿದೆ. (ಮುಲ್‌.ಅಪಿನ್‌.ಎಕ್ಸ್‌. ಲಿಯೊ) == ಕರಿಮೋಡದಂತಹ ನಕ್ಷತ್ರಪುಂಜಗಳು == ಕರಿಮೋಡ ನಕ್ಷತ್ರಪುಂಜಗಳನ್ನು ಉತ್ತರ ಗೋಳಾರ್ಧಕ್ಕಿಂತಲೂ ಹೆಚ್ಚಾಗಿ ದಕ್ಷಿಣ ಗೋಳಾರ್ಧದ ಆಕಾಶದಲ್ಲಿ ಸುಸ್ಪಷ್ಟವಾಗಿ ಕಾಣಬಹುದಾಗಿದೆ. ಆಕಾಶಗಂಗೆ( )ಯ [ಕ್ಷೀರ ಪಥ]ಮಧ್ಯಭಾಗವು ಭೂಮಿಯ ಮೇಲೆ ನೆರಳು ಮೂಡಿಸಿದಾಗ, ಭೂಮಿಯಿಂದ ಆಕಾಶಗಂಗೆಯಲ್ಲಿನ ಕಪ್ಪು ಮಚ್ಚೆಗಳು ಎದ್ದುಕಾಣುತ್ತವೆ. ಕೆಲವು ಸಂಸ್ಕೃತಿಗಳ ಪ್ರಕಾರ, ಈ ಮಚ್ಚೆಗಳು ಕೆಲವು ಆಕೃತಿಗಳಂತೆ ಕಾಣುತ್ತವೆ. ಇವುಗಳಿಗೆ ಅನುಗುಣವಾಗಿ, ಈ 'ಕರಿಮೋಡ ನಕ್ಷತ್ರಪುಂಜ'ಗಳಿಗೆ ಹೆಸರುಗಳನ್ನಿಡಲಾಗುತ್ತದೆ. ಇನ್ಕಾ ನಾಗರೀಕತೆಯ ಸದಸ್ಯರು ಆಕಾಶಗಂಗೆಯಲ್ಲಿ ವಿಭಿನ್ನ ಕಪ್ಪು ಭಾಗಗಳು ಅಥವಾ ಕಪ್ಪು ನೀಹಾರಿಕೆ()ಗಳನ್ನು ಗುರುತಿಸಿ, ಅವುಗಳ ಆಕಾರಗಳನ್ನು ಋತುವಾರು ಮಳೆಯೊಂದಿಗೆ ಸಂಬಂಧವಿದೆಯೆಂದು ನಿರ್ಣಯಿಸುತ್ತಿದ್ದರು. ಆಸ್ಟ್ರೇಲಿಯಾದ ಬುಡಕಟ್ಟು ಜನಾಂಗದ ಖಗೋಳವಿಜ್ಞಾನದಲ್ಲಿಯೂ ಸಹ, ಕಪ್ಪು ನೀಹಾರಿಕೆಗಳ ನಕ್ಷತ್ರಪುಂಜಗಳನ್ನು ವಿವರಿಸಲಾಗಿದೆ. ಇದರಲ್ಲಿ ಕೋಲ್‌ಸ್ಯಾಕ್‌ನಿಂದ ಉಂಟಾಗುವ ಆಕಾಶದಲ್ಲಿ ಎಮು ( ) ನಕ್ಷತ್ರಪುಂಜವು ಬಹಳ ಚಿರಪರಿಚಿತ. == ಇವನ್ನೂ ಗಮನಿಸಿ == ಟೆಂಪ್ಲೇಟು: ಡೆಂಡೆರಾ ರಾಶಿಚಕ್ರ ಹಿಂದೆ ಚಾಲ್ತಿಯಲ್ಲಿದ್ದ ನಕ್ಷತ್ರಪುಂಜಗಳು ನಕ್ಷತ್ರಪುಂಜಗಳ ಪಟ್ಟಿ ದಿಗಂತ್ಯವ್ಯಾಪ್ತಿಯ ಕ್ರಮದಲ್ಲಿ ನಕ್ಷತ್ರಪುಂಜಗಳ ಪಟ್ಟಿ ನಕ್ಷತ್ರಪುಂಜಗಳ ಕ್ರಮವಾಗಿ ನಕ್ಷತ್ರಗಳ ಪಟ್ಟಿ ನಕ್ಷತ್ರಪುಂಜಗಳ ಇತಿಹಾಸ ಸಮತಲ ಗೋಲ == ನೋಡಿ == ರಾಶಿ == ಟಿಪ್ಪಣಿಗಳು == == ಹೆಚ್ಚಿನ ಓದಿಗಾಗಿ == === ಪುರಾಣ ಸಾಹಿತ್ಯ, ಸಿದ್ಧಾಂತ, ಇತಿಹಾಸ ಮತ್ತು ಪುರಾತನ-ಖಗೋಳವಿಜ್ಞಾನ === ಅಲೆನ್‌, ರಿಚರ್ಡ್‌ ಹಿಂಕ್ಲೆ. (1899) ಸ್ಟಾರ್‌-ನೇಮ್ಸ್‌ ಅಂಡ್‌ ದೇಯ್ರ್‌ ಮೀನಿಂಗ್ಸ್‌ , ಜಿ. ಇ. ಸ್ಟೆಚರ್ಟ್‌, ನ್ಯೂಯಾರ್ಕ್‌, ಯು.ಎಸ್‌.ಎ., ದೃಢರಕ್ಷಾಪುಟ ಆವೃತ್ತಿ; 1963ರಲ್ಲಿ ಸ್ಟಾರ್‌ ನೇಮ್ಸ್‌: ದೇಯ್ರ್‌ ಲೋರ್‌ ಅಂಡ್ ಮೀನಿಂಗ್‌ ಎಂದು ಮುದ್ರಿತವಾಯಿತು, ಡೊವರ್‌ ಪಬ್ಲಿಕೇಷನ್ಸ್‌ ಇನ್ಕಾರ್ಪೊರೇಟೆಡ್‌, ಮೈನೊಲಾ, ನ್ಯೂಯಾರ್ಕ್‌, ಯು.ಎಸ್‌.ಎ., 978-0-486-21079-7 ಮೃದು ರಕ್ಷಾಪುಟ ಆವೃತ್ತಿ. ಒಲ್ಕಾಟ್‌, ವಿಲಿಯಮ್‌ ಟೈಲರ್‌. (1911); ಸ್ಟಾರ್‌ ಲೋರ್‌ ಆಫ್‌ ಆಲ್‌ ಏಜಸ್‌ , ಜಿ. ಪಿ. ಪುಟ್ನಾಮ್ಸ್‌ ಸನ್ಸ್‌, ನ್ಯೂಯಾರ್ಕ್‌, ನ್ಯೂಯಾರ್ಕ್‌, ಯು.ಎಸ್‌.ಎ., ದೃಢ ರಕ್ಷಾಪುಟ ಆವೃತ್ತಿ; 2004ರಲ್ಲಿ ಸ್ಟಾರ್‌ ಲೋರ್‌: ಮಿತ್ಸ್‌, ಲೆಜೆಂಡ್ಸ್‌ ಅಂಡ್‌ ಫ್ಯಾಕ್ಟ್ಸ್‌ , ಎಂಬ ಶಿರೋನಾಮೆಯೊಂದಿಗೆ ಮೃದು ರಕ್ಷಾಪುಟ ಆವೃತ್ತಿಯಲ್ಲಿ ಅಚ್ಚಾಯಿತು, ಡೊವರ್‌ ಪಬ್ಲಿಕೇಷನ್ಸ್‌, ಇನ್ಕಾರ್ಪೊರೇಟೆಡ್‌, ಮೈನೊಲಾ, ನ್ಯೂಯಾರ್ಕ್‌, ಯು.ಎಸ್‌.ಎ., 978-0-486-43581-7 ಮೃದು ರಕ್ಷಾಪುಟ ಆವೃತ್ತಿ. ಕೆಲ್ಲಿ, ಡೇವಿಡ್‌ ಎಚ್‌. ಮತ್ತು ಮಿಲೊನ್‌, ಯೂಜೆನ್‌ ಎಫ್‌. (2004) ಎಕ್ಸ್‌ಪ್ಲೊರಿಂಗ್‌ ಏನ್ಷಿಯೆಂಟ್‌ ಸ್ಕೈಸ್‌: ಆನ್‌ ಎನ್ಸೈಕ್ಲೊಪೇಡಿಕ್‌ ಸರ್ವೇ ಆಫ್‌ ಅರ್ಕಿಯೊಆಸ್ಟ್ರೊನೊಮಿ , ಸ್ಪ್ರಿಂಗರ್‌, 978-0-387-95310-6 ದೃಢ ರಕ್ಷಾಪುಟ ಆವೃತ್ತಿ. ರಿಡ್ಪಾತ್‌, ಇಯಾನ್. (1989) ಸ್ಟಾರ್‌ ಟೇಲ್ಸ್‌ , ಲುಟರ್ವರ್ಥ್‌ ಪ್ರೆಸ್‌, 0-7188-2695-7 ದೃಢ ರಕ್ಷಾಪುಟ ಆವೃತ್ತಿ. ಸ್ಟಾಲ್‌, ಜೂಲಿಯಸ್‌ ಡಿ. ಡಬ್ಲ್ಯೂ. (1988) ದಿ ನ್ಯೂ ಪ್ಯಾಟರ್ನ್ಸ್‌ ಇನ್‌ ದಿ ಸ್ಕೈ: ಮಿತ್ಸ್‌ ಅಂಡ್‌ ಲೆಜೆಂಡ್ಸ್‌ ಆಫ್‌ ದಿ ಸ್ಟಾರ್ಸ್‌ , ಮೆಕ್ಡೊನಾಲ್ಡ್‌ & ವುಡ್ವರ್ಡ್‌ ಪಬ್ಲಿಷಿಂಗ್‌ ಕಂಪೆನಿ, 0-939923-10-6 ದೃಢ ರಕ್ಷಾಪುಟ ಆವೃತ್ತಿ, 0-939923-04-1 ಮೃದು ರಕ್ಷಾಪುಟ ಆವೃತ್ತಿ. ವೈಟ್‌, ಗೆವಿನ್‌. (2008) ಬ್ಯಾಬಿಲೊನಿಯನ್‌ ಸ್ಟಾರ್‌-ಲೋರ್‌ , ಸೊಲಾರಿಯಾ ಪಬ್ಲಿಕೇಷನ್ಸ್‌, 978-0-9559037-0-0 ಮೃದು ರಕ್ಷಾಪುಟ ಆವೃತ್ತಿ. === ಭೂಪಟಗಳ ಪುಸ್ತಕಗಳು ಹಾಗೂ ಬಾನಿನ ನಕ್ಷೆಗಳು === ಸಾಮಾನ್ಯ ಮತ್ತು ಯಾವುದೇ ವಿಶಿಷ್ಟ ವಿಂಗಡಣೆಯಿಲ್ಲದ್ದು – ಇಡೀ ಬಾನಿನ ವ್ಯಾಪ್ತಿ : ಬೆಕ್ವಾರ್‌, ಅಂಟೊನಿನ್‌. ಅಟ್ಲಾಸ್‌ ಕೊಯೆಲಿ . ಅಟ್ಲಾಸ್‌ ಆಫ್‌ ದಿ ಮೌಂಟೆನ್ಸ್‌ ಎಂದು ಪ್ರಕಾಶಿಸಲಾಗಿದೆ, ಸ್ಕೈ ಪಬ್ಲಿಷಿಂಗ್‌ ಕಾರ್ಪೊರೇಷನ್‌, ಕೇಂಬ್ರಿಡ್ಜ್‌, ಮ್ಯಾಸಚ್ಯಾಸೆಟ್ಸ್‌, ಯು.ಎಸ್‌.ಎ.; ಸಮಾನಸ್ಥಾನೀಯ ಜಾಲ ಪಾರದರ್ಶಿಕೆಯೊಂದಿಗೆ. ನಾರ್ಟನ್‌, ಆರ್ಥರ್‌ ಫಿಲಿಪ್‌. (1910) ನಾರ್ಟನ್ಸ್‌ ಸ್ಟಾರ್‌ ಅಟ್ಲಾಸ್‌ , 20ನೆಯ ಆವೃತ್ತಿ 2003 - ನಾರ್ಟನ್ಸ್‌ ಸ್ಟಾರ್‌ ಅಟ್ಲಾಸ್‌ ಅಂಡ್‌ ರೆಫೆರೆನ್ಸ್‌ ಹ್ಯಾಂಡ್ಬುಕ್‌ , ಸಂಪಾದಕರು ರಿಡ್ಪಾತ್‌, ಇಯಾನ್‌, ಪೈ ಪ್ರೆಸ್‌, 978-0-13-145164-3, ದೃಢ ರಕ್ಷಾಪುಟ ಆವೃತ್ತಿ. ನ್ಯಾಷನಲ್‌ ಜಿಯೊಗ್ರಫಿಕ್‌ ಸೊಸೈಟಿ (1957, 1970, 2001, 2007) ದಿ ಹೆವೆನ್ಸ್‌ (1970), ಅಮೆರಿಕಾ ಸಂಯುಕ್ತ ಸಂಸ್ಥಾನದ ವಾಷಿಂಗ್ಟನ್‌ ಡಿಸಿ ನಗರದ ನ್ಯಾಷನಲ್‌ ಜಿಯೊಗ್ರಫಿಕ್‌ ಸೊಸೈಟಿಯ (ಎನ್‌ಜಿಎಸ್‌) ನಕ್ಷಾಶಾಸ್ತ್ರ ವಿಭಾಗ - ನ್ಯಾಷನಲ್‌ ಜಿಯೊಗ್ರಫಿಕ್ ‌ ಪತ್ರಿಕೆಯ ಆಗಸ್ಟ್‌ 1970 ಸಂಚಿಕೆಯ ವಿಶೇಷ ಪುರವಣಿಯ ರೂಪದಲ್ಲಿ, ಬಾನಿ ನ ನಕ್ಷತ್ರಪುಂಜಗಳನ್ನು ನಿರೂಪಿಸಿದ ಎರಡು ಬದಿಯ ದೊಡ್ಡ ನಕ್ಷೆ. 1957 ಡಿಸೆಂಬರ್‌ ಸಂಚಿಕೆಯ ವಿಶೇಷ ಪುರವಣಿಯಲ್ಲಿ ಎ ಮ್ಯಾಪ್‌ ಆಫ್‌ ದಿ ಹೆವೆನ್ಸ್ ‌ ರೂಪದಲ್ಲಿ ಪೂರ್ವಿಕ ನಕ್ಷೆ. 2001 - ಪ್ರಸ್ತುತ ಆವೃತ್ತಿ (ಟಿರಿಯಾನ್), 2007ರಲ್ಲಿ ಪುನರ್ಮುದ್ರಣ. ಸಿನೊಟ್‌, ರೊಜರ್‌ ಡಬ್ಲ್ಯೂ ಮತ್ತು ಪೆರಿಮನ್‌, ಮೈಕಲ್‌ ಎ.ಸಿ. (1997) ಮಿಲೆನಿಯಮ್‌ ಸ್ಟಾರ್‌ ಅಟ್ಲಾಸ್‌ , ಇಪಾಕ್‌ 2000.0, ಸ್ಕೈ ಪಬ್ಲಿಷಿಂಗ್‌ ಕಾರ್ಪೊರೇಷನ್‌, ಕೇಂಬ್ರಿಡ್ಜ್‌, ಮ್ಯಾಸಚ್ಯೂಸೆಟ್ಸ್‌, ಯು.ಎಸ್‌.ಎ., ಹಾಗೂ ಯುರೋಪಿಯನ್‌ ಸ್ಪೇಸ್‌ ಏಜೆನ್ಸಿ (), , ನೂರ್ಡ್ವಿಜ್ಕ್‌, ನೆದರ್ಲೆಂಡ್ಸ್‌. ಉಪಶೀರ್ಷಿಕೆ: " - ‌ ". 3 ಸಂಪುಟಗಳು, ದೃಢ ರಕ್ಷಾಪುಟ ಆವೃತ್ತಿ, ದೃಢಕವಚ ಲಕೋಟೆ, ಸೆಟ್‌ 0-933346-84-0. ಸಂಪುಟ 1, 0-8 ಆವರ್ಸ್‌ (ರೈಟ್‌ ಅಸೆನ್ಷನ್‌), 0-933346-81-6 ದೃಢ ರಕ್ಷಾಪುಟ ಆವೃತ್ತಿ; ಸಂಪುಟ 2, 8-16 ಆವರ್ಸ್‌, 0-933346-82-4 ದೃಢ ರಕ್ಷಾಪುಟ ಆವೃತ್ತಿ; ಸಂಪುಟ 3, 16-24 ಆವರ್ಸ್‌, 0-933346-83-2 ದೃಢ ರಕ್ಷಾಪುಟ ಆವೃತ್ತಿ. ಮೃದು ರಕ್ಷಾಪುಟ ಆವೃತ್ತಿಯೂ ಲಭ್ಯ. ಸಪ್ಲೆಮೆಂಟಲ್‌ ಸೆಪರೇಟ್‌ ಪರ್ಚೇಸಬಲ್‌ ಕೊಆರ್ಡಿನೇಟ್‌ ಗ್ರಿಡ್ ಟ್ರಾನ್ಸ್ಪರೆಂಟ್‌ ಒವರ್ಲೇಸ್‌. ಸಪ್ಲೆಮೆಂಟಲ್‌ ಸೆಪರೇಟ್‌ ಪರ್ಚೇಸಬಲ್‌ ಕೊಆರ್ಡಿನೇಟ್‌ ಗ್ರಿಡ್ ಟ್ರಾನ್ಸ್ಪರೆಂಟ್‌ ಒವರ್ಲೇಸ್‌. ಟಿರಿಯೊನ್‌, ವಿಲ್‌; ಮತ್ತು ಇತರರು. (1987) ಯುರೆನೊಮಿಟ್ರಿಯಾ 2000.0 , ವಿಲ್ಮನ್‌-ಬೆಲ್‌, ಇನ್ಕಾರ್ಪೊರೆಟೆಡ್‌., ರಿಚ್ಮಂಡ್‌, ವರ್ಜಿನಿಯಾ, ಯು.ಎಸ್‌.ಎ., 3 ಸಂಪುಟಗಳು, ದೃಢ ರಕ್ಷಾಪುಟ ಆವೃತ್ತಿ. ಸಂಪುಟ. 1 (1987): "ದಿ ನಾರ್ದರ್ನ್ ಹೆಮಿಸ್ಫಿಯರ್ ಟು −6o", - ಲೇಖಕರು: ವಿಲ್‌ ಟಿರಿಯೊನ್‌, ಬ್ಯಾರಿ ರಪಪೊರ್ಟ್‌ ಮತ್ತು ಜಾರ್ಜ್‌ ಲೊವಿ, 0-943396-14- ದೃಢ ರಕ್ಷಾಪುಟ ಆವೃತ್ತಿ, ಮುದ್ರಿತ ಫಲಕಗಳು (ನೀಲಿ). ಸಂಪುಟ. 2 (1988): "ದಿ ಸದರ್ನ್‌ ಹೆಮಿಸ್ಫಿಯರ್‌ +6o", - ಲೇಖಕರು: ವಿಲ್‌ ಟಿರಿಯೊನ್‌, ಬ್ಯಾರಿ ರಪಪೋರ್ಟ್‌ ಮತ್ತು ಜಾರ್ಜ್‌ ಲೊವಿ, 0-943396-15-8 ದೃಢ ರಕ್ಷಾಪುಟ ಆವೃತ್ತಿ, ಮುದ್ರಿತ ಫಲಕಗಳು (ನೀಲಿ). ಸಂಪುಟ 3 (1993) - ಪ್ರತ್ಯೇಕವಾಗಿ ಸೇರಿಸಲಾದ ಕೃತಿ: ದಿ ಡೀಪ್‌ ಸ್ಕೈ ಫೀಲ್ಡ್‌ ಗೈಡ್‌ ಟು ಯುರೆನೊಮಿಟ್ರಿಯಾ 2000.0 , ಲೇಖಕರು- ಮರೆ ಕ್ರಗಿನ್‌, ಜೇಮ್ಸ್‌ ಲುಸಿಕ್‌ ಮತ್ತು ಬ್ಯಾರಿ ರಪಪೋರ್ಟ್‌, 0-943396-38-7 ದೃಢ ರಕ್ಷಾಪುಟ ಆವೃತ್ತಿ, ಮುದ್ರಿತ ಫಲಕಗಳು (ನರೆ ಬಣ್ಣ). 2ನೆಯ ಆವೃತ್ತಿ 2001 (ಕಪ್ಪು ಅಥವಾ ಮಬ್ಬಾದ ಹಿನ್ನೆಲೆ) ಮೂರು ಸಂಪುಟಗಳ ಸಂಗ್ರಹ – ಸಂಪುಟ. 1: ಯುರೆನೊಮಿಟ್ರಿಯಾ 2000.0 ಡೀಪ್‌ ಸ್ಕೈ ಅಟ್ಲಾಸ್‌ , ಲೇಖಕರು ವಿಲ್‌ ಟಿರಿಯಾನ್‌, ಬ್ಯಾರಿ ರಪಪೊರ್ಟ್‌, ಮತ್ತು ವಿಲ್‌ ರೆಮಕ್ಲಸ್‌, 978-0-943396-71-2 ದೃಢ ರಕ್ಷಾಪುಟ ಆವೃತ್ತಿ, ಮುದ್ರಿತ ಫಲಕಗಳು (ನೀಲಿ ಅಂಚುಗಳು); ಸಂಪುಟ. 2: ಯುರೆನೊಮಿಟ್ರಿಯಾ 2000.0 ಡೀಪ್‌ ಸ್ಕೈ ಅಟ್ಲಾಸ್‌ , ಲೇಖಕರು ವಿಲ್‌ ಟಿರಿಯೊನ್‌, ಬ್ಯಾರಿ ರಪಪೊರ್ಟ್‌ ಮತ್ತು ವಿಲ್‌ ರೆಮಾಕ್ಲಸ್‌, 978-0-943396-72-9 ದೃಢ ರಕ್ಷಾಪುಟ ಆವೃತ್ತಿ, ಮುದ್ರಿತ ಫಲಕಗಳು (ಹಸಿರು ಅಂಚು); ಸಂಪುಟ. 3: ಯುರೆನೊಮಿಟ್ರಿಯಾ 2000.0 ಡೀಪ್‌ ಸ್ಕೈ ಫೀಲ್ಡ್‌ ಗೈಡ್‌ ಲೇಖಕರು ಮರೆ ಕ್ರಗಿನ್‌ ಮತ್ತು ಎಮಿಲ್‌ ಬೊನನೊ, 978-0-943396-73-6, ದೃಢ ರಕ್ಷಾ ಪುಟ ಆವೃತ್ತಿ, ಮುದ್ರಿತ ಫಲಕಗಳು (ತಿಳೀ ಹಸಿರು). ಟಿರಿಯೊನ್‌, ವಿಲ್‌ ಮತ್ತು ಸಿನೊಟ್‌, ರೊಜರ್‌ ಡಬ್ಲ್ಯೂ. (1998) ಸ್ಕೈ ಅಟ್ಲಾಸ್‌ 2000.0 , ವಿವಿಧ ಆವೃತ್ತಿಗಳು. 2ನೆಯ ಡಿಲಕ್ಸ್‌ ಆವೃತ್ತಿ, ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌, ಕೇಂಬ್ರಿಡ್ಜ್‌, ಇಂಗ್ಲೆಂಡ್‌ (ಯು.ಕೆ.). ಉತ್ತರ ಬಾನಿನ ಗೋಳಾರ್ಧ ಮತ್ತು ಉತ್ತರ ಪರಿಧ್ರುವ ಪ್ರದೇಶ : ಬೆಕ್ವರ್‌, ಆಂಟೊನಿನ್‌. (1962) ಅಟ್ಲಾಸ್‌ ಬೊರಿಯಲಿಸ್‌ 1950.0 , ಜೆಕೊಸ್ಲೊವಾಕ್‌ ಅಕ್ಯಾಡೆಮಿ ಆಫ್‌ ಸೈಯನ್ಸಸ್‌ ( ), ಪ್ರಾಗ್‌, ಜೆಕೊಸ್ಲೊವಾಕಿಯಾ, 1ನೆಯ ಆವೃತ್ತಿ, ಎಲಿಫೆಂಟ್‌ ಫೊಲಿಯೊ ದೃಢ ರಕ್ಷಾಪುಟ 'ಸ್ಮಾಲ್‌ ಟ್ರಾನ್ಸ್ಪರೆನ್ಸಿ ಒವರ್ಲೆ ಕೊಆರ್ಡಿನೇಟ್‌ ಗ್ರಿಡ್‌ ಸ್ಕ್ವೇರ್‌ ಅಂಡ್‌ ಸೆಪರೇಟ್‌ ಪೇಪರ್‌ ಮ್ಯಾಗ್ನಿಟ್ಯೂಡ್‌ ಲೆಜೆಂಡ್‌ ರೂಲರ್‌' ಒಂದಿಗೆ. 2ನೆಯ ಆವೃತ್ತಿ 1972 ಮತ್ತು 1978 ಮರುಮುದ್ರಣ, ಜೆಕೊಸ್ಲೊವಾಕ್‌ ಅಕ್ಯಾಡೆಮಿ ಆಫ್‌ ಸೈಯನ್ಸ್‌ ( ), ಪ್ರಾಗ್‌, ಜೆಕೊಸ್ಲೊವಾಕಿಯಾ, ಮತ್ತು ಸ್ಕೈ ಪಬ್ಲಿಷಿಂಗ್ ಕಾರ್ಪೊರೇಷನ್‌, ಕೇಂಬ್ರಿಡ್ಜ್‌, ಮ್ಯಾಸಚ್ಯೂಸೆಟ್ಸ್‌, ಯು.ಎಸ್‌.ಎ., 0-933346-01-8 'ಒವರ್ಸೈಜ್ಡ್‌ ಫೊಲಿಯೊ ಸಾಫ್ಟ್‌ಕವರ್‌ ಸ್ಪೈರಲ್‌ ಬೌಂಡ್‌ ವಿತ್‌ ಟ್ರಾನ್ಸ್ಪರೆನ್ಸಿ ಒವರ್ಲೆ ಕೊಆರ್ಡಿನೇಟ್‌ ಗ್ರಿಡ್‌ ರೂಲರ್‌' ಒಂದಿಗೆ. ವಿಷುವದೀಯ, ಗ್ರಹಣದ ಮತ್ತು ರಾಶಿಚಕ್ರೀಯ ಬಾನು : ಬೆಕ್ವಾರ್, ಆಂಟೊನಿನ್‌. (1958) ಅಟ್ಲಾಸ್‌ ಎಲಿಪ್ಟಿಕಾಲಿಸ್‌ 1950.0 , ಜೆಕೊಸ್ಲೊವಾಕ್‌ ಅಕ್ಯಾಡೆಮಿ ಆಫ್‌ ಸೈಯನ್ಸಸ್‌ ( ), ಪ್ರಾಗ್‌, ಜೆಕೊಸ್ಲೊವಾಕಿಯಾ, 1ನೆಯ ಅವೃತ್ತಿ, ಎಲಿಫೆಂಟ್‌ ಫೊಲಿಯೊ ಹಾರ್ಡ್‌ಕವರ್‌, 'ಸ್ಮಾಲ್‌ ಟ್ರಾನ್ಸ್ಪರೆನ್ಸಿ ಒವರ್ಲೆ ಕೊಆರ್ಡಿನೇಟ್‌ ಗ್ರಿಡ್‌ ಸ್ಕ್ವೇರ್‌ ಅಂಡ್‌ ಸೆಪರೇಟ್‌ ಪೇಪರ್‌ ಮ್ಯಾಗ್ನಿಟ್ಯೂಡ್‌ ಲೆಜೆಂಡ್‌ ರೂಲರ್‌' ಒಂದಿಗೆ. 2ನೆಯ ಆವೃತ್ತಿ 1974, ಜೆಕೊಸ್ಲೊವಾಕ್‌ ಅಕ್ಯಾಡೆಮಿ ಆಫ್‌ ಸೈಯನ್ಸಸ್‌ ( ), ಪ್ರಾಗ್‌, ಜೆಕೊಸ್ಲೊವಾಕಿಯಾ ಹಾಗೂ ಸ್ಕೈ ಪಬ್ಲಿಷಿಂಗ್‌ ಕಾರ್ಪೊರೇಷನ್‌, ಕೇಂಬ್ರಿಡ್ಜ್‌, ಮ್ಯಾಸಚ್ಯೂಸೆಟ್ಸ್‌, ಯು.ಎಸ್‌.ಎ, 'ಒವರ್ಸೈಜ್ಡ್‌ ಫೊಲಿಯೊ ಸಾಫ್ಟ್‌ಕವರ್‌ ಸ್ಪೈರಲ್‌ ಬೌಂಡ್‌ ವಿತ್‌ ಟ್ರಾನ್ಸ್ಪರೆನ್ಸಿ ಒವರ್ಲೆ ಕೊಆರ್ಡಿನೇಟ್‌ ಗ್ರಿಡ್‌ ರೂಲರ್‌' ಒಂದಿಗೆ. ದಕ್ಷಿಣ ಬಾನಿನ ಗೋಳಾರ್ಧ ಮತ್ತು ದಕ್ಷಿಣ ಪರಿಧ್ರುವ ಪ್ರದೇಶ : ಬೆಕ್ವಾರ್‌, ಆಂಟೊನಿನ್‌. ಅಟ್ಲಾಸ್‌ ಆಸ್ಟ್ರಲಿಸ್‌ 1950.0 , ಜೆಕೊಸ್ಲೊವಾಕ್‌ ಅಕ್ಯಾಡೆಮಿ ಆಫ್‌ ಸೈಯನ್ಸಸ್‌ ( ), ಪ್ರಾಗ್‌, ಜೆಕೊಸ್ಲೊವಾಕಿಯಾ, 1ನೆಯ ಆವೃತ್ತಿ, , 'ಸ್ಮಾಲ್‌ ಟ್ರಾನ್ಸ್ಪರೆನ್ಸಿ ಒವರ್ಲೆ ಕೊಆರ್ಡಿನೇಟ್‌ ಗ್ರಿಡ್‌ ಸ್ಕ್ವೇರ್‌ ಅಂಡ್‌ ಸೆಪರೇಟ್‌ ಪೇಪರ್‌ ಮ್ಯಾಗ್ನಿಟ್ಯೂಡ್‌ ಲೆಜೆಂಡ್‌ ರೂಲರ್‌' ಒಂದಿಗೆ. 2ನೆಯ ಆವೃತ್ತಿ, ಜೆಕೊಸ್ಲೊವಾಕ್‌ ಅಕ್ಯಾಡೆಮಿ ಆಫ್‌ ಸೈಯನ್ಸಸ್‌ ( ), ಪ್ರಾಗ್‌, ಜೆಕೊಸ್ಲೊವಾಕಿಯಾ, ಹಾಗೂ ಸ್ಕೈ ಪಬ್ಲಿಷಿಂಗ್‌ ಕಾರ್ಪೊರೇಷನ್‌, ಕೇಂಬ್ರಿಡ್ಜ್‌, ಮ್ಯಾಸಚ್ಯೂಸೆಟ್ಸ್‌, ಯು.ಎಸ್‌.ಎ., 'ಒವರ್ಸೈಜ್ಡ್‌ ಫೊಲಿಯೊ ಸಾಫ್ಟ್‌ಕವರ್‌ ಸ್ಪೈರಲ್‌ ಬೌಂಡ್‌ ವಿತ್‌ ಟ್ರಾನ್ಸ್ಪರೆನ್ಸಿ ಒವರ್ಲೆ ಕೊಆರ್ಡಿನೇಟ್‌ ಗ್ರಿಡ್‌ ರೂಲರ್‌' ಒಂದಿಗೆ. === === ಬೆಕ್ವಾರ್‌, ಆಂಟೊನಿನ್‌. (1959) ಅಟ್ಲಾಸ್‌ ಸೀಲಿ ಕ್ಯಾಟಲಾಗ್‌ 1950.0 , ಪ್ರಾಗ್‌, 1960 ಪ್ರಾಗ್‌. 1964ರಲ್ಲಿ ಅಟ್ಲಾಸ್ ಆಫ್‌ ದಿ ಹೆವೆನ್ಸ್‌ - ಕ್ಯಾಟಲಾಗ್‌ 1950.0 ಎಂದು ಮುದ್ರಿತವಾಯಿತು, ಸ್ಕೈ ಪಬ್ಲಿಷಿಂಗ್‌ ಕಾರ್ಪೊರೇಷನ್‌, ಕೇಂಬ್ರಿಡ್ಜ್‌, ಮ್ಯಾಸಚ್ಯೂಸೆಟ್ಸ್‌, ಯು.ಎಸ್‌.ಎ. ಹರ್ಷ್‌ಫೀಲ್ಡ್‌, ಅಲಾನ್‌ ಮತ್ತು ಸಿನೊಟ್‌, ರೊಜರ್‌ ಡಬ್ಲ್ಯೂ. (1982) ಸ್ಕೈ ಕ್ಯಾಟಲಾಗ್‌ 2000.0 , ಕೇಂಬ್ರಿಡ್ಜ್‌ ಯುನಿವರ್ಸಿಟಿ ಪ್ರೆಸ್‌ ಹಾಗೂ ಸ್ಕೈ ಪಬ್ಲಿಷಿಂಗ್‌ ಕಾರ್ಪೊರೇಷನ್‌, 1ನೆಯ ಆವೃತ್ತಿ, 2 ಸಂಪುಟಗಳು. 81017975 ಎರಡೂ ಸಂಪುಟಗಳು ಹಾಗೂ 83240310 ಸಂಪುಟ 1. "ವೊಲ್ಯುಮ್‌ 1: ಸ್ಟಾರ್ಸ್‌ ಟು ಮ್ಯಾಗ್ನಿಟ್ಯೂಡ್‌ 8.0", 0-521-24710-1 (ಕೇಂಬ್ರಿಡ್ಜ್‌) ಮತ್ತು 0-933346-35-2 (ಸ್ಕೈ) ದೃಢ ರಕ್ಷಾಪುಟ, 0-933346-34-4 (ಸ್ಕೈ) ಮೃದು ರಕ್ಷಾಪುಟ. ಸಂಪುಟ. 2 (1985) - "ವೊಲ್ಯುಮ್‌ 2: ಡಬಲ್‌ ಸ್ಟಾರ್ಸ್‌, ವೇರಿಯಬಲ್ ಸ್ಟಾರ್ಸ್‌, ಅಂಡ್‌ ನಾನ್‌-ಸ್ಟೆಲರ್‌ ಆಬ್ಜೆಕ್ಟ್ಸ್‌", 0-521-25818-9 (ಕೇಂಬ್ರಿಡ್ಜ್‌) ದೃಢ ರಕ್ಷಾಪುಟ, 0-521-27721-3 (ಕೇಂಬ್ರಿಡ್ಜ್‌) ಮೃದು ರಕ್ಷಾಪುಟ. 2ನೆಯ ಆವೃತ್ತಿ (1991) ಜೊತೆಗೆ, ಹೆಚ್ಚುವರಿ ಮೂರನೆಯ ಲೇಖಕ ಫ್ರಾಂಗೊಯಿ ಒಕ್ಸೆನ್ಬೇನ್‌, 2 ಸಂಪುಟಗಳು, 91026764. ಸಂಪುಟ. 1: 0-521-41743-0 (ಕೇಂಬ್ರಿಡ್ಜ್‌) ದೃಢ ರಕ್ಷಾಪುಟ (ಕಪ್ಪು ಕವಚ); 0-521-42736-3 (ಕೇಂಬ್ರಿಡ್ಜ್‌) ಮೃದು ರಕ್ಷಾಪುಟ (ಹ್ಯಾನ್ಸ್‌ ವಹ್ರೆನ್ಬರ್ಗ್‌ ಆಸ್ಟ್ರೊಫೊಟೊದೊಂದಿಗೆ ಕೆಂಪು ಅಕ್ಷರಗಳು). ಸಂಪುಟ. 2 (1999): 0-521-27721-3 (ಕೇಂಬ್ರಿಡ್ಜ್‌) ಮೃದು ರಕ್ಷಾಪುಟ ಹಾಗೂ 0-933346-38-7 (ಸ್ಕೈ) ಮೃದು ರಕ್ಷಾಪುಟ - 1985 ಆವೃತ್ತಿಯ ಪುನರ್ಮುದ್ರಣ (ಹ್ಯಾನ್ಸ್‌ ವಹ್ರೆನ್ಬರ್ಗ್‌ ಆಸ್ಟ್ರೊಫೊಟೊದೊಂದಿಗೆ ನೀಲಿ ಅಕ್ಷರಗಳ ಮುದ್ರಣ). ಯೇಲ್‌ ಯುನಿವರ್ಸಿಟಿ ಅಬ್ಸರ್ವೇಟರಿ. (1908, ಮತ್ತಿತರೆ.) ಕ್ಯಾಟಲಾಗ್‌ ಆಪ್‌ ಬ್ರೈಟ್‌ ಸ್ಟಾರ್ಸ್‌ , ನ್ಯೂ ಹಾವೆನ್‌, ಕನೆಕ್ಟಿಕಟ್‌, ಯು.ಎಸ್‌.ಎ. ಇದನ್ನು ಸಾಮಾನ್ಯವಾಗಿ "ಬ್ರೈಟ್‌ ಸ್ಟಾರ್‌ ಕ್ಯಾಟಲಾಗ್‌" ಎಂದು ಉಲ್ಲೇಖಿಸಲಾಗುತ್ತಿತ್ತು. ಐತಿಹಾಸಿಕವಾಗಿ ವಿವಿಧ ಸಂಪಾದಕರೊಂದಿಗೆ ವಿವಿಧ ಆವೃತ್ತಿಗಳಿವೆ. (ಎಲೆನ್)‌ ಡೊರಿಟ್ ಹೊಫ್ಲೀಟ್‌ ದೀರ್ಘಾವಧಿ ಸೇವೆ ಸಲ್ಲಿಸಿದ ಪರಿಶೀಲನಾ ಸಂಪಾದಕಿಯಾಗಿದ್ದರು. 1ನೆಯ ಆವೃತ್ತಿ 1908. 2ನೆಯ ಆವೃತ್ತಿ 1940 - ಲೇಖಕರು ಫ್ರ್ಯಾಂಕ್‌ ಷ್ಲೆಸಿಂಗರ್‌ ಮತ್ತು ಲೀಯಿ ಎಫ್‌. ಜೆನ್ಕಿನ್ಸ್‌. 3ನೆಯ ಆವೃತ್ತಿ (1964), 4ನೆಯ ಆವೃತ್ತಿ, 5ನೆಯ ಆವೃತ್ತಿ (1991) ಹಾಗೂ 6ನೆಯ ಆವೃತ್ತಿ (ಮರಣೋತ್ತರ ಸಂಪಾದನೆ ಇನ್ನೂ ಉಳಿದಿದೆ) ಹೊಫ್ಲೆಟ್‌. == ಬಾಹ್ಯ ಕೊಂಡಿಗಳು == ಐಎಯು: ನಕ್ಷತ್ರಪುಂಜಗಳು, ಅತ್ಯುತ್ತಮ ಗುಣಮಟ್ಟದ ನಕ್ಷೆಗಳನ್ನು ಒಳಗೊಂಡಿದೆ. ಸ್ಟಾರ್‌ ಟೇಲ್ಸ್‌ ನಕ್ಷತ್ರಪುಂಜಗಳ ಮೂಲ ಮತ್ತು ಪುರಾಣ ಸಾಹಿತ್ಯಗಳು (ಇಯಾನ್‌ ರಿಡ್ಪಾತ್‌) ನಕ್ಷತ್ರಪುಂಜಗಳ ಛಾಯಾಚಿತ್ರ ಸಂಪುಟ ಸೆಲೆಸ್ಟಿಯಾ ಉಚಿತ ತ್ರಿವಿಮಿತೀಯ ನೈಜಕಾಲಿಕ ಬಾಹ್ಯಾಕಾಶ-ಪ್ರತ್ಯನುಕರಣ () (ಉಚಿತ ಸಾಮಾನ್ಯ ಅನುಜ್ಞೆಯಡಿ ಲಭ್ಯ) ಸ್ಟೆಲರಿಯಮ್‌ ನೈಜಕಾಲಿಕ ಆಕಾಶ ಚಿತ್ರಣ ಮೂಡಿಸುವಿಕೆ ತಂತ್ರಾಂಶ () (ಉಚಿತ ಸಾಮಾನ್ಯ ಅನುಜ್ಞೆಯಡಿ ಲಭ್ಯ) ಐಎಯು ನಕ್ಷತ್ರಪುಂಜ ಅಧಿಕೃತ ಸರಹದ್ದಿನ ಬಗ್ಗೆ ಸ್ಟ್ರಾಸ್ಬರ್ಗ್‌ ಖಗೋಳವಿಜ್ಞಾನ ಮಾಹಿತಿ ಕೇಂದ್ರ ಕಡತ-ಸಂಪುಟ 2005-04-10 ವೇಬ್ಯಾಕ್ ಮೆಷಿನ್ ನಲ್ಲಿ. (ಹಳೆಯ ನಾಸಾ ಎಡಿಸಿ ( ) ಸೇವೆಯು ಇಂದು ಚಾಲನೆಯಲ್ಲಿಲ್ಲ) ಇಂಟರಾಕ್ಟಿವ್‌ ಸ್ಕೈ ಚಾರ್ಟ್ಸ್‌ 2009-02-28 ವೇಬ್ಯಾಕ್ ಮೆಷಿನ್ ನಲ್ಲಿ. (ನಕ್ಷತ್ರಗಳ ವಿಭಿನ್ನ ವಿವರಣೆಗಳು, ಐಚ್ಛಿಕ ನಕ್ಷತ್ರಪುಂಜ ರೇಖೆ ಸಹಿತ, ಇಡೀ ಬಾನಿನಲ್ಲಿ ಸಾಗಲು ಅವಕಾಶ ನೀಡುತ್ತದೆ) ನಕ್ಷತ್ರಪುಂಜಗಳ ಪಟ್ಟಿ 2005-08-29 ವೇಬ್ಯಾಕ್ ಮೆಷಿನ್ ನಲ್ಲಿ. ಆನ್ಲೈನ್‌ ಟೆಕ್ಸ್ಟ್‌: ಹೈಜಿನಸ್‌, ಆಸ್ಟ್ರೊನೊಮಿಕಾ, ಮೇರಿ ಗ್ರ್ಯಾಂಟ್‌ ಅವರಿಂದ ಅನುವಾದ ಮಾಡಲಾಯಿತು ಗ್ರೆಕೊ-ರೋಮನ್‌ ನಕ್ಷತ್ರಪುಂಜ ಕಲ್ಪನೆಗಳು. ನೀವ್‌ ಪ್ಲ್ಯಾನೆಟರಿಯಮ್‌ ನಕ್ಷತ್ರಗಳು ಮತ್ತು ಗ್ರಹಗಳ ವಾಸ್ತವಿಕ ಚಲನವಲನವನ್ನು ಪ್ರದರ್ಶಿಸುವ, ಪರಸ್ಪರ ಕಾರ್ಯ ನಡೆಸುವ ತಾರಾಲಯ. ಆಡಿಯೊ - ಕೇನ್‌/ಗೇ (2009) ಆಸ್ಟ್ರೊನೊಮಿ ಕ್ಯಾಸ್ಟ್‌ ನಕ್ಷತ್ರಪುಂಜಗಳು ಬ್ಯಾಬಿಲೊನಿಯನ್‌ ನಕ್ಷತ್ರಪುಂಜಗಳ ಪುನರ್ನಿರ್ಮಿತ ನಕ್ಷೆಗಾಗಿ, ಗ್ಯಾವಿನ್‌ ವೈಟ್‌ ರಚಿಸಿದ 'ಬ್ಯಾಬಿಲೊನಿಯನ್‌ ಸ್ಟಾರ್‌-ಮ್ಯಾಪ್‌' ನೋಡಿ. 2011-05-15 ವೇಬ್ಯಾಕ್ ಮೆಷಿನ್ ನಲ್ಲಿ.