ನಟಭೈರವಿಕರ್ನಾಟಕ ಸಂಗೀತಪದ್ಧತಿಯ ಮೇಳಕರ್ತ ರಾಗಗಳಲ್ಲಿ ಇಪ್ಪತ್ತನೆಯದು.ಮುತ್ತುಸ್ವಾಮಿ ದೀಕ್ಷಿತರು ಇದನ್ನು ನಾರಿ ರೀತಿಗೌಳ ಎಂದು ಹೆಸರಿಸಿದ್ದಾರೆ. ಹಿಂದೂಸ್ತಾನಿ ಸಂಗೀತ ಪದ್ಧತಿಯಲ್ಲಿ ಅಸಾವರಿ ಥಾಟ್‍ಗೆ ಸಮಾನವಾಗಿದೆ. == ರಾಗ ಲಕ್ಷಣ ಮತ್ತು ಸ್ವರೂಪ == ಇದು ಚತುರ್ಥ "ವೇದ" ಚಕ್ರದ ದ್ವಿತೀಯ ರಾಗ.ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅವುಗಳು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೦ ಪ ದ೧ ನಿ೨ ಸ' ಅವರೋಹಣ ಸ' ನಿ೨ ದ೧ ಪ ಮ೧ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದು ಕೇಳುಗರಲ್ಲಿ ಭಕ್ತಿರಸವನ್ನು ಸ್ಪುರಿಸುವಂತೆ ಮಾಡುವ ರಾಗವಾಗಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಹಲವಾರು ಜನ್ಯ ರಾಗಗಳಿದ್ದು ಹೆಚ್ಚು ಪ್ರಚಲಿತದಲ್ಲಿರುವ ರಾಗಗಳು ಭೈರವಿ, ಆನಂದಭೈರವಿ, ಸಾರಮತಿ, ಮುಂತಾದವುಗಳು. == ಜನಪ್ರಿಯ ರಚನೆಗಳು == ಈ ರಾಗದಲ್ಲಿ ಜನಪ್ರಿಯ ರಚನೆಗಳು == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ಟ್ಯೂಬ್‍ನಲ್ಲಿ ನಟಭೈರವಿ ರಾಗ,ವಾಯೊಲಿನ್ ವಾದನ