ನಟ್ () ಒಂದು ಸುರುಳಿಯಾಕಾರದ ಏಣು(ಥ್ರೆಡೆಡ್) ರಂಧ್ರವಿರುವ ಭದ್ರಪಡಿಸುವ ಸಾಧನ(). ನಟ್ ಗಳು ಹೆಚ್ಚಾಗಿ ಯಾವಾಗಲೂ ಬೋಲ್ಟ್() ಜೊತೆಗಿನ ಸೇರಿ ಬಹಳ ಭಾಗಗಳ ಜೋಡಣೆಗೆ ಬಳಕೆಯಾಗುತ್ತದೆ. ಎರಡು ಭಾಗಗಳು ಅವುಗಳ ಏಣಿನ ಘ‍ರ್ಷಣೆಯ, ಬೋಲ್ಟಿನ ಸ್ವಲ್ಪ ಎಳೆತ ಮತ್ತು ಭಾಗಗಳ ಒತ್ತಡದ ಸಂಯೋಜನೆಯೊಂದಿಗೆ ಒಟ್ಟಿಗೆ ಸೇರಿಸಲ್ಪಡುತ್ತವೆ. ಕಂಪಿಸುವ ಮತ್ತು ತಿರುಗುವ ಉಪಯೋಗಗಳಲ್ಲಿ ನಟ್ ಗಳು ಕಳಚಿಕೊಳ್ಳಬಹುದು. ಇಂತಹ ಸಂಧರ್ಬದಲ್ಲಿ ಬಗೆಬಗೆಯ ಬಂಧಿಸುವ ಯಾಂತ್ರಿಕ ರಚನೆಗಳನ್ನು ಬಳಸಬಹುದು: ಅಂಟು, ಸುರಕ್ಷತಾ ಪಿನ್ಗಳು, ಲಾಕ್ ತಂತಿ(), ನೈಲಾನ್ ಒಳಪಡಿಸುವಿಕೆ, ಅಂಡಾಕಾರದ ಸುರುಳಿಯಾಕಾರದ ಏಣುಗಳು. ಬೋಲ್ಟ್ ನ ತಲೆಯಲ್ಲಿ ಇರುವಂತೆಯೇ ಷಡ್ಭುಜಾಕೃತಿಯ() ಆಕಾರವು ಅತೀ ಸಾಮಾನ್ಯ. ಬೋಲ್ಟ್ ನ ಆರು ಬದಿಗಳು ಉಪಕರಣಗಳ ಹಿಡಿತಕ್ಕೆ ಉತ್ತಮವಾದ ಜಾಗವನ್ನು ಒದಗಿಸುತ್ತವೆ. ಆದರೆ ಹೆಚ್ಚು ಮೂಲೆಗಳು ದುಂಡಾಗಿಸುವಿಕೆಯಲ್ಲಿ ದುರ್ಬಲವಾಗಿರುತ್ತವೆ. ಮುಂದಿನ ಬದಿಯನ್ನು ಪಡೆಯಲು ಇದು ಬರೀ ೧/೬ ಭಾಗದ ಆರ್ವತನೆಯನ್ನು ತೆಗೆದುಕೊಳ್ಳುತ್ತದೆ ಮತ್ತು ಹಿಡಿತವು ಸೂಕ್ತವಾಗಿರುತ್ತದೆ. ಅದಾಗ್ಯೂ ೬ಕ್ಕಿಂತ ಹೆಚ್ಚು ಬದಿಗಳಿರುವ ಬಹುಭುಜಾಕೃತಿಗಳು ಅಗತ್ಯಕ್ಕೆ ತಕ್ಕ ಆವರ್ತನವನ್ನು ನೀಡುವುದಿಲ್ಲ ಮತ್ತು ಆರಕ್ಕಿಂತ ಕಡಿಮೆ ಬದಿಗಳಿರುವ ಬಹುಭುಜಾಕೃತಿಗಳು ಒಂದು ಸಂಪೂರ್ಣ ಸುತ್ತು ಸುತ್ತಲು ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತದೆ. ಬೆರಳಿನ ಹೊಂದಾಣಿಕೆಗೆ ರೆಕ್ಕೆ ನಟ್ಗಳು( ) ಮತ್ತು ಸಿಗದಿರುವ ಜಾಗಗಳಿಗೆ ಬಂಧಿತ ನಟ್ಗಳು( ) ಮುಂತಾದ ಇತರೆ ವಿಶೇಷ ಆಕೃತಿಗಳು ಕೆಲವು ಅಗತ್ಯಗಳಿಗಾಗಿಯೇ ಇವೆ. ನಟ್‍ಗಳು ಸಂಬಂದಪಟ್ಟ ಬೋಲ್ಟ್ ಗಳಿಗೆ ಜೊತೆಯಾಗುವಂತೆ ಬಲ ದರ-ನಿರ್ಧರಣೆ( )ಗಳೊಂದಿಗೆ ಶ್ರೇಯಾಂಕಿತವಾಗಿರುತ್ತವೆ. ಉದಾಹರಣೆಗೆ, ಒಂದು ಐಎಸ್ಒ ಪ್ರಾಪರ್ಟಿ ವರ್ಗ ೧೦ರ ನಟ್ ಒಂದು ಐಎಸ್ಒ ಪ್ರಾಪರ್ಟಿ ವರ್ಗ ೧೦.೯ರ ಬೋಲ್ಟ್ ಪ್ರೂಫ್ ಬಲ ಹೊರೆ ಕಳಚಹಿಕೊಳ್ಳದಂತೆ ಬೆಂಬಲಿಸುವುದು. ಇದೇ ರೀತಿ ಪ್ರೂಫ್ ಬಲದ( ) ಒಂದು ಎಸ್ಎಇ ವರ್ಗ ೫ ಬೋಲ್ಟ್ ನ್ನು ಒಂದು ಎಸ್ಎಇ ೫ ನಟ್ ಬೆಂಬಲಿಸುವುದು. ಮನೆ ಬಳಕೆಯ ವಸ್ತು( ) ಆವೃತ್ತಿಗಳಿಂದ ಹಿಡಿದು ವಿಶೇಷವಾಗಿರುವ ಕೈಗಾರಿಕೆಗಳವರೆಗೆ ನಿರ್ದಿಷ್ವ‍ವಾಗಿ ವಿನ್ಯಾಸಗೊಳಿಸಲ್ಪಟ್ಟಿರುವ() ವಿವಿಧ ತಾಂತ್ರಿಕ ಮಾನಕ( )ಗಳ ಅವಶ್ಯಕತೆಗಳಿಗೆ ತಕ್ಕಂತೆ ಬಹಳ ವಿಧವಾದ ನಟ್ ಗಳು ಇವೆ. == ವಿಧಗಳು == == ಲಾಕ್ ನಟ್ () == ಕ್ಯಾಸ್ಟೆಲೇಟೆಡ್ ನಟ್ ( ) ಡಿಸ್ಟೋರ್ಟೆಡ್ ಥ್ರೆಡ್ ಲಾಕ್ ನಟ್ ( ) ಸೆಂಟರ್ ಲಾಕ್ ನಟ್ ( ) ಎಲಿಪ್ಟಿಕಲ್ ಆಫ್ಸೆಟ್ ಲಾಕ್ ನಟ್ ( ) ಟಾಪ್ ಲಾಕ್ ನಟ್ ( ) ಇಂಟರ್ಫೇಸಿಂಗ್ ಥ್ರೆಡ್ ನಟ್ ( ) ಟೇಪರ್ಡ್ ಥ್ರೆಡ್ ನಟ್ ( ) ಜಾಮ್ ನಟ್ ( ) ಜೆಟ್ ನಟ್ ( ) ಕೆಪ್ಸ್ ನಟ್ ( ) ನೈಲಾಕ್ ಪ್ಲೇಟ್ ನಟ್ ( ) ಪಾಲಿಮರ್ ಇನ್ಸರ್ಟ್ ನಟ್ ( ) ಸೆರ್ರೇಟೆಡ್ ಫೇಸ್ ನಟ್ ( ) ಸೆರ್ರೇಟೆಡ್ ಫ್ಲಾಂಜ್ ( ) ಸ್ಪೀಡ್ ನಟ್ ( ) ಸ್ಪ್ಲಿಟ್ ಬೀಮ್ ನಟ್ ( ) == ಷಡ್ಭುಜಾಕೃತಿಯ ಮೆಟ್ರಿಕ್ ನಟ್‍ಗಳ ಪ್ರಮಾಣೀಕೃತ ಗಾತ್ರಗಳು == ಗಮನಿಸಿ, ವ್ರೆಂಚ್ ಗಾತ್ರಗಳು ಕೈಗಾರಿಕಾ ಮಾನದಂಡಗಳಿಗಿಂತಾ ವಿಭಿನ್ನವಾಗಿರುತ್ತವೆ. ಉದಾಹರಣೆಗೆ, ವ್ರೆಂಚ್ ಗಾತ್ರದ ಭದ್ರಕಗಳನ್ನು ಜಪಾನಿನವರು ತಯಾರಿಸುವ ಕಾರುಗಳಲ್ಲಿ ಜೆಐಎಸ್ ಮಾನದಂಡಗಳನ್ನು ಅನುಸರಿಸಲು ಉಪಯೋಗಿಸುತ್ತಾರೆ. == ಷಡ್ಭುಜಾಕೃತಿಯ ಎಸ್ಎಈ ನಟ್‍ಗಳ ಪ್ರಮಾಣೀಕೃತ ಗಾತ್ರಗಳು == == ವರ್ಗೀಕರಣಗಳು == == ಸ್ವಯಂ ಬಿಡಿಬಿಡಿಯಾಗುವುದನ್ನು ತಡೆಯಲು ಎರಡು ನಟ್ ಗಳ ಉಪಯೋಗ == ಸಾಮಾನ್ಯ ಉಪಯೋಗದಲ್ಲಿ ಒಂದು ನಟ್ ಮತ್ತು ಬೋಲ್ಟ್ ನ ಜೋಡಣೆಯು ಒಟ್ಟಿಗೆ ಇರುತ್ತದೆ ಏಕೆಂದರೆ, ಬೋಲ್ಟ್ ಪೂರ್ವ ಭಾರ ಎಂದು ಕರೆಯುವ ನಿರಂತರ ಕರ್ಷಕ ಬಿಗಿತ( )ಕ್ಕೆ ಒಳಪಟ್ಟಿರುತ್ತದೆ. ಪೂರ್ವ ಭಾರವು ನಟ್ ನ ಏಣು(ಥ್ರೆಡ್) ಗಳನ್ನು ಬೋಲ್ಟ್ ನ ಏಣುಗಳಿಗೆ ವಿರುದ್ಧವಾಗಿ ಮತ್ತು ನಟ್ ನ ಮುಖವನ್ನು ಬೇರಿಂಗ್ ನ ಮೆಲ್ಮೈ ಗೆ ವಿರುದ್ಧವಾಗಿ ಸ್ಥಿರ ಬಲ()ದಿಂದ ಎಳೆಯುತ್ತದೆ. ಹಾಗಾಗಿ ನಟ್ ಈ ಮೆಲ್ಮೈಗಳ ನಡುವಿನ ಘರ್ಷಣೆಯಿಂದ() ಹೊರಬರದೆ ತಿರುಗಲು ಸಾದ್ಯವಿಲ್ಲ. ಒಂದು ವೇಳೆ ಜೋಡಣೆಯು ಕಂಪನಕ್ಕೆ() ಒಳಪಟ್ಟರೆ ಚಲನೆಯ ಪ್ರತೀ ಆವರ್ತನದಲ್ಲೂ ಪೂರ್ವಭಾರದಲ್ಲಿ ಏರಿಕೆ ಮತ್ತು ಇಳಿಕೆಯಾಗುತ್ತದೆ. ಕಂಪನದ ಆವರ್ತನದ ಸಂದರ್ಭದಲ್ಲಿ ನಟ್ ನ ಬೋಲ್ಟ್ ಮತ್ತು ಬೇರಿಂಗ್ ಮೇಲ್ಮೈ ಜೊತೆಗಿನ ಸಂಪರ್ಕವನ್ನು ದೃಢವಾಗಿರಿಸಲು ಕನಿಷ್ಠ ಪೂರ್ವ ಭಾರವು ಸಾಕಾದೇ ಹೋದರೆ ನಟ್ ಸಡಿಲಗೊಳ್ಳುತ್ತದೆ. ಈ ಸಮಸ್ಯೆಯನ್ನು ತಡೆಯಲು ವಿಶೇಷ ಲಾಕಿಂಗ್ ನಟ್ಗಳು( ) ಅಸ್ತಿತ್ವದಲ್ಲಿದ್ದಿವೆ, ಆದರೆ ಕೆಲವೊಮ್ಮೆ ಎರಡನೇ ನಟ್ ಸೇರಿಸಬೇಕಾಗುತ್ತದೆ. ಈ ತಂತ್ರದ ಮೇಲೆ ಭರವಸೆ ಇಡಲು ಪ್ರತಿಯೊಂದು ನಟ್ ಅನ್ನು ಸರಿಯಾದ ತಿರುಗುಬಲ()ಕ್ಕೆ ಬಿಗಿಮಾಡಬೇಕು. ಒಳಗಿನ ನಟ್ ಅನ್ನು ಹೊರಗಿನ ನಟ್ಟಿನ ತಿರುಗುಬಲದ ಅರ್ಧದಷ್ಟು ಬಿಗಿಗೊಳಿಸಬೇಕು. ಹೊರಗಿನ ನಟ್ ಪೂರ್ತಿ ಭ್ರಮಣ ಶಕ್ತಿಯನ್ನು ಉಪಯೋಗಿಸಿಕೊಂಡು ಬಿಗಿಯಾಗುತ್ತಿರುವಾಗ ಇದನ್ನು ಒಂದು ರಿಂಚ್() ಸ್ಥಳದಲ್ಲಿ ಹಿಡಿದಿಟ್ಟುಕೊಳ್ಳಬೇಕು. ಈ ವ್ಯವಸ್ಥೆಯು ಎರಡೂ ನಟ್ ಗಳ ನಡುವೆ ಇರುವ ಬೋಲ್ಟಿನ ಚಿಕ್ಕ ಭಾಗದಲ್ಲಿ ಕರ್ಷಕ ಬಿಗಿತವನ್ನು ಉಂಟುಮಾಡಿ ಅವುಗಳನ್ನು ಪರಸ್ಪರ ನೂಕುವಂತೆ ಮಾಡುತ್ತದೆ. ಒಂದು ವೇಳೆ ಮುಖ್ಯ ಜೋಡಣೆಯು ಕಂಪಿಸಿದರೂ ನಟ್ಗಳ ಥ್ರೆಡ್ ಮತ್ತು ಬೋಲ್ಟ್ ನ ಥ್ರೆಡ್ ನಡುವಿನ ಸಂಪರ್ಕವನ್ನು ಸ್ಥಿರವಾಗಿ ಇಡುವುದರ ಮೂಲಕ ನಟ್ ಗಳ ನಡುವಿನ ಒತ್ತಡ ನಿರಂತರವಾಗಿರುತ್ತದೆ ಮತ್ತು ತಾನಾಗಿಯೇ ಸಡಿಲವಾಗುವುದನ್ನು ತಡೆಯುತ್ತದೆ. ನಟ್ ನ ಜೋಡಣೆ ಸರಿಯಾಗಿದ್ದಾಗ, ಹೊರಗಿನ ನಟ್ ಜೋಡಣೆಯು ಪೂರ್ಣ ಒತ್ತಡವನ್ನು ಸಹಿಸಿಕೊಳ್ಳುತ್ತದೆ. ಒಳಗಿನ ನಟ್ ನ ಕಾರ್ಯವು ಕೇವಲ ಒಂದು ಸ್ವಲ್ಪವೇ ಹೆಚ್ಚುವರಿ ಶಕ್ತಿಯನ್ನು ಒದಗಿಸುವುದಾಗಿದೆ ಮತ್ತು ಇದು ಬಲವಾಗಿರುವ ಅಗತ್ಯವಿಲ್ಲ. ಹಾಗಾಗಿ ಜಾಮ್ ನಟ್( ) ಎಂದು ಕರೆಯಲ್ಪಡುವ ತೆಳುವಾದ ನಟ್ ಕೂಡಾ ಬಳಸಬಹುದು. == ಇವನ್ನೂ ನೋಡಿ == ಬೋಲ್ಟೆಡ್ ಜಾಯಿಂಟ್ ( ) ಪೈಪ್ ಕ್ಯಾಪ್ ( ) ಸ್ಕ್ರೂ ಥ್ರೆಡ್ ( ) ಟ್ಯಾಪ್ () ಟ್ಯಾಪ್ಡ್ ಹೋಲ್ ( ) ಥ್ರೆಡೆಡ್ ಇನ್ಸರ್ಟ್ ( ) ವಾಷರ್ () == ಉಲ್ಲೇಖಗಳು == == ಗ್ರಂಥಸೂಚಿ == , .; , (1998), , , 978-0-8247-9977-9.