ಭಾರತೀಯ ಕಲಾ ಪ್ರಕಾರಗಳಲ್ಲಿ ಕಂಡು ಬರುವ ಒಂಭತ್ತು ರೀತಿಯ ಭಾವನೆಯ ಅಭಿವ್ಯಕ್ತಿಗಳನ್ನು ಒಟ್ಟಾಗಿ ನವರಸ ಎಂದು ಕರೆಯುತ್ತಾರೆ. ಇದನ್ನು ಮೊದಲು ಭರತಮುನಿ ತನ್ನ ನಾಟ್ಯಶಾಸ್ತ್ರ ಎಂಬ ಗ್ರಂಥದಲ್ಲಿ ದಾಖಲಿಸಿದ್ದಾನೆ. ಆಗವನು ಹೇಳಿದ್ದು ಎಂಟು ರಸಗಳ ಬಗ್ಗೆ. ಆನಂತರ ಬಂದ ಭಾಮಹನೆಂಬ ಲಾಕ್ಷಣಿಕ ಒಂಭತ್ತನೆ ರಸದ ಬಗ್ಗೆ ಹೇಳಿದ್ದಾನೆ. ನವರಸಗಳಲ್ಲಿ ಸ್ಥಾಯಿಭಾವಗಳು ಬಹಳ ಮುಖ್ಯ. ಸ್ಥಾಯಿಭಾವಗಳೆಂದರೆ ರಸಗಳ ಉತ್ಪತ್ತಿಗೆ ಕಾರಣೀಭೂತವಾಗಿ ಇರುವಂತಹವು. === ಒಂಭತ್ತು ನವರಸಗಳು/ಸ್ಥಾಯಿಭಾವಗಳು === ಶೃಂಗಾರಕ್ಕೆ ಸ್ಥಾಯಿಭಾವ ರತಿ ರುದ್ರದ ಸ್ಥಾಯಿಭಾವ ಕ್ರೋಧ ವೀರದ ಸ್ಥಾಯಿಭಾವ ಉತ್ಸಾಹ ಹಾಸ್ಯದ ಸ್ಥಾಯಿಭಾವ ಹಾಸ ಕರುಣೆಯ ಸ್ಥಾಯಿಭಾವ ಶೋಕ ಭೀಭತ್ಸದ ಸ್ಥಾಯಿಭಾವ ಜಿಗುಪ್ಸೆ ಅದ್ಭುತದ ಸ್ಥಾಯಿಭಾವ ವಿಸ್ಮಯ ಭಯಾನಕದ ಸ್ಥಾಯಿಭಾವ ಭಯ ಶಾಂತದ ಸ್ಥಾಯಿಭಾವ ಶಮ === ಕಾವ್ಯಗಳಲ್ಲಿ ನವರಸಗಳು === == ನೋಡಿ == ಜೈಮಿನಿ ಭಾರತದಲ್ಲಿ ನವರಸಗಳು == ಬಾಹ್ಯ ಸಂಪರ್ಕಗಳು == "" , () "" , . . () , . . , .