ನಾಯಕ ಜಾತಿ ಬಗ್ಗೆ ಲೇಖನಕ್ಕಾಗಿ ಇಲ್ಲಿ ನೋಡಿ. == ಪೀಠಿಕೆ == ಮೇಲ್ವಿಚಾರಕರು ತನ್ನ ಅಧೀನರಿಗೆ ಸರಿಯಾದ ಮತ್ತು ಪರಿಣಾಮಕಾರಿಯಾದ ನಾಯಕತ್ವವನ್ನು ಒದಗಿಸುವುದು ಮಹತ್ವದ ಜವಾಬ್ದಾರಿಯಾಗಿದೆ.ಸಂಸ್ಥೆಯ ಧ್ಯೇಯೋದ್ದೇಶಗಳ ಈಡೇರಿಕೆಗೆ ಪರಿಣಾಮಕಾರಿ ನಾಯಕತ್ವ ಅವಶ್ಯಕವಾಗಿದೆ. == ಅರ್ಥ == ಸೂಕ್ತ ನಿರ್ದೇಶನದಿಂದ ಅಧೀನರ ಆಲೋಚನೆ ಮತ್ತು ಕ್ರಿಯೆಗಳ ಮೇಲೆ ಪ್ರಭಾವ ಬೀರುವ ವ್ಯಕ್ತಿಯ ಸಾಮರ್ಥ್ಯವು ನಾಯಕತ್ವವಾಗಿದೆ. == ವ್ಯಾಖ್ಯೆ == ಕೂಂಟ್ಜ್ ಮತ್ತು ಓ'ಡೊನೆಲ್ರವರ ಪ್ರಕಾರ "ನಾಯಕತ್ವವು ನಿರ್ವಾಹಕ ಸಾಮರ್ಥ್ಯವಾಗಿದ್ದು,ಅಧೀನರು ನಂಬಿಕೆ ಮತ್ತು ಉದ್ಧೇಶಪೂರಕವಾಗಿ ಕೆಲಸವನ್ನು ನಿರ್ವಹಿಸುವಂತೆ ಪ್ರೋತ್ಸಾಹಿಸುವುದಾಗಿದೆ. == ನಾಯಕತ್ವದ ವಿಧಗಳು == ೧. ಸರ್ವಾಧಿಕಾರ/ನಿರಂಕುಶ ನಾಯಕತ್ವ ೨. ಪ್ರಜಾಪ್ರಭುತ್ವವಾದಿ ನಾಯಕತ್ವ/ಭಾಗವಹಿಸುವ ನಾಯಕತ್ವ ೩. ಮುಕ್ತ ಆಡಳಿತ ನಾಯಕತ್ವ ೪. ನೌಕರಶಾಹೀ ನಾಯಕತ್ವ == ಯಶಸ್ವೀ ನಾಯಕನ ಗುಣಗಳು == ೧. ಪ್ರಾಮಾಣಿಕತೆ ೨. ಅಧಿಕಾರ ನೀಡುವ ಸಾಮರ್ಥ್ಯ ೩. ಸಂವಹನ ೪. ದೃಢ ವಿಶ್ವಾಸ/ನಂಬಿಕೆ ೫. ಧೈರ್ಯ ಮತ್ತು ತಾಳ್ಮೆ ೬. ಔದಾರ್ಯತೆ ೭. ನಿರ್ವಹಣಾ ಕಲೆ ೮. ಸಕಾರಾತ್ಮಕ ಭಾವನೆ