ನಾರುಗಳು ದಾರದ ಆಕಾರವನ್ನು ಹೊಂದಿರುವ ಪದಾರ್ಥಗಳು. ನಾರುಗಳು ನೈಸರ್ಗಿಕವಾದುದವುಗಳಾಗಿ ಇರಬಹುದು ಅಥವಾ ಮಾನವ ನಿರ್ಮಿತವಾದುದವುಗಳಾಗಿ ಇರಬಹುದು. === ನೈಸರ್ಗಿಕ ನಾರುಗಳು === ಗಿಡ ಮೂಲದ ನಾರುಗಳು: ಇವು ಸಾಧಾರಣವಾಗಿ ಸೆಲ್ಲ್ಯುಲೊಸ್ ಅಥವಾ ಲಗ್ನಿನ್ಗಳಿಂದ ನಿರ್ಮಿತವಾಗುವವು. ಉದಾಹರಣೆಗೆ: ಹತ್ತಿ, ಗೋಣಿ. ಮರ ಮೂಲದ ನಾರುಗಳು: ಮರದ ಕಾಂಡಗಳಿಂದ ಲಿಗ್ನಿನ್ ಹೊಂದಿರುವ ನಾರನ್ನು ಬೇರ್ಪಡಿಸಬಹುದು. ಪ್ರಾಣಿ ಮೂಲದ ನಾರುಗಳು: ಇವು ಪ್ರಾಣಿಗಳ ತುಪ್ಪಳದಿಂದ (ಉದಾ: ಕುರಿ), ಅಥವಾ ಅಂಗಗಳಿಂದ ಪಡೆಯಲಾಗುತ್ತವೆ. ಖನಿಜ ಮೂಲದ ನಾರು: ಆಸ್ಬೆಸ್ಟೊಸ್ ಇಲ್ಲಿಯ ವರೆಗೆ ದೊರೆತಿರುವ ಏಕೈಕ ಖನಿಜ ಮೂಲದ ನಾರು. === ಮಾನವ ನಿರ್ಮಿತ ನಾರುಗಳು === ಅರೆ ಕೃತಕ ನಾರುಗಳು- ಇದನ್ನು ದೀರ್ಘ ಸರಣಿಯ ಪಾಲಿಮರ್ ಉಳ್ಳ ಕಚ್ಚಾ ಪದಾರ್ತಗಳಿಂದ ತಯಾರಿಸಲಾಗುತ್ತದೆ. ಉದಾಹರಣೆ - ರಯೊನ್ ರಸಾಯನಶಾಸ್ತ್ರದ ಪ್ರಕ್ರಿಯೆಗಳಿಂದ ಮಾನವರು ಅನೇಕ ರೀತಿಯ ನಾರುಗಳನ್ನು ತಯಾರಿಸಿದ್ದಾರೆ. ಉದಾ: ಪ್ಲಾಸ್ಟಿಕ್.