ನಿತ್ಯಮಲ್ಲಿಗೆ ಜಾಸ್ಮಿನಮ್ ಫ್ಲೆಕ್ಸೈಲ್ ಎಂಬ ಸಸ್ಯಶಾಸ್ತ್ರೀಯ ಹೆಸರನ್ನು ಹೊಂದಿರುವ ಮಲ್ಲಿಗೆಯ ಒಂದು ಪ್ರಭೇದ. ಅಸ್ಸಾಮಿನ ಹಾಗೂ ದಕ್ಷಿಣ ಭಾರತದ ಮೈದಾನದಿಂದ ಹಿಡಿದು ಸು.1500 ಮೀ ಎತ್ತರದ ಪ್ರದೇಶಗಳಲ್ಲಿ ಸಾಮಾನ್ಯ. == ಗುಣಲಕ್ಷಣಗಳು == ಹಂಬಿನ ರೂಪದಲ್ಲಿ ಬೆಳೆಯುತ್ತದೆ. ಎಲೆಗಳು ಸಂಯುಕ್ತ ರೀತಿಯವು; ಅಭಿಮುಖ ರೀತಿಯಲ್ಲಿ ಜೋಡಣೆಗೊಂಡಿವೆ. ಒಂದೊಂದರಲ್ಲೂ 3 ಪತ್ರಕಗಳಿದ್ದು ತುದಿಯಲ್ಲಿರುವ ಪತ್ರಕ ಉಳಿದವಕ್ಕಿಂತ ದೊಡ್ಡದಾಗಿರುತ್ತದೆ. ಹೂಗಳು ಸೀಮಾಕ್ಷಿ ರೀತಿಯ ಮಂಜರಿಗಳಲ್ಲಿ ಅರಳುವುವು. ದಳಗಳು ಚೂಪು ತುದಿಯುಳ್ಳವು. ಇದು ಸಹ ವರ್ಷವಿಡೀ ಹೂಬಿಡುವುದಾದರೂ ಚಳಿಗಾಲದಲ್ಲಿ ಹೂಗಳ ಸಮೃದ್ಧಿ ಹೆಚ್ಚು. == ಉಲ್ಲೇಖಗಳು ==