ನಿಮಿಷ ಎಂಬುವುದು ಕಾಲದ ಒಂದು ಏಕಮಾನವಾಗಿದ್ದು ಸಾಮಾನ್ಯವಾಗಿ ಒಂದು ಗಂಟೆಯ 1⁄60 ಭಾಗಕ್ಕೆ (ಅರುವತ್ತರ ಮೊದಲ ಭಿನ್ನರಾಶಿ) ಅಥವಾ ೬೦ ಸೆಕೆಂಡುಗಳಿಗೆ ಸಮಾನವಾಗಿರುತ್ತದೆ. ಯುಟಿಸಿ ಸಮಯ ಸ್ತರದಲ್ಲಿ, ಅಪರೂಪದ ಸಂದರ್ಭಗಳಲ್ಲಿ ನಿಮಿಷವು ೬೧ ಸೆಕೆಂಡುಗಳನ್ನು ಹೊಂದಿರುತ್ತದೆ. ಇದು ಅಧಿಕ ಸೆಕೆಂಡುಗಳ ಪರಿಣಾಮವಾಗಿರುತ್ತದೆ (ಋಣಾತ್ಮಕ ಅಧಿಕ ಸೆಕೆಂಡನ್ನು ಸೇರಿಸುವ ನಿಯಮವಿದೆ, ಇದರಿಂದ ೫೯ ಸೆಕೆಂಡುಗಳ ನಿಮಿಷವಾಗುತ್ತದೆ, ಆದರೆ ಈ ವ್ಯವಸ್ಥೆಯಡಿ ೪೦ ವರ್ಷಗಳಿಗಿಂತ ಹೆಚ್ಚು ಸಮಯದಲ್ಲಿ ಇದು ಎಂದೂ ಆಗಿಲ್ಲ). ನಿಮಿಷವು ಎಸ್ಐ ಏಕಮಾನವಲ್ಲದಿದ್ದರೂ, ಎಸ್ಐ ಏಕಮಾನಗಳೊಂದಿಗೆ ಬಳಕೆಗೆ ನಿಮಿಷವನ್ನು ಸ್ವೀಕರಿಸಲಾಗಿದೆ. == ಇತಿಹಾಸ == ಅಲ್-ಬಿರುನಿ ಯಹೂದಿ ತಿಂಗಳುಗಳನ್ನು ಚರ್ಚಿಸುವಾಗ ಮೊಟ್ಟಮೊದಲು ಗಂಟೆಯನ್ನು ಅರವತ್ತು ಭಾಗಗಳಲ್ಲಿ ನಿಮಿಷಗಳು, ಸೆಕೆಂಡುಗಳು, ಥರ್ಡ್ ಮತ್ತು ಫ಼ೋರ್ತ್ ಆಗಿ ವಿಭಜಿಸಿದನು. ೧೨೩೫ರ ಸುಮಾರು ಸ್ಯಾಕ್ರೊಬಾಸ್ಕೊದ ಜಾನ್ ಈ ಸಂಪ್ರದಾಯವನ್ನು ಮುಂದುವರಿಸಿದನು. == ಉಲ್ಲೇಖಗಳು ==