ನೀತಿಮತಿ ಕರ್ನಾಟಕ ಸಂಗೀತ ಪದ್ಧತಿಯ ಮೇಳಕರ್ತ ರಾಗಗಳಲ್ಲಿ 60ನೆಯ ರಾಗ.ಈ ರಾಗವನ್ನು ಮುತ್ತುಸ್ವಾಮಿ ದೀಕ್ಷಿತರು ಸಂಪಾದಿಸಿದ ಸಂಗೀತ ಗ್ರಂಥದಲ್ಲಿ ನಿಶಾಧಮ್ ಎಂದು ಹೆಸರಿಸಿದ್ದಾರೆ.. == ರಾಗ ಸ್ವರೂಪ ಮತ್ತು ಲಕ್ಷಣ == ಇದು ಹತ್ತನೆಯ ದಿಸಿ ಚಕ್ರದ ಆರನೆಯ ರಾಗ.ಇದರ ನೆನೆಪಿನ ಹೆಸರು ದಿಸಿ-ಶಾ ನೆನಪಿನ ನುಡಿಕಟ್ಟು:ಸ ರಿ ಗಿ ಮಿ ಪ ಧು ನು ಇದರ ಆರೋಹಣ ಮತ್ತು ಅವರೋಹಣದಲ್ಲಿ ಎಲ್ಲಾ ಶುದ್ಧ ಸ್ವರಗಳೂ ಇದ್ದು ಅದು ಈ ಕೆಳಗಿನಂತಿವೆ. ಆರೋಹಣ ಸ ರಿ೨ ಗ೨ ಮ೨ ಪ ದ೩ ನಿ೩ ಸ ಅವರೋಹಣ ಸ ನಿ೩ ದ೩ ಪ ಮ೨ ಗ೨ ರಿ೨ ಸ ಇದು ಒಂದು ಸಂಪೂರ್ಣ ರಾಗವಾಗಿದೆ.ಇದರ ಸ್ವರಶ್ರೇಣಿ. 'ಷಡ್ಜ, ಚತುಶ್ರುತಿ ರಿಷಭ,ಸಾಧಾರಣ ಗಾಂಧಾರ,ಪ್ರತಿಮಧ್ಯಮ,ಪಂಚಮ,ಷಟ್‍ಶೃತಿ ಧೈವತಮತ್ತು ಕಾಕಲಿ ನಿಷಾಧ.ಇದು ೨೪ನೆಯ ಮೇಳಕರ್ತ ರಾಗವಾದ ವರುಣಪ್ರಿಯಗೆ ಸಮಾನವಾದ ಪ್ರತಿಮಧ್ಯಮವನ್ನು ಹೊಂದಿದೆ. == ಜನ್ಯ ರಾಗಗಳು == ಈ ರಾಗಕ್ಕೆ ಕೆಲವು ಜನ್ಯ ರಾಗಗಳಿವೆ.ಇವುಗಳಲ್ಲಿ ಹಂಸನಾದ ಹೆಚ್ಚು ಬಳಕೆಯಲ್ಲಿವೆ. == ಜನಪ್ರಿಯ ರಚನೆಗಳು == ನೀತಿಮತಿ ರಾಗದಲ್ಲಿ ಹೆಚ್ಚು ಪ್ರಚಲಿತವಿರುವ ಕೆಲವು ಕೃತಿಗಳು ಅರವಿಂದ ಲೋಚನೆ- ಅಂಬುಜಮ್ ಕೃಷ್ಣ ವಾಚಾಮಗೋಚರ- ತ್ಯಾಗರಾಜ ಮೋಹನಕಾರ ಮುತ್ತು- ಕೋಟೀಶ್ವರ ಅಯ್ಯರ್ ಸ್ಮರಣಮ್- ಎಂ. ಬಾಲಮುರಳಿ ಕೃಷ್ಣ ಶ್ರೀ ತುಳಸಿ ನೀತಿಮತಿ- ಕಲ್ಯಾಣಿ ವರದರಾಜನ್ == ಸಂಬಂಧಿತ ರಾಗಗಳು == ಗ್ರಹಭೇದಮ್ ಸೂತ್ರವನ್ನು ನೀತಿಮತಿ ರಾಗಕ್ಕೆ ಅನ್ವಯಿಸಿದಾಗ ಗಾಂಗೇಯಭೂಷಿಣಿ ಎಂಬ ಒಂದು ರಾಗ ದೊರೆಯುತ್ತದೆ. == ಉಲ್ಲೇಖಗಳು ==