ನೀರಸಾಗರವು ಭಾರತದ ಕರ್ನಾಟಕ ರಾಜ್ಯದ ಧಾರವಾಡ ಜಿಲ್ಲೆಯ ಕಲಘಟಗಿ ತಾಲೂಕಿನ ಒಂದು ಹಳ್ಳಿ. ಇದು ಹುಬ್ಬಳ್ಳೀ, ಧಾರವಾಡಗಳಿಂದ ೧೯ ಕಿಲೋಮೀಟರ್ ದೂರದಲ್ಲಿದೆ. ಇಲ್ಲಿರುವ ಕೆರೆಯನ್ನು ಅಭಿವೃದ್ಧಿಪಡಿಸಿ ಬೃಂದಾವನ ಮಾದರಿಯಲ್ಲಿ ಪ್ರವಾಸಿತಾಣವಾಗಿ ಮಾಡುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ. ಇಲ್ಲಿ ಮೀನುಮರಿ ಪಾಲನಾ ಕೇಂದ್ರವೂ ಇದೆ. == ನೀರಸಾಗರ ಜಲಾಶಯ == ಇಲ್ಲಿನ ಕೆರೆಯು ೧೯೫೫ರಿಂದ ಹುಬ್ಬಳ್ಳಿ ನಗರಕ್ಕೆ ಕುಡಿಯುವ ನೀರು ಪೂರೈಕೆ ಮಾಡುತ್ತಿದೆ. ೧೯೫೫ ರಲ್ಲಿ ಬೇಡ್ತಿ ಹಳ್ಳಕ್ಕೆ ಆಣೆಕಟ್ಟು ನಿರ್ಮಿಸಿ ಇಲ್ಲಿನ ನೀರಸಾಗರ ಜಲಾಶಯದ ನಿರ್ಮಾಣ ಮಾದಲಾಯಿತು. ಇದರ ಸಾಮರ್ಥ್ಯವು ೧.೦೨ ಟಿ.ಎಂ.ಸಿ ಆಗಿದೆ. ಒಂದು ಕಾಲದಲ್ಲಿ ಹುಬ್ಬಳ್ಳೀ-ಧಾರವಾಡ ಅವಳಿನಗರದ ಜನತೆಗೆ ಕುಡಿಯುವ ನೀರಿಗೆ ಆಧಾರವಾಗಿತ್ತು. ಇಂದಿಗೂ ಇದು ಹುಬ್ಬಳ್ಳಿಯ ಶೇ.೨೫ರಷ್ಟು ಪ್ರದೇಶಕ್ಕೆ ನೀರು ಒದಗಿಸುತ್ತಿದೆ. ಈ ಕೆರೆಯು ತುಂಬಲು ಬೇಡ್ತಿ ಹಳ್ಳದ ನೀರು ಪ್ರಮುಖ ಮೂಲವಾಗಿದೆ. ಈ ಕೆರೆ 181 ಚದರ ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ. ಇಲ್ಲಿ ಅನೇಕ ಪ್ರವಾಸಿಗಳು ಬರುತ್ತಾದರೂ ಹೊಟೆಲ್,ಅಂಗಡಿ, ಸುಸಜ್ಜಿತ ಉದ್ಯಾನವನಗಳು ಇಲ್ಲ. == ಜನಸಂಖ್ಯಾಶಾಸ್ತ್ರ == 2011 ರ ಭಾರತದ ಜನಗಣತಿಯ ಪ್ರಕಾರ ನೀರಸಾಗರದಲ್ಲಿ 290 ಮನೆಗಳು ಮತ್ತು ಒಟ್ಟು 1,493 ಜನಸಂಖ್ಯೆಯು 803 ಪುರುಷರು ಮತ್ತು 690 ಮಹಿಳೆಯರನ್ನು ಒಳಗೊಂಡಿದೆ. 0-6 ವಯಸ್ಸಿನ 213 ಮಕ್ಕಳು ಇದ್ದರು. == ಉಲ್ಲೇಖಗಳು ==