ನೀಲಕಂಠ( )ದಕ್ಷಿಣ ಏಷಿಯಾ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ಪಕ್ಷಿ. ಇದರ ನೀಲ ಬಣ್ಣದಿಂದ ಇದಕ್ಕೆ ನೀಲಕಂಠ ಎಂಬ ಹೆಸರು ಬಳಕೆಯಲ್ಲಿದೆ.ಇದು ಕರ್ನಾಟಕ,ಆಂಧ್ರಪ್ರದೇಶ,ಬಿಹಾರ ಹಾಗೂ ಒಡಿಶಾ ರಾಜ್ಯಗಳ ರಾಜ್ಯ ಪಕ್ಷಿಯಾಗಿ ಗುರುತಿಸಲ್ಪಟ್ಟಿದೆ. === ಲಕ್ಷಣಗಳು === ಇದು ಪಾರಿವಾಳಕ್ಕಿಂತ ಚಿಕ್ಕದಾದ ಪಕ್ಷಿ.ನೆತ್ತಿ,ರೆಕ್ಕೆ ತಿಳಿ ನೀಲಿಯಾಗಿದ್ದು,ಕತ್ತು,ಎದೆ,ಬೆನ್ನು ಕಂದು ಬಣ್ಣವಿದೆ.ಕೊಕ್ಕು ಕಪ್ಪಗಿದೆ.ಸುಮಾರು ೨೬ ರಿಂದ ೨೮ ಸೆಂಟಿಮೀಟರ್ ಉದ್ದವಿರುತ್ತದೆ. === ಆವಾಸ === ಇದು ಮುಖ್ಯವಾಗಿ ಪರ್ಣಪಾತಿ ಕಾಡಿನ ಅಂಚು,ಕೃಷಿಭೂಮಿ,ಕುರುಚಲು ಕಾಡುಗಳಲ್ಲಿ ಹೆಚ್ಚಾಗಿ ಕಂಡುಬರುತ್ತದೆ.ತಂತಿ,ಮರ,ಬಂಡೆ ಹಾಗೂ ಕಂಬಗಳಲ್ಲಿ ಕುಳಿತಿರುತ್ತದೆ. === ಸಂತಾನೋತ್ಪತ್ತಿ === ಪೊಟರೆಯಲ್ಲಿ ಮೃದುವಾದ ವಸ್ತುಗಳನ್ನು ಸಂಗ್ರಹಿಸಿ ಗೂಡುಕಟ್ಟಿ,೪ ಅಥವಾ ೫ ಮೊಟ್ಟೆಗಳನ್ನು ಇಡುತ್ತದೆ. ಸುಮಾರು ೧೭ ದಿನಗಳವರೇಗೆ ಕಾವು ಕೊಟ್ಟು ಮರಿಮಾಡುತ್ತದೆ. ಮಾರ್ಚಿಯಿಂದ ಜುಲೈ ಸಂತಾನೋತ್ಪತ್ತಿಯ ಕಾಲ.ಹೆಣ್ಣುಗಳನ್ನು ಆಕರ್ಷಿಸಲು ಗಂಡು ಹಕ್ಕಿ ಆಗಸದಲ್ಲಿ ಗಿರಕಿ ಹೊಡೆಯುತ್ತದೆ. === ಛಾಯಾಂಕಣ === == ಉಲ್ಲೇಖಗಳು ==