ನೆಟ್‍ಫ್ಲಿಕ್ಸ್ ಅಥವಾ ನೆಟ್ಫ್ಲಿಕ್ಸ್ ವಿಶ್ವದ ಪ್ರಸಿದ್ಧ ಓಟಿಟಿಯಾಗಿದೆ. ಓಟಿಟಿ ಅಥವಾ 'ಓವರ್ ದಿ ಟಾಪ್' ಅಂದರೆ ಇಂಟರ್ನೆಟ್ ಮೂಲಕ ದೂರದರ್ಶನ ಮತ್ತು ಸಿನಿಮಾಗಳನ್ನು ತಲುಪಿಸುವ ವಿಧಾನಗಳಾಗಿದೆ. ಇತ್ತೀಚಿನ ಹೆಚ್ಚಿನ ಸಿನಿಮಾಗಳು ಥಿಯೇಟರ್ ಬದಲು ಓಟಿಟಿಯಲ್ಲಿ ಬಿಡುಗಡೆಯಾಗುತ್ತಿರುವು ಸಾಮಾನ್ಯವಾಗಿದೆ.ನೆಟ್ಫ್ಲಿಕ್ಸ್ ಕ್ಯಾಲಿಫೋರ್ನಿಯಾದ ಸ್ಕಾಟ್ಸ್ ವ್ಯಾಲಿಯಲ್ಲಿ, ಆಗಸ್ಟ್ 29, 1997 ರಂದು ರೀಡ್ ಹೇಸ್ಟಿಂಗ್ಸ್ ಮತ್ತು ಮಾರ್ಕ್ ರಾಂಡೋಲ್ಫ್ ಅವರು ಸ್ಥಾಪಿಸಿದ ಅಮೆರಿಕದ ಒ೦ದು ಕಂಪನಿ . ಶುರುವಿನಲ್ಲಿ ಇದು ಆನ್ ಸ್ಟ್ರೀಮಿಂಗ್ ಮಾಧ್ಯಮ, ವೀಡಿಯೊ, ಡಿವಿಡಿ ಒದಗಿಸುತ್ತಿದ ನೆಟ್ಪ್ಲಿಕ್ಸ್ ನ೦ತರ ೨೦೧೩ರಲ್ಲಿ ಸಿನೆಮಾ ,ನಿರ್ಮಾಣ ಮತ್ತು ಆನ್ಲೈನ್ ಹಂಚಿಕೆ ಗೆ ವಿಸ್ತರಿಸಿತು. ಇದರ ಪ್ರಧಾನ ಕಚೇರಿ ಕ್ಯಾಲಿಫೋರ್ನಿಯಾದ ಲಾಸ್ ಗ್ಯಾಟೊಸ್ ನಲ್ಲಿದೆ == ==