ನೆದರ್‌ಲ್ಯಾಂಡ್ಸ್ ಪಶ್ಚಿಮ ಯುರೋಪಿನ ಒಂದು ರಾಷ್ಟ್ರ. ನೆದರ್‌ಲ್ಯಾಂಡ್ಸ್ ರಾಜ್ಯವು ಈ ಮುಖ್ಯ ಭೂಭಾಗದ ಜೊತೆಗೆ ಕೆರಿಬ್ಬಿಯನ್ ಪ್ರದೇಶದ ನೆದರ್‌ಲ್ಯಾಂಡ್ಸ್ ಆಂಟಿಲ್ಲ್ಸ್ ಮತ್ತು ಅರೂಬಾ ಗಳನ್ನು ಸಹ ಒಳಗೊಂಡಿದೆ. ನೆದರ್‌ಲ್ಯಾಂಡ್ಸ್‌ನ ಉತ್ತರ ಮತ್ತು ಪಶ್ಚಿಮದಲ್ಲಿ ಉತ್ತರ ಸಮುದ್ರವಿದ್ದರೆ (ನಾರ್ತ್ ಸೀ) ದಕ್ಷಿಣದಲ್ಲಿ ಬೆಲ್ಜಿಯಮ್ ಹಾಗೂ ಪೂರ್ವದಲ್ಲಿ ಜರ್ಮನಿ ದೇಶಗಳಿವೆ. ಇಲ್ಲಿನ ಜನರು ಡಚ್ ಭಾಷೆಯನ್ನು ಆಡುವುದರಿಂದ ಇವರನ್ನು ಡಚ್ಚರು ಎಂದು ಕರೆಯುತ್ತಾರೆ.