ಅಮೆರಿಕ ಸಂಯುಕ್ತ ಸಂಸ್ಥಾನದ ಗ್ರೇಟ್ ಪ್ಲೇನ್ಸ್‌ನ ಮಧ್ಯಪಶ್ಚಿಮ ಭಾಗದಲ್ಲಿರುವ ರಾಜ್ಯವೇ ನೆಬ್ರಸ್ಕಾ ./[ ]nəˈbræskə/ ಇದರ ರಾಜಧಾನಿ ಲಿಂಕನ್ ಮತ್ತು ಒಮಹಾ ಇದರ ಅತ್ಯಂತ ದೊಡ್ಡ ನಗರವಾಗಿದೆ. ಒಮ್ಮೆ ಗ್ರೇಟ್ ಅಮೆರಿಕನ್ ಡೆಸರ್ಟ್‌ನ ಭಾಗ ಎಂದು ಪರಿಗಣಿಸಲ್ಪಟ್ಟಿತ್ತು. (ಗರಿಷ್ಠ ಮೈದಾನದ ಜೀವವೈವಿಧ್ಯದ ಭಾಗ). ಈಗ ನೆಬ್ರಸ್ಕಾ ಮುಖ್ಯವಾಗಿ ಕೃಷಿಯ ಮತ್ತು ದನಗಾವಲಿನ ಪ್ರದೇಶವಾಗಿದೆ. ನೆಬ್ರಸ್ಕಾವು ಏಕಸಭೆಯ ಶಾಸಕಾಂಗವನ್ನು ಹೊಂದಿರುವ ಸಂಯುಕ್ತ ಸಂಸ್ಥಾನದ ಏಕೈಕ ರಾಜ್ಯವಾಗಿದೆ. == ವ್ಯುತ್ಪತ್ತಿ == ರಾಜ್ಯದಲ್ಲಿ ಪ್ಲಾಟ್ ನದಿ ಹರಿದ ನಂತರ ಬಹುಶಃ ಪ್ರಾಚೀನ ಒಟೊಯ್ ಶಬ್ದವಾದ Ñí Brásge ಟೆಂಪ್ಲೇಟು: (ಸಮಕಾಲೀನ Ñí Bráhge ), ನಿಂದ ಅಥವಾ "ನಿಂತ ನೀರು" ಎಂಬ ಅರ್ಥಕೊಡುವ ಒಮಹಾ Ní Btháska ಟೆಂಪ್ಲೇಟು: ದಿಂದ ನೆಬ್ರಸ್ಕಾ ಶಬ್ದ ಬಂದಿರಬೇಕು. == ಇತಿಹಾಸ == ನೆಬ್ರಸ್ಕಾದ ಒಮಹಾ, ಮಿಸ್ಸೋರಿಯಾ, ಪೊನ್ಕಾ, ಪಾವ್ನೀ, ಒಟೊಯ್ ಮತ್ತು ಸಿಯೋಕ್ಸ್‌ನ ಭಾಗಗಳಲ್ಲಿ ಅಮೆರಿಕನ್ ಇಂಡಿಯನ್ ಪಂಗಡಗಳು ನೆಲೆಸಿವೆ. ಲೂಯಿಸ್ ಮತ್ತು ಕ್ಲಾರ್ಕ್ ದಂಡಯಾತ್ರೆಗಿಂತ ತುಂಬಾ ಮೊದಲು ಮೊದಲು ಫ್ರೆಂಚ್-ಕೆನಡಿಯನ್ ಸಂಶೋಧಕರು ನೆಬ್ರಸ್ಕಾದ ಪ್ರದೇಶವನ್ನು ಸಂಶೋಧಿಸಿದರು ಹಾಗೂ 1739 ರಲ್ಲಿ ಮಲೆಟ್ ಸಹೋದರರು ಸಂತಾ ಫೆಗೆ ವ್ಯಾಪಾರಕ್ಕಾಗಿ ಪ್ರಯಾಣ ಬೆಳೆಸಿದರು. ಕ್ಯಾಲಿಫೋರ್ನಿಯಾ ಗೋಲ್ಡ್ ರಶ್ ಮತ್ತು ಯುರೋಪಿಯನ್-ಅಮೆರಿಕನ್ ಒಪ್ಪಂದವು 1848 ರವರೆಗೂ ಆರಂಭವಾಗಿರಲಿಲ್ಲ. 30, ಮೇ 1854 ಕನ್ಸಸ್-ನೆಬ್ರಸ್ಕಾ ಕಾಯ್ದೆಯು ಕನ್ಸಸ್ ಪ್ರಾಂತ್ಯ ಮತ್ತು ನೆಬ್ರಸ್ಕಾ ಪ್ರಾಂತ್ಯದಿಂದ ರೂಪಗೊಂಡು ಸಮಾನವಾಗಿ 40° ಉತ್ತರಕ್ಕೆ ವಿಭಾಗವಾಯಿತು. ನೆಬ್ರಸ್ಕಾ ವಸಾಹತಿನ ರಾಜಧಾನಿ ಒಮಹಾ ಆಗಿತ್ತು. 1860ರಲ್ಲಿ, ಫೆಡರಲ್ ಸರ್ಕಾರದಿಂದ ಮಂಜೂರಾದ ಉಚಿತ ಭೂಮಿಯನ್ನು ಪಡೆಯಲು ರೈತರ, ಮೊದಲ ಬಹುದೊಡ್ಡ ವಸಾಹತುಗಾರರ ಗುಂಪು ನೆಬ್ರಸ್ಕಾದೆಡೆಗೆ ಬಂತು. ಮರಗಳ ಕನಿಷ್ಠ ಲಭ್ಯತೆಯಿಂದಾಗಿ ಮೊದಲಿನ ಕೃಷಿಕರು ತಮ್ಮ ಮನೆಗಳನ್ನು ಹುಲ್ಲಿನಿಂದ ಕಟ್ಟಿಕೊಂಡರು. ಅಮೆರಿಕದ ಆಂತರಿಕ ಯುದ್ಧದ ನಂತರ 1867ರಲ್ಲಿ ನೆಬ್ರಸ್ಕಾವು 37ನೇ ರಾಜ್ಯವಾಗಿ ಉದ್ಭವಿಸಿತು. ಆ ಸಂದರ್ಭದಲ್ಲಿ ರಾಜಧಾನಿಯು ಒಮಾಹಾದಿಂದ ಲ್ಯಾಚೆಸ್ಟರ್‌ಗೆ ಬದಲಾಯಿತು. ನಂತರ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ಅಬ್ರಹಾಮ್ ಲಿಂಕನ್‌ರ ಕೊಲೆಯ ನಂತರ ಲಿಂಕನ್ ಎಂದು ಪುನರ್‌ನಾಮಕರಣ ಮಾಡಲಾಯಿತು. ಆರ್ಬರ್ ಡೇ ರಜಾದಿನವು ನೆಬ್ರಸ್ಕಾದಲ್ಲಿ ಆರಂಭವಾಯಿತು. ನ್ಯಾಶನಲ್ ಆರ್ಬರ್ ಡೇ ಫೌಂಡೇಶನ್‌ನ ಕೇಂದ್ರ ಕಚೇರಿ ಇನ್ನೂ ನೆಬ್ರಸ್ಕಾ ಸಿಟಿಯಲ್ಲಿದೆ. ಜೊತೆಗೆ ಲಿಂಕನ್‌ನಲ್ಲಿ ಕೂಡಾ ಕೆಲವು ಕಚೇರಿಗಳು ಇವೆ. ನೆಬ್ರಸ್ಕಾವು ನಾಗರಿಕ ಹಕ್ಕು ಚಳುವಳಿಯ ಬಹುದೊಡ್ಡ ಇತಿಹಾಸವನ್ನು ಹೊಂದಿದೆ. ಅಡ್ವಾನ್ಸ್‌ಮೆಂಟ್ ಆಫ್ ಕಲರ‍್ಡ್ ಪೀಪಲ್ ಪರಿಚ್ಛೇದಕ್ಕಾಗಿ 1912ರಲ್ಲಿ ಒಮಾಹಾಸ್ ನ್ಯಾಶನಲ್ ಅಸೋಸಿಯೇಶನ್‌ನೊಂದಿಗೆ ನಾಗರಿಕ ಹಕ್ಕು ಚಳುವಳಿಯು ಆರಂಭವಾಯಿತು. == ಭೂಗೋಳ == ಉತ್ತರದಲ್ಲಿ ದಕ್ಷಿಣ ಡಕೋಟಾದಿಂದ, ಪೂರ್ವಕ್ಕೆ ಇಯೋವಾದಿಂದ, ಮತ್ತು ಆಗ್ನೇಯಕ್ಕೆ ಮಿಸ್ಸೌರಿ ವರೆಗೆ ಮಿಸ್ಸೌರಿ ನದಿಯ ಮೂಲಕ, ದಕ್ಷಿಣಕ್ಕೆ ಕನ್ಸಾಸ್‌ನಿಂದ, ನೈರುತ್ಯದಲ್ಲಿ ಕೊಲರಾಡೋದಿಂದ ಮತ್ತು ಪಶ್ಚಿಮದಲ್ಲಿ ವ್ಯೋಮಿಂಗ್‌ನಿಂದ ರಾಜ್ಯವು ಸುತ್ತುವರಿಯಲ್ಪಟ್ಟಿದೆ. ರಾಜ್ಯವು 93 ಕೌಂಟಿಗಳನ್ನು ಹೊಂದಿದೆ. ಫ್ರಂಟಿಯರ್ ಸ್ಟ್ರಿಪ್‌ನ ಮಧ್ಯಭಾಗವನ್ನು ಆಕ್ರಮಿಸಿದೆ. ನೆಬ್ರಸ್ಕಾವು ಎರಡು ಸಮಯ ವಲಯಗಳಲ್ಲಿ ವಿಭಾಗವಾಗಿದೆ. ರಾಜ್ಯದ ಪೂರ್ವಾರ್ಧವನ್ನು ಸೆಂಟ್ರಲ್ ಟೈಮ್ ಝೋನ್ ಹೊಂದಿದ್ದು, ಪಶ್ಚಿಮಾರ್ಧವು ಮೌಂಟೇನ್ ಟೈಮ್‌ನ್ನು ಹೊಂದಿದೆ. ಪಶ್ಚಿಮದಿಂದ ಪೂರ್ವಕ್ಕೆ ಮೂರು ನದಿಗಳು ಹರಿಯುತ್ತವೆ. ಹೃದಯಭಾಗದಿಂದ ಪ್ಲಾಟೆ ನದಿಯು, ರಾಜ್ಯದ ಉತ್ತರ ಭಾಗದ ಮೂಲಕ ನಿಯೋಬ್ರಾರಾ ನದಿ ಮತ್ತು ರಿಪಬ್ಲಿಕನ್ ನದಿಯು ದಕ್ಷಿಣ ಭಾಗದ ಮೂಲಕ ಹರಿಯುತ್ತದೆ. ನೆಬ್ರಸ್ಕಾವು ಡಿಸೆಕ್ಟೆಡ್ ಟಿಲ್ ಪ್ಲೇನ್ಸ್ ಮತ್ತು ಗ್ರೇಟ್ ಪ್ಲೇನ್ಸ್ ಎಂಬ ಎರಡು ಮುಖ್ಯ ಭೂಭಾಗಗಳಿಂದ ಒಂದಾಗಿದೆ. ಪೂರ್ವದ ಬಹುಭಾಗಗಳು ಹಿಮಯುಗದ ಹಿಮನದಿಗಳಿಂದ ಆವೃತ್ತವಾಗಿದೆ. ಡಿಸೆಕ್ಟೆಡ್ ಟಿಲ್ ಪ್ಲೇನ್‌ಗಳು ಹಿಮಗಡ್ಡೆಗಳ ದಾಳಿಯಿಮದಾಗಿ ಹಿಂದೆ ಸರಿದಿವೆ. ಒಮಾಹಾ ಮತ್ತು ಲಿಂಕನ್ ಪ್ರದೇಶಗಳನ್ನು ಒಳಗೊಂಡಿರುವ ಡಿಸೆಕ್ಟೆಡ್ ಟಿಲ್ ಪ್ಲೇನ್ಸ್ ಪ್ರದೇಶವು ಗುಡ್ಡಗಾಡು ಪ್ರದೇಶವಾಗಿದೆ. ಗ್ರೇಟ್ ಪ್ಲೇನ್ಸ್ ಬಹುತೇಕ ಪಶ್ಚಿಮ ನೆಬ್ರಸ್ಕಾವನ್ನು ಒಳಗೊಂಡಿದೆ. ಗ್ರೇಟ್ ಪ್ಲೇನ್ಸ್ ಕೂಡಾ ಸ್ಯಾಂಡ್‌ಹಿಲ್ಸ್, ದಿ ಪೈನ್ ರಿಡ್ಜ್, ರೇನ್‌ವಾಟರ್ ಬೇಸಿನ್, ಹೈ ಪ್ಲೇನ್ಸ್ ಮತ್ತು ವೈಲ್ಡ್‌ಕ್ಯಾಟ್ ಹಿಲ್ಸ್‌ಗಳನ್ನು ಒಳಗೊಂಡಿದೆ. 5,424 ಅಡಿ(1,653 ಎಂ) ಎತ್ತರದ ಪನೋರಮಾ ಪಾಯಿಂಟ್ ನೆಬ್ರಸ್ಕಾದಲ್ಲೇ ಅತೀ ಎತ್ತರದ್ದಾಗಿದೆ. ಪ್ರಚಾರವನ್ನು ಹೊರತುಪಡಿಸಿ ಇದು ಕೊಲರಾಡೋ ಮತ್ತು ವ್ಯೋಮಿಂಗ್ ಗಡಿಗಿಂತ ಕಡಿಮೆ ಎತ್ತರದ್ದು. ನೆಬ್ರಾಸ್ಕಾದ ಹಿಂದಿನ ಪ್ರವಾಸೋದ್ಯಮ ಉದ್ಗೋಷಣೆಯು "ಪಶ್ಚಿಮ ಆರಂಭವಾಗುವಲ್ಲಿ" (ವೇರ್ ದಿ ವೆಸ್ಟ್ ಬಿಗಿನ್ಸ್) ಎಂಬುದಾಗಿತ್ತು. ಮಿಸ್ಸೌರಿ ನದಿ, ಲಿಂಕನ್ ನಗರದ ಓ ಸ್ಟ್ರೀಟ್ಸ್ ಮತ್ತು ಥರ್ಟೀನ್ಥ್, ಸೆಂಚುರಿ ಮೆರಿಡಿಯನ್ ಮತ್ತು ಚಿಮ್ನಿ ರಾಕ್‌ನ್ನು ಪಶ್ಚಿಮ ಎಂಬ ಸ್ಥಳವು ಸೂಚಿಸಿತ್ತು. ಯಾವ ರಾಜ್ಯದ ಗಡಿಯನ್ನೂ ಹಂಚಿಕೊಳ್ಳದ ಮತ್ತು ಸಮುದ್ರದ ಗಡಿಯನ್ನೂ ಹೊಂದಿರದ ನೆಬ್ರಸ್ಕಾವು ತ್ರಿಕೋನ ಭೂ ಆವೃತ್ತ ರಾಜ್ಯವಾಗಿದೆ. === ಸಂಯುಕ್ತ ಮತ್ತು ಆಡಳಿತ === ನ್ಯಾಶನಲ್ ಪಾರ್ಕ್ ಸರ್ವೀಸ್‌ನ ಆಡಳಿತದಲ್ಲಿರುವ ಪ್ರದೇಶಗಳು: ಹ್ಯಾರಿಸನ್ ಸಮೀಪದ ಅಗೇಟ್ ಫಾಸಿಲ್ ಬೆಡ್ಸ್ ನ್ಯಾಶನಲ್ ಮಾನ್ಯುಮೆಂಟ್ ಕ್ಯಾಲಿಫೋರ್ನಿಯಾ ನ್ಯಾಶನಲ್ ಹಿಸ್ಟಾರಿಕ್ ಟ್ರೈಲ್ ಬಯಾರ್ಡ್ ಸಮೀಪದ ಚಿಮ್ನಿ ರಾಕ್ ನ್ಯಾಶನಲ್ ಹಿಸ್ಟಾರಿಕ್ ಸೈಟ್ ಬಿಯಾಟ್ರೈಸ್‌ದಲ್ಲಿನ ಹೋಮ್‌ಸ್ಟೆಡ್ ನ್ಯಾಶನಲ್ ಮಾನ್ಯುಮೆಂಟ್ ಆಫ್ ಆಮೇರಿಕಾ ಲೂಯಿಸ್ ಅಂಡ್ ಕ್ಲಾರ್ಕ್ ಹಿಸ್ಟಾರಿಕ್ ಟ್ರೈಲ್ ಪೊಂಕಾ ಸಮೀಪದ ಮಿಸ್ಸೌರಿ ನ್ಯಾಶನಲ್ ರೀಕ್ರಿಯೇಶನಲ್ ರಿವರ್ ಮಾರ್ಮನ್ ಪಯೋನೀರ್ ನ್ಯಾಶನಲ್ ಹಿಸ್ಟಾರಿಕ್ ಟ್ರೈಲ್ ವ್ಯಾಲೆಂಟೈನ್ ಸಮೀಪದ ನಿಯೋಬ್ರಾರಾ ನ್ಯಾಶನಲ್ ಸೆನಿಕ್ ರಿವರ್ ಓರೆಗಾನ್ ನ್ಯಾಶನಲ್ ಹಿಸ್ಟಾರಿಕ್ ಟ್ರೈಲ್ ಪೋನಿ ಎಕ್ಸ್‌ಪ್ರೆಸ್ ನ್ಯಾಶನಲ್ ಹಿಸ್ಟಾರಿಕ್ ಟ್ರಯಲ್ ಗೆರಿಂಗ್‌ನಲ್ಲಿನ ಸ್ಕಾಟ್ಸ್ ಬ್ಲಫ್ ನ್ಯಾಶನಲ್ ಮಾನ್ಯುಮೆಂಟ್ ನ್ಯಾಶನಲ್ ಫಾರೆಸ್ಟ್ ಸರ್ವೀಸ್‌ನ ಆಡಳಿತದಲ್ಲಿರುವ ಪ್ರದೇಶಗಳು: ನೆಬ್ರಾಸ್ಕಾ ನ್ಯಾಶನಲ್ ಫಾರೆಸ್ಟ್ ಒಗ್ಲಾಲಾ ನ್ಯಾಶನಲ್ ಗ್ರಾಸ್‌ಲ್ಯಾಂಡ್ ಸಾಮ್ಯುವೆಲ್ ಆರ್.ಮೆಕೆಲ್ವಿಯೆ ನ್ಯಾಶನಲ್ ಫಾರೆಸ್ಟ್ === ಹವಾಮಾನ === ಎರಡು ಮುಖ್ಯ ಹವಾಮಾನವು ನೆಬ್ರಾಸ್ಕಾದಲ್ಲಿ ಕಾಣಿಸಿಕೊಳ್ಳುತ್ತವೆ. ರಾಜ್ಯದ ಪೂರ್ವಾರ್ಧ ಭಾಗವು ತೇವ ಭೂ ಹವಾಮಾನವನ್ನು ಹೊಂದಿದೆ (ಕೊಪನ್ ಹವಾಮಾನ ವರ್ಗೀಕರಣ ) ಮತ್ತು ಪಶ್ಚಿಮಾರ್ಧ ಭಾಗವು ಭಾಗಶಃ ಒಣಗಿದ ಹುಲ್ಲುಗಾವಲಿನ ಹವಾಮಾನದ ಪ್ರದೇಶವಾಗಿದೆ(ಕೋಪನ್ ). ಇಡೀ ರಾಜ್ಯ ಕ್ಷಣಕ್ಷಣಕ್ಕೆ ಬದಲಾಗುವ ಉಷ್ಣಾಂಶವನ್ನು ಹೊಂದಿದೆ. ನೆಬ್ರಸ್ಕಾದ ಸರಾಸರಿ ಹವಾಮಾನವು ಬೇಸಿಗೆ ಮತ್ತು ಚಳಿಗಾಲದಿಂದ ಸಮನಾಗಿದೆ. ಇದೇ ವೇಳೆ, ಸರಾಸರಿ ವಾರ್ಷಿಕ ಮಳೆಯ ಪ್ರಮಾಣವು ರಾಜ್ಯದ ನೈರುತ್ಯ ಭಾಗದಲ್ಲಿ ಪೂರ್ವದಿಂದ ಪಶ್ಚಿಮಕ್ಕೆ 31.5 ಇಂಚುಗಳು (800 ಎಂಎಂ), ಪ್ಯಾನ್‌ಹ್ಯಾಂಡಲ್‌ನಲ್ಲಿ 13.8 ಇಂಚು (350 ಎಂಎಂ) ಇಳಿಕೆಯಾಗಿದೆ. ತೇವಾಂಶವೂ ಕೂಡಾ ಪೂರ್ವದಿಂದ ಪಶ್ಚಿಮಕ್ಕೆ ಗಮನಾರ್ಹವಾಗಿ ಇಳಿಯುತ್ತದೆ. ರಾಜ್ಯದಲ್ಲಿ ಆಗಾಗ ಮಂಜು ಬೀಳುವಿಕೆಯೂ ಕೂಡಾ ಸಂಭವಿಸುತ್ತಿದ್ದು ನೆಬ್ರಸ್ಕಾದಲ್ಲಿ 25 ಇಂಚಿನಿಂದ 35 ಇಂಚಿನವರೆಗೆ ವಾರ್ಷಿಕ ಮಂಜು ಬೀಳುತ್ತದೆ. ನೆಬ್ರಾಸ್ಕಾವು ಟಾರ್ನಡೋ ಅಲ್ಲೆಯಲ್ಲಿದೆ. ಚಂಡಮಾರುತವು ಬೇಸಿಗೆಯಲ್ಲಿ ಮತ್ತು ಬೇಸಿಗೆ ಹಾಗೂ ಚಳಿಗಾಲದ ಮಧ್ಯೆ ಅತಿ ಸಾಮಾನ್ಯವಾಗಿದೆ. ಭೀಕರ ಚಂಡಮಾರುತ ಮತ್ತು ಬಿರುಗಾಳಿಯು ಬೇಸಿಗೆ ಕಾಲದಲ್ಲಿ, ಬೇಸಿಗೆ ಹಾಗೂ ಮಳೆಗಾಲದ ಮಧ್ಯೆ ಮತ್ತು ಬೇಸಿಗೆ ಹಾಗು ಚಳಿಗಾಲದ ಮಧ್ಯೆ ಸಂಭವಿಸುತ್ತದೆ. ಚಳಿಗಾಲದಲ್ಲಿ ಪಶ್ಚಿಮ ನೆಬ್ರಾಸ್ಕಾದಲ್ಲಿ ರಾಕಿ ಪರ್ವತಗಳ ಕಡೆಯಿಂದ ಬೀಸುವ ಚಿನೂಕ್ ಗಾಳಿಯು ಬದಲಾವಣೆಯ ಪರಿಣಾಮವನ್ನು ಬೀರುತ್ತವೆ. == ಜನಸಂಖ್ಯಾಶಾಸ್ತ್ರ == 2009ರ ಅಂದಾಜಿನಂತೆ ನೆಬ್ರಾಸ್ಕಾ ಜನಸಂಖ್ಯೆಯು 1,79,619 ಆಗಿದೆ. ಇದು 2000ದಲ್ಲಿದ್ದ 85,356ರಿಂದ ಶೇ.5ರಷ್ಟು ಹೆಚ್ಚಾಗಿದೆ. ಹಿಂದಿನ ಜನಗಣತಿಯಲ್ಲಿ ದಾಖಲಾದ 77,995ರಿಂದ ನೈಸರ್ಗಿಕ ಹೆಚ್ಚಳವಾಗಿದೆ (187,564 ಜನನ ಮತ್ತು 109,569 ಸಾವು) ಮತ್ತು 9,319 ಜನರು ನಗರದಿಂದ ವಲಸೆ ಹೋಗಿದ್ದರಿಂದಾಗಿ ಇಳಿಕೆಯಾಗಿದೆ. ಸಂಯುಕ್ತ ಸಂಸ್ಥಾನದ ಹೊರಗಿನಿಂದ ವಲಸೆಯಿಂದಾಗಿ 27,398 ಜನ ಮತ್ತು ದೇಶದೊಳಗಿನ ವಲಸೆಯಿಂದಾಗಿ 36,717 ಜನಸಂಖ್ಯೆ ಕಡಿಮೆಯಾಗಿದೆ. ನೆಬ್ರಾಸ್ಕಾದ ಪೋಕ್ ಕೌಂಟಿಯ ಶೆಲ್ಬಿ ನಗರದಲ್ಲಿ ಜನಸಂಖ್ಯೆ ಕೇಂದ್ರೀಕೃತವಾಗಿದೆ. 2004ರ ಜನಗಣತಿಯಂತೆ ನೆಬ್ರಾಸ್ಕಾದ ಜನಸಂಖ್ಯೆಯು 84,000 ವಿದೇಶಿ ಮೂಲದ ನಿವಾಸಿಗಳನ್ನು ಹೊಂದಿದೆ.(4.8 ಶೇ ಜನಸಂಖ್ಯೆ). ನೆಬ್ರಾಸ್ಕಾದ ಐದು ಮುಖ್ಯ ಪಂಗಡಗಳೆಂದರೆ ಜರ್ಮನ್(38.6%), ಐರಿಶ್(12.4%), ಇಂಗ್ಲಿಷ್(9.6%), ಸ್ವೀಡಿಶ್(4.9%), ಝೆಕ್(4.9%). ನೆಬ್ರಾಸ್ಕಾವು ದೇಶದಲ್ಲೇ ಅತಿ ಹೆಚ್ಚು ಝೆಕ್-ಅಮೆರಿಕನ್ ಮತ್ತು ನಾನ್-ಮೋರ್ಮನ್ ಡ್ಯಾನಿಶ್-ಅಮೆರಿಕನ್ ಜನಸಂಖ್ಯೆಯನ್ನು ಹೊಂದಿರುವ ರಾಜ್ಯವಾಗಿದೆ. ಎಲ್ಲಾ ರಾಜ್ಯಗಳಲ್ಲೂ ಅದರಲ್ಲೂ ವಿಶೇಷವಾಗಿ ಪೂರ್ವ ದೇಶಗಳಲ್ಲಿ ಜರ್ಮನ್-ಅಮೆರಿಕನ್ ಪಂಗಡವು ದೊಡ್ಡ ಪಂಗಡವಾಗಿದೆ. ಥರ್ಸ್ಟನ್ ಕೌಂಟಿಯು(ಒಮಾಹಾ ಮತ್ತು ವಿನ್ನೆಬಾಗೊವನ್ನು ಒಳಗೊಂಡಿದ್ದು) ಅಮೆರಿಕನ್ ಇಂಡಿಯನ್ ಬಾಹುಳ್ಯದ ಪ್ರದೇಶವಾಗಿದೆ. ಮತ್ತು ಝೆಚ್ ಅಮೆರಿಕನ್ ಬಾಹುಳ್ಯವಿರುವ ಎರಡು ದೇಶಗಳಲ್ಲಿ ಬಟ್ಲರ್ ಕೌಂಟಿಯೂ ಒಂದಾಗಿದೆ. === ಗ್ರಾಮೀಣ ವಲಸೆ === ನೆಬ್ರಸ್ಕಾದ ಶೇ.89ರಷ್ಟು ಪಟ್ಟಣಗಳು 3,000ಕ್ಕಿಂತಲೂ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. ನೆಬ್ರಸ್ಕಾವು ಈ ಗುಣಲಕ್ಷಣಗಳನ್ನು ಉಳಿದ ಐದು ಮಧ್ಯ ಪಶ್ಚಿಮ ಮತು ದಕ್ಷಿಣದ ರಾಜ್ಯಗಳ (ಕನ್ಸಾಸ್, ಒಕ್ಲಹಾಮಾ, ಉತ್ತರ ಮತ್ತು ದಕ್ಷಿಣ ಡಕೋಟಾ ಮತ್ತು ಇಯೋವಾ) ಜೊತೆಗೆ ಹಂಚಿಕೊಂಡಿದೆ. ನೂರಕ್ಕೂ ಹೆಚ್ಚು ಪಟ್ಟಣಗಳು 1,000ಕ್ಕಿಂತ ಕಡಿಮೆ ಜನಸಂಖ್ಯೆಯನ್ನು ಹೊಂದಿವೆ. 93 ನೆಬ್ರಸ್ಕಾದ ಪಟ್ಟಣಗಳಲ್ಲಿ 89 ಪಟ್ಟಣಗಳ ಜನಸಂಖ್ಯೆಯು 1990 ಮತ್ತು 2000ದಲ್ಲಿ ಕುಂಠಿತಗೊಂಡಿರುವುದು ವರದಿಯಾಗಿದೆ. ಸರಾಸರಿ 0.06% (ಫ್ರಂಟಿಯರ್ ಕೌಂಟಿ) ಯಿಂದ 17.04% (ಹಿಚ್‌ಕಾಕ್ ಕೌಂಟಿ)ರವರೆಗೆ ಕುಂಠಿತಗೊಂಡಿದೆ. ರಾಜ್ಯದ ಇತರ ಭಾಗಗಳು ಉತ್ತಮ ಬೆಳವಣಿಗೆಯನ್ನು ಕಂಡಿವೆ. 2000ದಲ್ಲಿ ಒಮಾಹಾ ಪಟ್ಟಣವು 390,007 ಜನಸಂಖ್ಯೆಯನ್ನು ಹೊಂದಿತ್ತು. 2005ರಲ್ಲಿ ಪಟ್ಟಣದ ಅಂದಾಜು ಜನಸಂಖ್ಯೆ 414,521 ಆಗಿದೆ(ಇತ್ತೀಚೆಗೆ ಸೇರಿಸಿದ ಎಲ್ಕಾರ್ನ್ ಪಟ್ಟಣವನ್ನೂ ಸೇರಿ 427,872). ಐದು ವರ್ಷಗಳಲ್ಲಿ 6.3%ರಷ್ಟು ಜನಸಂಖ್ಯೆ ಬೆಳವಣಿಗೆ ಕಂಡಿದೆ. 2000ದಲ್ಲಿ ಲಿಂಕನ್ ಪಟ್ಟಣವು 225,581 ಮತ್ತು 2008ರಲ್ಲಿ ಅಂದಾಜು 251,624 ಜನಸಂಖ್ಯೆಯನ್ನು ಹೊಂದಿದ್ದು, 6.8%ರಷ್ಟು ಬೆಳವಣಿಗೆ ಕಂಡಿದೆ. ಸ್ಥಳೀಯ ಕನಿಷ್ಠ ಜನಸಂಖ್ಯೆಯನ್ನು ಅಭಿವೃದ್ಧಿಪಡಿಸಲು ಹಲವಾರು ಸ್ಥಳೀಯ ಶಾಲೆಗಳನ್ನು ತೆರೆಯಲಾಗಿದೆ. === ಧರ್ಮ === ನೆಬ್ರಸ್ಕಾ ಜನರ ಧಾರ್ಮಿಕ ನಂಬಿಕೆ: ಕ್ರಿಶ್ಚಿಯನ್ – 90% ಪ್ರೊಟೆಸ್ಟಂಟ್ – 61% ಲೂಥರನ್ – 16% ಮೆಥಡಿಸ್ಟ್ – 7% ಬ್ಯಾಪ್ಟಿಸ್ಟ್ – 9% ಪ್ರೆಸ್‌ಬಿಟೇರಿಯನ್ – 4% ಇತರೆ ಪ್ರೊಟೆಸ್ಟೆಂಟ್ ಗಳು – 12% ರೋಮನ್ ಕ್ಯಾಥೊಲಿಕ್ – 28% ಇತರ ಕ್ರಿಶ್ಚಿಯನ್ – 1% ಧರ್ಮದಲ್ಲಿ ನಂಬಿಕೆಯಿಲ್ಲದವರು – 9% ಇತರ ಧಾರ್ಮಿಕರು – 1% 2002ರಲ್ಲಿ ಕಂಡುಬಂದಂತೆ ಜನರು ವೈಯಕ್ತಿಕವಾಗಿ ನಡೆದುಕೊಳ್ಳುವ ಚರ್ಚ್‌ಗಳೆಂದರೆ : ಕ್ಯಾಥೊಲಿಕ್ ಚರ್ಚ್ (372,791), ಅಮೆರಿಕದ ಇವ್ಯಾಂಗಲಿಕಲ್ ಲೂಥರನ್ ಚರ್ಚ್(128,570), ಲೂಥರನ್ ಚರ್ಚ್ - ಮಿಸ್ಸೌರಿ ಸಿನೋಡ್(117,419) ಮತ್ತು ಯುನೈಟೆಡ್ ಮೆಥಡಿಸ್ಟ್ ಚರ್ಚ್ (117,277) == ತೆರಿಗೆಗಳು == ನೆಬ್ರೆಸ್ಕಾ ಬೆಳೆಯುವ ತೆರಿಗೆಯನ್ನು ಹೊಂದಿದ್ದು, ಅದರ ದರವು ಈ ರೀತಿಯಾಗಿದೆ: 2.56%>$0 3.57%>$2,400 5.12%>$17,500 6.84%>$27,700 == ಆರ್ಥಿಕ ವ್ಯವಸ್ಥೆ == ಬ್ಯೂರೋ ಆಫ್ ಎಕನಾಮಿಕ್ ಅನಲೈಸಿಸ್‌ ನಂತೆ ನೆಬ್ರಸ್ಕಾದ ನಿವ್ವಳ ರಾಜ್ಯ ಉತ್ಪನ್ನವು 2004ರಲ್ಲಿ $68 ಬಿಲಿಯನ್ ಆಗಿತ್ತು. ವೈಯಕ್ತಿಕ ತಲಾ ವರಮಾನವು 2004ರಲ್ಲಿ $31,339 ಆಗಿತ್ತು. ಇದು ರಾಷ್ಟ್ರದ 25ನೇ ಸ್ಥಾನದಲ್ಲಿದೆ. ನೆಬ್ರಸ್ಕಾವು ವಿಶಾಲ ಕೃಷಿ ವಲಯವನ್ನು ಹೊಂದಿದೆ. ಇದು ದನದ ಮಾಂಸ, ಹಂದಿ ಮಾಂಸ, ಕಾರ್ನ್ (ಜೋಳ) ಮತ್ತು ಸೋಯಾಬೀನ್ಸ್‌ನ ಬಹುಮುಖ್ಯ ಉತ್ಪಾದಕ ರಾಜ್ಯವಾಗಿದೆ. ಇತರ ಮುಖ್ಯ ಆರ್ಥಿಕ ವಲಯಗಳೆಂದರೆ, ಸಾರಿಗೆ (ರೈಲು ಮತ್ತು ಟ್ರಕ್), ಉತ್ಪಾದನೆ, ದೂರಸಂಪರ್ಕ, ಮಾಹಿತಿ ತಂತ್ರಜ್ಞಾನ ಮತ್ತು ವಿಮೆ. ನೆಬ್ರಸ್ಕಾವು 2.6% ರಿಂದ 6.8%ರವರೆಗಿನ ನಾಲ್ಕು ವೈಯಕ್ತಿಕ ಆದಾಯಕರ ಮಿತಿಯನ್ನು ಹೊಂದಿದೆ. ನೆಬ್ರಾಸ್ಕಾವು 5.5% ರಾಜ್ಯ ವ್ಯಾಪಾರಿ ತೆರಿಗೆಯನ್ನು ಹೊಂದಿದೆ. ಕೆಲವು ನೆಬ್ರಸ್ಕಾ ಪಟ್ಟಣಗಳು ಗರಿಷ್ಠ 1.5% ರವರೆಗೆ ಮಾರಾಟ ತೆರಿಗೆ ಮತ್ತು ಬಳಕೆ ತೆರಿಗೆಯನ್ನು ಹೊಂದಿವೆ. ನೆಬ್ರಸ್ಕಾದ ಡಕೋಟಾ ಕೌಂಟಿಯು ಮಾರಾಟ ತೆರಿಗೆಯನ್ನು ಹೊಂದಿದೆ. ವಿಶೇಷವಾಗಿ ತೆರಿಗೆ ಮುಕ್ತವಾಗಿಸಿದುದನ್ನು ಹೊರತುಪಡಿಸಿ ನೆಬ್ರಾಸ್ಕಾದ ಎಲ್ಲ ನೈಜ ಸಂಪತ್ತು ತೆರಿಗೆಯ ವ್ಯಾಪ್ತಿಗೆ ಒಳಪಟ್ಟಿದೆ. 1992ರಿಂದ, ವೈಯಕ್ತಿಕ ಸ್ವತ್ತುಗಳು ಮಾತ್ರ ತೆರಿಗೆಗೆ ಒಳಪಟ್ಟಿದೆ ಮತ್ತು ಇತರ ಎಲ್ಲ ಸ್ವತ್ತುಗಳೂ ತೆರಿಗೆಯಿಂದ ಮುಕ್ತವಾಗಿದೆ. ಪರಂಪರಾಗತ ತೆರಿಗೆಯನ್ನು ಕೌಂಟಿ ವಲಯದಲ್ಲೇ ಸಂಗ್ರಹಿಸಲಾಗುವುದು. ಜನವರಿ 2010ರವರೆಗೆ ರಾಜ್ಯದ ನಿರುದ್ಯೋಗ ಪ್ರಮಾಣವು ಕೇವಲ 4.6% ಆಗಿದೆ. === ಉದ್ಯಮ === ಅಗಸ್ಟ್‌ನ ಎರಡನೇ ವಾರಾಂತ್ಯವನ್ನು ಕೂಲ್ ಏಡ್ ಡೇಯ್ಸ್ 2019-07-01 ವೇಬ್ಯಾಕ್ ಮೆಷಿನ್ ನಲ್ಲಿ. ಜೊತೆ ಆಚರಿಸಲು 1927ರಲ್ಲಿ ಕೂಲ್ ಏಡ್‌ನ್ನು ಹಾಸ್ಟಿಂಗ್ಸ್‌ನ ಪಟ್ಟಣದಲ್ಲಿ ಎಡ್ವಿನ್ ಪರ್ಕಿನ್ಸ್ ಸಂಸ್ಥಾಪಿಸಿದರು. ಕೂಲ್ ಏಡ್ ನೆಬ್ರಾಸ್ಕಾದ ಅಧಿಕೃತ ಲಘುಪಾನೀಯ. ಕ್ಲಿಫ್ಟನ್ ಹಿಲ್ಲೆಗಸ್‌ರಿಂದ ನೆಬ್ರಾಸ್ಕಾದ ರೈಸಿಂಗ್ ಸಿಟಿಯಲ್ಲಿ ಕ್ಲಿಫ್ಸ್‌ನೋಟ್ಸ್ ಸಂಶೋಧಿಸಲ್ಪಟ್ಟಿತು. ಮೂಲ ಕೆನಡಿಯನ್ ಯೋಜನೆಯಾದ "ಕೋಲ್ಸ್ ನೋಟ್ಸ್"ನ್ನು ಇವರ ಪ್ರಚಾರವು ಒಳಗೊಂಡಿದೆ. ಒಮಾಹಾ ಪಟ್ಟಣವು ಬರ್ಕ್‌ಶೈರ್ ಹಾಥ್‌ವೇಯ ಮೂಲನೆಲೆಯಾಗಿದೆ. ಫೋರ್ಬ್ಸ್ ನಿಯತಕಾಲಿಕದಲ್ಲಿ 2009ರಲ್ಲಿ ಜಗತ್ತಿನ ಎರಡನೇ ಶ್ರೀಮಂತ ವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ವಾರ್ನ್ ಬಫೆಟ್ ಬರ್ಕ್‌ಶೈರ್ ಹಾಥ್‌ವೇಯ ಸಿಇಓ. ಕಾನ್ ಆಗ್ರಾ, ಮ್ಯುಚುವಲ್ ಆಫ್ ಒಮಾಹಾ, ಇನ್ಫೋಯುಎಸ್‌ಎ, ಟಿಡಿಅಮರಿಟ್ರೇಡ್, ವೆಸ್ಟ್ ಕಾರ್ಪೋರೇಷನ್, ವಾಲ್ಮೋಂಟ್ ಇಂಡಸ್ಟ್ರೀಸ್, ವುಡ್‌ಮನ್ ಆಫ್ ದಿ ವರ್ಲ್ಡ್, ಕೀವಿಟ್ ಕಾರ್ಪೋರೇಷನ್ ಮತ್ತು ಯೂನಿಯನ್ ಪ್ಯಾಸಿಫಿಕ್ ರೇಲ್‌ರೋಡ್ ಕೂಡಾ ಈ ಪಟ್ಟಣದಲ್ಲಿದೆ. ಯುನಿಫೈ ಕಂಪನಿಗಳು, ಸ್ಯಾಂಡ್‌ಹಿಲ್ಸ್ ಪಬ್ಲಿಶಿಂಗ್ ಕಂಪನಿ, ಡಂಕನ್ ಏವಿಯೇಷನ್ ಕಂಪನಿಗಳು ಲಿಂಕನ್‌ನಲ್ಲಿವೆ. ದಿ ಬಕಲ್ ಕಂಪನಿಯು ಕೆರ್ನೆಯಲ್ಲಿ ನೆಲೆಸಿದೆ. ಸಿಡ್ನಿಯು ಚಿಲ್ಲರೆ ವಸ್ತುಗಳ ಹೊರ ಸಾಗಾಣಿಕೆಯ ಕಂಪನಿಯಾದ ಕ್ಯಾಬೆಲಾದ ರಾಷ್ಟ್ರೀಯ ಮುಖ್ಯ ಕಚೇರಿಯಾಗಿದೆ. ಜಗತ್ತಿನ ಅತಿ ದೊಡ್ಡ ಟ್ರೇನ್ ಯಾರ್ಡ್ ಆದ ಯೂನಿಯನ್ ಪ್ಯಾಸಿಫಿಕ್ ಬೇಯ್ಲಿ ಯಾರ್ಡ್ ನಾರ್ತ್ ಪ್ಲೇಟ್‌ನಲ್ಲಿ ನೆಲೆಸಿದೆ. 1924ರಲ್ಲಿ ದಿ ವೈಸ್ ಗ್ರಿಪ್‌ನ್ನು ವಿಲಿಯಮ್ ಪೀಟರ್ಸನ್ ಸಂಶೋಧಿಸಿದರು, ಮತ್ತು 2008ರಲ್ಲಿ ಘಟಕವು ಮುಚ್ಚುವವರೆಗೂ ಡೆ ವಿಟ್‌ನಲ್ಲಿ ಉತ್ಪಾದನೆ ನಡೆಸಲಾಯಿತು. ಲಿಂಕನ್‌ರ ಕವಾಸಕಿ ಮೋಟರ್ಸ್ ಮೆನ್ಯುಫ್ಯಾಕ್ಚರಿಂಗ್ ಜೆಟ್-ಸ್ಕಿ, ಎಟಿವಿ, ಮ್ಯೂಲ್ ಉತ್ಪನ್ನಗಳನ್ನು ಉತ್ಪಾದಿಸುವ ಜಗತ್ತಿನ ಏಕೈಕ ಕವಾಸಾಕಿ ಘಟಕವಾಗಿದೆ. ಇದರಲ್ಲಿ 1200ಕ್ಕಿಂತಲೂ ಹೆಚ್ಚು ಜನ ಉದ್ಯೋಗಿಗಳಾಗಿದ್ದಾರೆ. == ಸಾರಿಗೆ == === ರೈಲುಮಾರ್ಗಗಳು === ನೆಬ್ರಸ್ಕಾವು ಶ್ರೀಮಂತ ರೈಲು ಮಾರ್ಗಗಳ ಇತಿಹಾಸವನ್ನು ಹೊಂದಿದೆ. 1862ರ ಪ್ಯಾಸಿಫಿಕ್ ರೈಲ್ವೆ ಕಾಯ್ದೆಯ ಅಡಿಯಲ್ಲಿ ಜುಲೈ 1, 1862ರಂದು ಒಮಾಹಾದಲ್ಲಿ ಯೂನಿಯನ್ ಪ್ಯಾಸಿಫಿಕ್ ರೈಲ್‌ರೋಡ್ ಸ್ಥಾಪನೆಯಾಯಿತು. ಜಗತ್ತಿನ ಅತಿ ದೊಡ್ಡ ರೈಲುಮಾರ್ಗಗಳ ವರ್ಗೀಕರಣ ಘಟಕವು ನಾರ್ಥ್ ಪ್ಲೇಟ್‌ನ ಬೇಯ್ಲಿ ಯಾರ್ಡ್‌ನಲ್ಲಿ ನೆಲೆಸಿದೆ. ರಾಜ್ಯಾದ್ಯಂತ ಟ್ರಾನ್ಸ್‌ಕಾಂಟಿನೆಂಟಲ್ ರೈಲುಮಾರ್ಗಗಳು ವಿಸ್ತರಿಸಿವೆ. ರಾಜ್ಯದಲ್ಲಿ ಕಾರ್ಯ ನಿರ್ವಹಿಸುವ ಇತರ ಮುಖ್ಯ ರೈಲು ಮಾರ್ಗಗಳೆಂದರೆ : ಆಮ್‌ಟ್ರಾಕ್, ಬರ್ಲಿಂಗ್ಟನ್ ನಾರ್ದರ್ನ್ & ಸಂತಾ ಫೆ ರೈಲ್ವೆ, ಕೆನಡಿಯನ್ ಪ್ಯಾಸಿಫಿಕ್ ರೈಲ್ವೆ ಮತ್ತು ಇಯೋವಾ ಇಂಟರ್‌ಸ್ಟೇಟ್ ರೈಲ್‌ರೋಡ್. === ರಸ್ತೆಗಳು ಮತ್ತು ಹೆದ್ದಾರಿಗಳು === ನೆಬ್ರಾಸ್ಕಾ ರಾಜ್ಯದ ಮೂಲಕ ಹೊರಡುವ ಅಂತರರಾಜ್ಯ ಹೆದ್ದಾರಿಗಳು ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ನೆಬ್ರಾಸ್ಕಾದಲ್ಲಿನ ಯು.ಎಸ್. ರಸ್ತೆಗಳು ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- ಟೆಂಪ್ಲೇಟು:- == ರಸ್ತೆ ಗುಣಮಟ್ಟ ಮತ್ತು ಸುರಕ್ಷತೆ == ನೆಬ್ರಸ್ಕಾದ ಡಿಯುಐ ಕಾನೂನು ರಸ್ತೆಯನ್ನು ಸುರಕ್ಷಿತವಾಗಿರಲು ಸಹಾಯ ಮಾಡುತ್ತದೆ. ರಕ್ತದಲ್ಲಿ ಅಲ್ಕೋಹಾಲ್ ಪ್ರಮಾಣ 0.08%ಕ್ಕಿಂತ ಹೆಚ್ಚಿದ್ದಾಗ ವಾಹನ ಓಡಿಸುವುದು ಅಪರಾಧವಾಗಿದೆ. 0.15%ಗಿಂತ ಹೆಚ್ಚು ಅಲ್ಕೋಹಾಲ್ ಪ್ರಮಾಣವಿದ್ದಲ್ಲಿ ಶಿಕ್ಷೆಯ ಪ್ರಮಾಣ ಹೆಚ್ಚಾಗಿರುತ್ತದೆ. ಮೊದಲ ಹಂತದ ಡಿಯುಐ ಪರಿಮಿತಿ ಮೀರುವಿಕೆಯು 7 ದಿನದ ಜೈಲು ವಾಸ, 400 ರಿಂದ 500 ಡಾಲರ್ ದಂಡ, 6 ತಿಂಗಳ ಪರವಾನಗಿ ರದ್ದಿಗೆ ಕಾರಣವಾಗುತ್ತದೆ. ಎರಡನೇ ಹಂತದಲ್ಲಿ 500 ಡಾಲರ್ ದಂಡ, 30ಮದಿನಗಳ ಜೈಲು ವಾಸ, ಒಂದು ವರ್ಷಕ್ಕಿಂತ ಕಡಿಮೆಯಿಲ್ಲದಂತೆ ಪರವಾನಗಿ ರದ್ದತಿಯನ್ನು ಒಳಗೊಂಡಿರುತ್ತದೆ. ಮೂರನೇ ಮತ್ತು ನಾಲ್ಕನೇ ಪರಿಮಿತಿ ಮೀರುವಿಕೆಯ ಪರಿಣಾಮವು 600 ರಿಂದ 10,000 ಡಾಲರ್ ದಂಡ, 90 ದಿನಗಳಿಂದ 5 ವರ್ಷದ ವರೆಗಿನ ಜೈಲುವಾಸ, 2ರಿಂದ 15 ವರ್ಷಗಳವರೆಗೆ ಪರವಾನಗಿ ರದ್ದತಿಯನ್ನು ಒಳಗೊಂಡಿರುತ್ತದೆ. ಈ ಕಾನೂನಿನಿಂದ ಮತ್ತಿತರ ಕಾರಣಗಳಾದ ರಸ್ತೆಗಳ ಗುಣಮಟ್ಟದಿಂದಾಗಿ ನೆಬ್ರಸ್ಕಾವು ದೇಶದಲ್ಲಿ ಸುರಕ್ಷಿತ ರಸ್ತೆಗಳಲ್ಲಿ ಒಂದಾಗಿದೆ. 2010ರ ರೀಡರ‍್ಸ್ ಡೈಜೆಸ್ಟ್‌ನ ಉತ್ತಮ ರಸ್ತೆಗಳ ಪಟ್ಟಿಯಲ್ಲಿ ಎಂಟನೇ ಸ್ಥಾನವನ್ನು ಪಡೆದುಕೊಂಡಿದೆ(ಎಲ್ಲಾ 50 ರಾಜ್ಯಗಳಲ್ಲಿ). ನೆಬ್ರಸ್ಕಾ ಡಿಪಾರ್ಟ್‌ಮೆಂಟ್ ಆಫ್ ರೋಡ್ಸ್‌ನಿಂದ ಚಾಲಕರು ರಸ್ತೆಗಳ ಸ್ಥಿತಿಯ ಬಗ್ಗೆ ಮಾಹಿತಿಯನ್ನು ಪಡೆಯಬಹುದು. == ಕಾನೂನು ಮತ್ತು ಸರ್ಕಾರ == 1875ರಲ್ಲಿ ಎರವಲು ಪಡೆದ ನೆಬ್ರಸ್ಕಾ ಸಂವಿಧಾನದ ಚೌಕಟ್ಟಿನೊಳಗೆ ನೆಬ್ರಸ್ಕಾ ಸರ್ಕಾರವು ಕಾರ್ಯನಿರ್ವಹಿಸುತ್ತದೆ. ಮತ್ತು ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗ ಎಂಬ ಮೂರು ವಿಭಾಗಗಳಾಗಿ ವಿಂಗಡಿಸಲ್ಪಟ್ಟಿದೆ. === ಕಾರ್ಯಾಂಗ ಶಾಖೆ === ಕಾರ್ಯಾಂಗ ಶಾಖೆಯ ಮುಖ್ಯಸ್ಥ ಗವರ್ನರ್ ಡೇವ್ ಹೇಯ್ನ್‌ಮನ್. ಕಾರ್ಯಾಂಗ ಶಾಖೆಯ ಇತರ ಚುನಾಯಿತ ಅಧಿಕಾರಿಗಳೆಂದರೆ ಲೆಫ್ಟಿನೆಂಟ್ ಗವರ್ನರ್ ರಿಕಿ ಶೀಹಿ(ಗವರ್ನರ್ ಪಟ್ಟಿಯಲ್ಲಿ ಚುನಾಯಿತ), ಅಟಾರ್ನಿ ಜನರಲ್ ಜಾನ್ ಬ್ರುನಿಂಗ್, ರಾಜ್ಯದ ಕಾರ್ಯದರ್ಶಿ ಜಾನ್ ಎ. ಗೇಲ್, ರಾಜ್ಯ ಖಜಾಂಚಿ ಶೇನ್ ಓಸ್ಬಾರ್ನ್ ಮತ್ತು ರಾಜ್ಯ ಲೆಕ್ಕಿಗ ಮೈಕ್ ಫೊಲೆ. ಕಾರ್ಯಾಂಗ ಶಾಖೆಯ ಎಲ್ಲಾ ಚುನಾಯಿತ ಅಧಿಕಾರಿಗಳು ನಾಲ್ಕು ವರ್ಷ ಅವಧಿಯವರೆಗೆ ಸೇವೆಸಲ್ಲಿಸುತ್ತಾರೆ. === ಶಾಸಕಾಂಗ ಶಾಖೆ === ನೆಬ್ರಸ್ಕಾವು ಸಂಯುಕ್ತ ಸಂಸ್ಥಾನದಲ್ಲೇ ಏಕಸಭೆಯ ಶಾಸಕಾಂಗವನ್ನು ಹೊಂದಿರುವ ಏಕೈಕ ರಾಜ್ಯವಾಗಿದೆ. ಈ ಮನೆಯನ್ನು ಅಧಿಕೃತವಾಗಿ "ಲೆಜಿಸ್ಲೇಚರ್" ಎಂದು ಸರಳವಾಗಿ ಹೆಸರಿಸಲಾಗುತ್ತದೆ. ಮತ್ತು ಬಹುಸಾಮಾನ್ಯವಾಗಿ "ಏಕಸಭೆಯ" ಎಂದು ಕರೆಯಲಾಗುತ್ತದೆ. ಇದರ ಸದಸ್ಯರು ತಮ್ಮನ್ನು "ಸೆನೇಟರ‍್ಸ್" ಎಂದು ಕರೆದುಕೊಳ್ಳುತ್ತಾರೆ. ನೆಬ್ರಸ್ಕಾದ ಶಾಸಕಾಂಗವು ಸಂಯುಕ್ತ ಸಂಸ್ಥಾನದಲ್ಲೇ ಏಕೈಕ ಪಕ್ಷೇತರ ಶಾಸಕಾಂಗವಾಗಿದೆ. ಚುನಾಯಿತ ಸೆನೇಟರ್‌ಗಳ ನಾಮಪತ್ರದಲ್ಲಿ ಯಾವುದೇ ಪಕ್ಷದ ಹೆಸರಿರುವುದಿಲ್ಲ ಮತ್ತು ಸ್ಪೀಕರ್ ಮತ್ತು ಮಂಡಳಿ ಮುಖ್ಯರು ಚುನಾಯಿತರಾಗಿರುತ್ತಾರೆ. ಆದ್ದರಿಂದ ಯಾವುದೇ ಪಕ್ಷದ ಸದಸ್ಯರು ಈ ಸ್ಥಾನಗಳಿಗೆ ಆಯ್ಕೆಯಾಗಬಹುದು. ನೆಬ್ರಸ್ಕಾ ಶಾಸಕಾಂಗವು ಮೂರನೇ ಐದರ ಬಾಹುಳ್ಯದಲ್ಲಿ ಗವರ್ನರ್‌ರ ವೆಟೋ ಅಧಿಕಾರವನ್ನು ಹೊಂದಿದೆ. ಎರಡನೇ ಮೂರು ಬಾಹುಳ್ಯವು ಇತರ ಕೆಲವು ರಾಜ್ಯಗಳಲ್ಲಿ ಅಗತ್ಯವಿದೆ. ನೆಬ್ರಸ್ಕಾ ಶಾಸಕಾಂಗವು 1922 ಮತ್ತು 1932ರಲ್ಲಿ ನಿರ್ಮಿಸಲ್ಪಟ್ಟ ಮೂರನೇ ನೆಬ್ರಸ್ಕಾ ಸ್ಟೇಟ್ ಕ್ಯಾಪಿಟಲ್ ಕಟ್ಟಡದಲ್ಲಿ ಸೇರುತ್ತದೆ. . . ಇದು ಬರ್ಟ್ರಮ್ ಜಿ. ಗೂಡ್‌ಹ್ಯೂ ಅವರಿಂದ ಯೋಜಿಸಲ್ಪಟ್ಟಿತ್ತು. ಇಂಡಿಯಾನಾ ಲೈಮ್‌ಸ್ಟೋನ್‌ನಿಂದ ನಿರ್ಮಿಸಲ್ಪಟ್ಟ ಈ ಕ್ಯಾಪಿಟಲ್‌ನ ಮೂಲ. 400 ಅಡಿ ಎತ್ತರದ ಕಟ್ಟಡವು ಈ ಅಡಿಪಾಯದಿಂದ ಎದ್ದು ನಿಂತಿದೆ. ಕ್ಯಾಪಿಟಲ್‌ನಲ್ಲಿ ಅತಿ ಮುಖ್ಯವಾದ ದಿ ಗೋಲ್ಡನ್ ಸೋವರ್ ಎಂಬ 19 ಅಡಿ ಎತ್ತರದ ಕಂದು ಬಣ್ಣದ ಪ್ರತಿಮೆಯು ಕೃಷಿಯನ್ನು ಪ್ರತಿನಿಧಿಸುತ್ತದೆ. ರಾಜ್ಯದ ಕ್ಯಾಪಿಟಾಲ್ ಕಟ್ಟಡ ನಿರ್ಮಾಣದಲ್ಲಿ ಒಂದು ಸಾಧನೆಯಾಗಿದೆ. ಇದು ಅಮೆರಿಕನ್ ಇನ್ಸ್‌ಟಿಟ್ಯೂಟ್ ಆಫ್ ಆರ್ಕಿಟೆಕ್ಟ್ಸ್‌ನಿಂದ ಗುರುತಿಸಲ್ಪಟ್ಟಿದೆ. ಸಂಯುಕ್ತ ಸಂಸ್ಥಾನದ ಸೆನೆಟರ್ ಜಾರ್ಜ್ ನೋರ್ರಿಸ್ ಮತ್ತು ಇತರ ನೆಬ್ರಸ್ಕಾದವರು ಏಕಸಭೆಯ ಶಾಸಕಾಂಗದ ಯೋಜನೆಯನ್ನು ಬೆಂಬಲಿಸಿದರು ಮತ್ತು ಮತಗಳಿಂದ ಈ ವಿಚಾರವನ್ನು ನಿರ್ಧರಿಸಬೇಕೆಂದು ಆಗ್ರಹಿಸಿದರು. ನೋರಿಸ್ ವಾದಿಸಿದಂತೆ: ಏಕಸಭೆಯ ಬೆಂಬಲಿಗರ ಪ್ರಕಾರ ಒಂದು ದ್ವಿಸಭೆಯ ಶಾಸಕಾಂಗವು ಅಸೆಂಬ್ಲಿ ಮತ್ತು ಸೆನೆಟ್ ಶಾಸಕಾಂಗವನ್ನು ಹೊಂದಿಸುವ ಸಮಿತಿಗಳಲ್ಲಿ ಗಮನಾರ್ಹವಾದ ಪ್ರಜಾಪ್ರಭುತ್ವವಲ್ಲದ ವೈಶಿಷ್ಟ್ಯವನ್ನು ಹೊಂದಿರುತ್ತದೆ. ಇಂತಹ ಸಮಿತಿಗಳಲ್ಲಿ ಮತದಾನವು ಗುಟ್ಟಿನದಾಗಿರುತ್ತದೆ, ಮತ್ತು ಅದು ಕೆಲವೊಮ್ಮೆ ಎರಡೂ ಮನೆಗಳು ಒಪ್ಪದಿರುವ ಮಸೂದೆಗಳಿಗೆ ನಿಬಂಧನೆಗಳನ್ನು ಸೇರಿಸುವ ಸಾಧ್ಯತೆಯಿದೆ. ನೆಬ್ರಸ್ಕಾದ ಏಕಸಭೆಯ ಶಾಸಕಾಂಗವು ಕೇವಲ ಒಂದೇ ವಿಷಯದ ಮೇಲಿನ ಬಿಲ್‌ಗಳನ್ನು ಹೊಂದಿರಬೇಕು ಮತ್ತು ಕನಿಷ್ಠ ಐದು ದಿನಗಳ ಅವಧಿಯನ್ನು ನೀಡಬೇಕೆಂದು ಕಾನೂನು ನಿರ್ಮಿಸಿದೆ. ಅಂತಿಮವಾಗಿ 1934ರಲ್ಲಿ ಗ್ರೇಟ್ ಡಿಪ್ರೆಶನ್‌ನ ಆದಾಯ ಪತ್ರ ಸಂಬಂಧಿತ ಒತ್ತಡದಿಂದಾಗಿ ನೆಬ್ರಸ್ಕಾದ ಏಕಸಭೆಯ ಶಾಸಕಾಂಗವು ರಾಜ್ಯದ ಹಿತಾಸಕ್ತಿಯಿಂದ ಕಾರ್ಯಗತವಾಯಿತು. ಪರಿಣಾಮವಾಗಿ, ಅಸೆಂಬ್ಲಿಯನ್ನು (ಮನೆಯನ್ನು) ವಿಸರ್ಜಿಸಲಾಯಿತು. ಇಂದಿನ ನೆಬ್ರಸ್ಕಾದ ಶಾಸಕರನ್ನು ಸಾಮಾನ್ಯವಾಗಿ "ಸೆನೇಟರ್ಸ್" ಎಂದು ಕರೆಯಲಾಗುತ್ತದೆ. === ನ್ಯಾಯಾಂಗ ಶಾಖೆ === ನೆಬ್ರಸ್ಕಾದ ನ್ಯಾಯಾಂಗ ವ್ಯವಸ್ಥೆಯು ಸಂಯುಕ್ತವಾಗಿದೆ. ನೆಬ್ರಸ್ಕಾ ಸುಪ್ರೀಂ ಕೋರ್ಟ್ ಎಲ್ಲಾ ನ್ಯಾಯಾಲಯದ ಆಡಳಿತದ ಅಧಿಕಾರವನ್ನು ಹೊಂದಿದೆ. ಮಿಸ್ಸೌರಿ ಪ್ಲಾನ್‌ನ್ನು ಎಲ್ಲಾ ಮಟ್ಟದ ಜಡ್ಜ್‌ಗಳ ನೇಮಕಕ್ಕೆ ಉಪಯೋಗಿಸಲ್ಪಡುತ್ತದೆ. ನೆಬ್ರಸ್ಕಾದ ಕಡಿಮೆ ದರ್ಜೆಯ ಕೋರ್ಟ್ ಎಂದರೆ ಕೌಂಟಿ ಕೋರ್ಟ್‌ಗಳು. ಅದರ ನಂತರದಲ್ಲಿ 12 ಜಿಲ್ಲಾ ನ್ಯಾಯಾಲಯಗಳು( ಒಂದು ಅಥವಾ ಹೆಚ್ಚು ಕೌಂಟಿಗಳನನು ಹೊಂದಿರುವ). ಜಿಲ್ಲಾ ನ್ಯಾಯಾಲಯಗಳು, ಅಪ್ರಾಪ್ತರ ನ್ಯಾಯಾಲಯ ಮತ್ತು ಕಾರ್ಮಿಕರ ನ್ಯಾಯಾಲಯದ ದೂರನ್ನು ಕೋರ್ಟ್ ಆಫ್ ಅಪೀಲ್ಸ್ ಆಲಿಸುತ್ತದೆ. ನೆಬ್ರಸ್ಕಾದ ಸುಪ್ರೀಂ ಕೋರ್ಟ್ ದೂರುಗಳಿಗೆ ಅಂತಿಮವಾದ ನ್ಯಾಯಾಲಯವಾಗಿರುತ್ತದೆ. 2008ರಿಂದ 2009ರವರೆಗೆ ನೆಬ್ರಸ್ಕಾ ಸುಪ್ರೀಂ ಕೋರ್ಟ್ ಕಾನೂನಿನಂತೆ ಮರಣದಂಡನೆ ಶಿಕ್ಷೆಯು ರಾಜ್ಯ ಸಂವಿಧಾನದಲ್ಲಿ ವಿವಾದದಲ್ಲಿದೆ. ಮತ್ತು ನೆಬ್ರಸ್ಕಾವು ಮರಣದಂಡನೆ ಕಾನೂನು ಜಾರಿಯಲ್ಲಿಲ್ಲ. (ಈ ಕಾನೂನಿಗೂ ಮೊದಲು ನೆಬ್ರಸ್ಕಾವು ಮರಣದಂಡನೆಯ ಮೂಲ ವಿಧಾನವಾದ ವಿದ್ಯುಚ್ಛಕ್ತಿಯನ್ನು ಉಪಯೋಗಿಸಿ ಮರಣದಂಡನೆಯನ್ನು ವಿಧಿಸುವ ಜಗತ್ತಿನ ಏಕೈಕ ರಾಜ್ಯವಾಗಿತ್ತು.) ಮೇ 2009ರಲ್ಲಿ ಶಾಸಕರು ಅನುಮೋದಿಸಿದ ಮತ್ತು ಗವರ್ನರ್ ಸಹಿ ಮಾಡಿದ ಬಿಲ್‌ನಂತೆ ಮರಣದಂಡನೆಯ ವಿಧಾನವನ್ನು ಲೀಥಲ್ ಇಂಜಕ್ಷನ್‌ಗೆ ಬದಲಾಯಿಸಲಾಯಿತು. ಏನೇ ಆದರೂ ನೆಬ್ರಸ್ಕಾದಲ್ಲಿ ಮರಣದಂಡನೆಯು ಪದೇ ಪದೇ ಸಂಭವಿಸುವುದಿಲ್ಲ. 21ನೇ ಶತಮಾನದಲ್ಲಿ ಯಾರೂ ಮರಣದಂಡನೆ ಶಿಕ್ಷೆಗೆ ಒಳಗಾಗಿಲ್ಲ. ಮತ್ತು ಕಳೆದ ಕೆಲವು ದಶಕಗಳಲ್ಲಿ ಮರಣದಂಡನೆಯನ್ನು ನಿಷೇಧಿಸುವ ಬಗ್ಗೆ ಗಂಭೀರವಾಗಿ ಚರ್ಚೆಗಳಾಗಿವೆ. === ಫೆಡರಲ್ ಸರ್ಕಾರದ ಪ್ರಾತಿನಿಧ್ಯ === ನೆಬ್ರಸ್ಕಾದ ಸಂಯುಕ್ತ ಸಂಸ್ಥಾನದ ಸೆನೇಟರ್‌ಗಳೆಂದರೆ ಜೂನಿಯರ್ ಸೆನೇಟರ್ ಮೈಕ್ ಜೋಹಾನ್ಸ್ (ಆರ್), ಮತ್ತು ಸೀನಿಯರ್ ಸೆನೇಟರ್ ಆದ ಬೆನ್ ನೆಲ್ಸನ್ (ಡಿ). ನೆಬ್ರಸ್ಕಾವು ಹೌಸ್ ರೆಪ್ರೆಸೆಂಟೇಟಿವ್ಸ್‌ಗಳಾಗಿ ಮೂವರು ಪ್ರತಿನಿಧಿಗಳನ್ನು ಹೊಂದಿದೆ: ಮೊದಲ ಜಿಲ್ಲೆಯ ಜೆಫ್ ಫೋರ್ಟನ್‌ಬೆರ್ರಿ (ಆರ್), ಎರಡನೇ ಜಿಲ್ಲೆಯಿಂದ ಲೀ ಟೆರ್ರಿ(ಆರ್), ಮತ್ತು ಮೂರನೇ ಜಿಲ್ಲೆಯಿಂದ ಅಡ್ರಿಯನ್ ಎಂ.ಸ್ಮಿತ್. ಅಧ್ಯಕ್ಷೀಯ ಚುನಾವಣೆಯಲ್ಲಿ ಮತವನ್ನು ಒಡೆಯುವ ಅವಕಾಶವನ್ನು ನೆಬ್ರಸ್ಕಾದ ಕೇವಲ ಎರಡು ರಾಜ್ಯಗಳಲ್ಲಿ ಕಲ್ಪಿಸಲಾಗಿದೆ. 1991 ರಿಂದ ನೆಬ್ರಸ್ಕಾದ ಐದು ರಾಜ್ಯಗಳಲ್ಲಿ ಎರಡು ರಾಜ್ಯಗಳು ರಾಜ್ಯಾದ್ಯಂತದ ಚುನಾವಣೆಯಲ್ಲಿ ಗೆಲುವಿನ ಆಧಾರದಲ್ಲಿ ಗೌರವಿಸಲ್ಪಟ್ಟಿದೆ, ಅದೇವೇಳೆ ಇತರ ಮೂರು ರಾಜ್ಯಗಳು ಪ್ರತಿ ಮೂರು ರಾಜಕೀಯ ಜಿಲ್ಲೆಗಳಲ್ಲಿ ಗರಿಷ್ಠ ಮತ ಗಳಿಕೆಯ ರಾಜ್ಯವಾಗಿದೆ. 2008ರ ಅಧ್ಯಕ್ಷೀಯ ಚುನಾವಣೆಯಲ್ಲಿ ನೆಬ್ರಸ್ಕಾದ ಮತಗಳು ಮಾತ್ರ ಒಡೆದುಹೋಗಿದ್ದವು. ಆ ಚುನಾವಣೆಯಲ್ಲಿ ಡೆಮೋಕ್ರಾಟ್ ಬರಾಕ್ ಒಬಾಮ ಒಮಾಹಾವನ್ನು ಒಳಗೊಂಡ ಎರಡನೇ ರಾಜಕೀಯ ಜಿಲ್ಲೆಯಲ್ಲಿ ಕಡಿಮೆ ಅಂತರದ 3,325 ಮತಗಳಿಂದ ಗೆದ್ದಿದ್ದರು. ಇದು ಅವರಿಗೆ ಗೆಲುವಿನ ಮತವಾಯಿತು. ಅದೇ ವೇಳೆ ರಿಪಬ್ಲಿಕನ್ ಪಕ್ಷದ ಜಾನ್ ಮೆಕ್‌ಕೇನ್ ರಾಜ್ಯದ ಇನ್ನುಳಿದ ಮತಗಳನ್ನು ಗೆದ್ದರು ಮತ್ತು ಇದು ಶೇಕಡಾ 15ರಷ್ಟಾಗುವ ನಾಲ್ಕು ಎಲೆಕ್ಟೋರಲ್ ಮತಗಳಾಗಿತ್ತು. === ರಾಜಕೀಯ === ಇತಿಹಾಸದ ತುಂಬಾ ನೆಬ್ರಸ್ಕಾವು ಗಟ್ಟಿಯಾದ ರಿಪಬ್ಲಿಕನ್ ರಾಜ್ಯ. 1940ರವರೆಗೆ ಒಂದು ಅಧ್ಯಕ್ಷೀಯ ಚುನಾವಣೆ ಮತ್ತು 1964ರಲ್ಲಿನ ಲಿಂಡನ್ ಬಿ.ಜಾನ್ಸನ್‌ರ ಹೋರಾಟದ ಚುನಾವಣೆಯನ್ನು ಹೊರತುಪಡಿಸಿ ರಿಪಬ್ಲಿಕನ್ನರು ರಾಜ್ಯವನ್ನು ಆಳಿದ್ದಾರೆ. ಜಾರ್ಜ್ ಡಬ್ಲ್ಯು ಬುಶ್‌ರ 2004ರ ಅಧ್ಯಕ್ಷೀಯ ಚುನಾವಣೆಯಲ್ಲಿ ರಾಜ್ಯದ ಐದು ಎಲೆಕ್ಟೋರಲ್ ಮತಗಳನ್ನು ಶೇಕಡಾ 33 ಮತಗಳಿಂದ ಮತ್ತು ಒಟ್ಟು ಶೇಕಡಾ 65.9% ಮತಗಳಿಂದ ಗೆದ್ದರು. ಎರಡು ಅಮೆರಿಕನ್ ಇಂಡಿಯನ್ ಮೀಸಲು ಕ್ಷೇತ್ರವಾದ ಥರ್ಸ್ಟನ್ ಕೌಂಟಿಯಲ್ಲಿ ಮಾತ್ರ ಜಾನ್ ಕೆರ್ರಿಗೆ ಮತ ಚಲಾಯಿಸಿದ್ದರು. ಸದ್ಯದ ನೆಬ್ರಸ್ಕಾ ರಾಜಕೀಯದಲ್ಲಿನ ರಿಪಬ್ಲಿಕನ್ ಪ್ರಭಾವದ ಹೊರತಾಗಿ, ರಾಜ್ಯ ಮತ್ತು ಫೆಡರಲ್‌ಗೆ ಎರಡೂ ಪಕ್ಷಗಳ ಸ್ವತಂತ್ರ ಸದಸ್ಯರನ್ನು ಆರಿಸಿ ಕಳುಹಿಸಿದ ದೊಡ್ಡ ಸಂಪ್ರದಾಯವನ್ನು ಹೊಂದಿದೆ. ಉದಾಹರಣೆಗಳೆಂದರೆ: ಜಾರ್ಜ್ ನೋರಿಸ್ (ಸ್ವತಂತ್ರವಾಗಿ ಸೆನೇಟ್‌ನಲ್ಲಿ ಕೆಲವು ವರ್ಷ ಸೇವೆ ಸಲ್ಲಿಸಿದ), ಜೆ.ಜೇಮ್ಸ್ ಎಕ್ಸಾನ್ ಮತ್ತು ಬಾಬ್ ಕೆರ್ರಿ. ಮತದಾರರು ಇತ್ತೀಚಿನ ವರ್ಷಗಳಲ್ಲಿ ಸಂಯುಕ್ತ ಸಂಸ್ಥಾನದ ಕನ್ಸರ್ವೇಟಿವ್ ಚುನಾವಣೆಯಲ್ಲಿ ಮೈಕ್ ಜೋಹಾನ್ಸ್ ಮತ್ತು ಸಂಯುಕ್ತ ಸಂಸ್ಥಾನದ ಸೆನೇಟ್‌ನಲ್ಲಿ ಕನ್ಸರ್ವೇಟಿವ್ ಡೆಮೋಕ್ರಾಟ್ ಎಂದು ಕರೆಯಲ್ಪಡುವ ಬೆನ್ ನೆಲ್ಸನ್ ಮರು ಮತದಾನದಲ್ಲಿ ಮತದಾರರ ಒಲವು ಹಿಮ್ಮುಖವಾಗಿದೆ. ಲಿಂಕನ್ ಪಟ್ಟಣವು ನೆಬ್ರಸ್ಕಾದಲ್ಲೇ ಅತೀ ಹೆಚ್ಚು ಡೆಮೋಕ್ರಾಟ್ ಪಟ್ಟಣವೆಂದು ಗುರುತಿಸಲ್ಪಟ್ಟಿದೆ. == ಪ್ರಮುಖ ನಗರಗಳು ಮತ್ತು ಪಟ್ಟಣಗಳು == ಎಲ್ಲಾ ಜನಸಂಖ್ಯೆಯ ಅಂಕಿಗಳು 2008ರ ಜನಗಣತಿ ಬ್ಯೂರೊದ ಅಂದಾಜುಗಳು. === ಅತೀ ದೊಡ್ಡ ನಗರಗಳು === === ನಗರ ಪ್ರದೇಶಗಳು === ಇತರೆ ಪ್ರದೇಶಗಳು ಗ್ರ್ಯಾಂಡ್ ಐಸ್‌ಲ್ಯಾಂಡ್, ಹ್ಯಾಸ್ಟಿಂಗ್ಸ್ ಮತ್ತು ಕೀಯರ್ನಿ ಒಳಗೊಂಡ "ಮೂರು ನಗರಗಳ" ಪ್ರದೇಶ ಜೊತೆಗೆ ಜನಸಂಖ್ಯೆ ಒಟ್ಟುಗೂಡಿಸಿದಾಗ 150,000 ಕ್ಕಿಂತ ಹೆಚ್ಚು. ನೆಬ್ರಸ್ಕಾದ ಈಶಾನ್ಯ ಮೂಲೆಯು ಸಿಯಾಕ್ಸ್‌ಲ್ಯಾಂಡ್‌ನ ಪ್ರಾಂತವಾಗಿದೆ. == ಶಿಕ್ಷಣ == === ಕಾಲೇಜ್‌ಗಳು ಮತ್ತು ವಿಶ್ವವಿದ್ಯಾಲಯಗಳು === == ಸಂಸ್ಕೃತಿ == ಜೆ.ಸ್ಟೆರ್ಲಿಂಗ್ ಮೊರ್ಟನ್‌ನಿಂದ ಆರ್ಬರ್ ಡೇ ಸ್ಥಾನೆಯಾಯಿತು. ದ ನ್ಯಾಷನಲ್ ಆರ್ಬರ್ ಡೇ ಫೌಂಡೇಶನ್ ಇದರ ಮುಖ್ಯಕಛೇರಿಯು ನೆಬ್ರಸ್ಕಾ ನಗರದ ಅವನ ಮನೆಯ ಸಮೀಪವಿದೆ. ನೆಬ್ರಸ್ಕಾ ನಗರದ ಹೆಬ್ರಾನ್‌ನಲ್ಲಿನ ಉಯ್ಯಾಲೆ, ಐದನೇಯ ಮತ್ತು ಜೆಫರ್ಸನ್ ರಸ್ತೆಯ ಪಾರ್ಕ್‌ನಲ್ಲಿನ ದ್ವಾರಮಂಟಪ ಉಯ್ಯಾಲೆಯು ಪ್ರಪಂಚದಲ್ಲಿಯೇ ಉದ್ದನೆಯದು ಎಂದು ಹೇಳಲಾಗಿದೆ,ಹದಿನೆಂಟು ವಯಸ್ಕರು ಅಥವಾ ಇಪ್ಪತ್ಕಾಲ್ಕು ಮಕ್ಕಳಿಗೆ ಸಾಕಾಗುವಷ್ಟು ಉದ್ದವಾಗಿದೆ. ನೆಬ್ರಸ್ಕಾ ಹಸ್ಕರ್ ಫುಟ್ಬಾಲ್ ನೆಬ್ರಸ್ಕಾದ ಹಲವು ನಿವಾಸಿಗಳನ್ನು ಪ್ರಭಾವಗೊಳಿಸಿದೆ. ತವರಿನ ಫುಟ್ಬಾಲ್ ಆಟದ ಸಮಯದಲ್ಲಿ,ಲಿಂಕನ್ ನಲ್ಲಿನ ಮೊಮೊರಿಯಲ್ ಸ್ಟೇಡಿಯಂ, ಸಾಮರ್ಥ್ಯವು 85,500,ಇದು ನೆಬ್ರಸ್ಕಾದ ಮೂರನೇಯ- ದೊಡ್ಡ ನಗರದಷ್ಟಾಗುತ್ತದೆ. 1920ರಲ್ಲಿ ಇಥೆಲ್ ಟಿ.ವೀಡ್ ಮಿಕ್‌ರಿಂದ ಒಮಾಹಾದಲ್ಲಿ ಜಾಬ್ಸ್ ಡಾಟರ್ಸ್ ಸ್ಥಾಪಿಸಲಾಯಿತು. ಈಗ ಪುಣ್ಯ ಸ್ಥಳಗಳಲ್ಲಿ ಕೆನಡಾ ,ಆಸ್ಟ್ರೇಲಿಯಾ,ಬ್ರೆಜಿಲ್,ಮತ್ತು ಫಿಲಿಫೈನ್ಸ್ ಗಳಿವೆ. === ಕ್ರೀಡೆಗಳು === ವೃತ್ತಿಪರ ಆಟಗಳು ಲಿಂಕನ್ ಸಾಲ್ಟ್‌ಡಾಗ್ಸ್ – ಅಮೆರಿಕನ್ ಅಸೋಸಿಯೇಶನ್ (ಸ್ವತಂತ್ರ ಮೈನರ್ ಲೀಗ್ ಬೆಸ್‌ಬಾಲ್) ಒಮಾಹಾ ಬೀಫ್ – ಯುನೈಟೆಡ್ ಇನ್‌ಡೋರ್ ಫುಟ್ಬಾಲ್ ಒಮಾಹಾ ರಾಯಲ್ಸ್ – ಫೆಸಿಫಿಕ್ ಕೋಸ್ಟ್ ಲೀಗ್ (ಎಎಎ ಮೈನರ್ ಲೀಗ್ ಬೆಸ್‌ಬಾಲ್; ಕಾನ್ಸಾಸ್ ಸಿಟಿ ರಾಯಲ್ಸ್‌ನ ಅಂಗ ಎನ್‌ಸಿಎಎ ಡಿವಿಜನ್ ಕಾಲೇಜು ಆಟಗಳು ಕ್ರೈಗ್ಟನ್ ಬ್ಲೂಜೇಸ್ ನೆಬ್ರಸ್ಕಾ ಕಾರ್ನ್‌ಹಸ್ಕರ್ಸ್ ಒಮಾಹಾದಲ್ಲಿನ ನೆಬ್ರಸ್ಕಾ ವಿಶ್ವವಿದ್ಯಾಲಯ (ಮವೆರಿಕ್ಸ್ ಐಸ್ ಹಾಕಿ ಒಂದೆ) ಎನ್‌ಸಿಎಎ ಡಿವಿಜನ್ ಕಾಲೇಜ್ ಆಟಗಳು ಕೀಯರ್ನಿಯಲ್ಲಿನ ನೆಬ್ರಸ್ಕಾ ವಿಶ್ವವಿದ್ಯಾಲಯ ಆ‍ಯ್‌0ತೆಲೋಪ್ಸ್ (ಲೋಪರ್ಸ್) ಒಮಾಹಾದಲ್ಲಿನ ನೆಬ್ರಸ್ಕಾ ವಿಶ್ವವಿದ್ಯಾಲಯ ಮವೆರಿಕ್ಸ್ (ಐಸ್ ಹಾಕಿ ಹೊರತಾಗಿ ಎಲ್ಲ ಆಟಗಳು) ವೆಯ್ನೆ ರಾಜ್ಯ ಕಾಲೇಜ್ ವಿಂಡ್‌ಕ್ಯಾಟ್ಸ್ ಚದ್ರೋನ್ ರಾಜ್ಯ ಕಾಲೇಜ್ ಈಗಲ್ಸ್ ಕಿರಿಯರ ಮಟ್ಟದ ಆಟಗಳು: ಯುನೈಟೆಡ್ ಸ್ಟೇಟ್ಸ್ ಹಾಕಿ ಲೀಗ್ ಲಿಂಕನ್ ಸ್ಟಾರ್ಸ್ ಒಮಾಹಾ ಲಾನ್ಸರ್ಸ್ ಟ್ರೈ-ಸಿಟಿ ಸ್ಟಾರ್ಮ್ == ಆಕರಗಳು == == ಗ್ರಂಥಸೂಚಿ == == ಬಾಹ್ಯ ಕೊಂಡಿಗಳು == ನೆಬ್ರಸ್ಕಾ ರಾಜ್ಯ ಸರ್ಕಾರ್ ನೆಬ್ರಸ್ಕಾಗೆ ಶಕ್ತಿ ಪ್ರೊಫೈಲ್ 2008-05-07 ವೇಬ್ಯಾಕ್ ಮೆಷಿನ್ ನಲ್ಲಿ. ಯುಎಸ್‌ಜಿ‌ಎಸ್ ರೀಯಲ್ ಟೈಮ್, ಜೀಯೋಗ್ರಾಫಿಕ್ ಆಂಡ್ ಅಥರ್ ಸೈಂಟಿಫಿಕ್ ರಿಸೋರ್ಸಸ್ ಆಫ್ ಮೇರಿಲ್ಯಾಂಡ್. 2006-12-30 ವೇಬ್ಯಾಕ್ ಮೆಷಿನ್ ನಲ್ಲಿ. ಯು.ಎಸ್. ಜನಗಣತಿ ಬ್ಯುರೊ 2012-10-14 ವೇಬ್ಯಾಕ್ ಮೆಷಿನ್ ನಲ್ಲಿ. ನೆಬ್ರಸ್ಕಾ ರಾಜ್ಯದ ನಿಜಾಂಶಗಳು 2012-03-27 ವೇಬ್ಯಾಕ್ ಮೆಷಿನ್ ನಲ್ಲಿ. ನೆಬ್ರಸ್ಕಾ ಕೇಳಲ್ಪಟ್ಟ ಪುನರಾವರ್ತಿತ ಪ್ರಶ್ನೆಗಳು ನೆಬ್ರಸ್ಕಾ ರಾಜ್ಯದ ಪಬ್ಲಿಕೆಷನ್ ಆನ್‌ಲೈನ್ 2011-05-11 ವೇಬ್ಯಾಕ್ ಮೆಷಿನ್ ನಲ್ಲಿ. ನೆಬ್ರಸ್ಕಾ ನಗರದ-ಮಹಿತಿ . - ನೆಬ್ರಸ್ಕಾದ ಶಿಕ್ಷಣ ಇಲಾಖೆ, ನೆಬ್ರಸ್ಕಾ ರಾಜ್ಯ ಐತಿಹಾಸಿಕ ಸೊಸೈಟಿ,ಮತ್ತು ಎನ್‌ಇ‌ಟಿಯಿಂದ ನೆಬ್ರಸ್ಕಾದ ಇತಿಹಾಸ ನೆಬ್ರಸ್ಕಾ ರಾಜ್ಯ ಡಾಟಾಬೇಸಸ್ 2008-05-15 ವೇಬ್ಯಾಕ್ ಮೆಷಿನ್ ನಲ್ಲಿ. - ನೆಬ್ರಸ್ಕಾ ರಾಜ್ಯ ಏಜೆನ್ಸಿಗಳು ಮತ್ತು ಅಮೆರಿಕನ್ ಲೈಬ್ರರಿ ಅಸೋಸಿಯೇಷನ್‌ನ ಗವರ್ನ್ಮೆಂಟ್ ಡಾಕ್ಯುಮೆಂಟ್ಸ್ ರೌಂಡ್‌ಟೇಬಲ್ ಜೊತೆ ಸಂಯುಕ್ತವಾಗಿ ಹುಡುಕಬಹುದಾದ ಡಾಟಾಬೇಸಸ್ ಪಟ್ಟಿಯನ್ನು ತಯಾರಿಸಿವೆ. ನೆಬ್ರಸ್ಕಾ ಓಪನ್ ಡೈರೆಕ್ಟರಿ ಪ್ರಾಜೆಕ್ಟ್