ನೇತರ್ಹಾಟ್ ಭಾರತದ ಝಾರ್ಖಂಡ್ ರಾಜ್ಯದ ಲಾತೇಹಾರ್ ಜಿಲ್ಲೆಯಲ್ಲಿರುವ (ಮೊದಲು ಹಿಂದಿನ ಪಲಾಮು ಜಿಲ್ಲಿಯಲ್ಲಿತ್ತು) ಒಂದು ಗಿರಿಧಾಮವಾಗಿದೆ. ಇದನ್ನು "ಛೋಟಾನಾಗ್ಪುರ್‌ನ ರಾಣಿ" ಎಂದೂ ಕರೆಯಲಾಗುತ್ತದೆ. ಈ ಪಟ್ಟಣ ೧೯೫೪ರಲ್ಲಿ ಸ್ಥಾಪಿತವಾದ ನೇತರ್ಹಾಟ್ ವಸತಿ ಶಾಲೆಗೂ ಪ್ರಸಿದ್ಧವಾಗಿದೆ. == ಪ್ರವಾಸೋದ್ಯಮ == ನೇತರ್ಹಾಟ್ ಬೇಸಿಗೆ ತಿಂಗಳುಗಳಲ್ಲಿ ಕಾಣಿಸುವ ಸೂರ್ಯೋದಯಗಳು ಮತ್ತು ಸೂರ್ಯಾಸ್ತಗಳಿಗೆ ಪರಿಚಿತವಾಗಿದೆ. ನೇತರ್ಹಾಟ್‍ನಲ್ಲಿ ಹಲವು ಪ್ರವಾಸಿಗರ ಆಸಕ್ತಿಯ ಸ್ಥಳಗಳಿವೆ - ಮೇಲಿನ ಘಾಘ್ರಿ ಜಲಪಾತ ನೇತರ್ಹಾಟ್‍ನಿಂದ ೪ ಕಿ.ಮಿ. ದೂರದಲ್ಲಿದೆ. ಲೋಧ್ ಜಲಪಾತವು ಝಾರ್ಖಂಡ್‍ನ ಅತಿ ಎತ್ತರದ ಜಲಪಾತವಾಗಿದ್ದು ಸಾಲ್ ಅರಣ್ಯದಲ್ಲಿ ಸ್ಥಿತವಾಗಿದೆ. ಮಹುವಾಡಾಂಡ್ ತೋಳ ಅಭಯಾರಣ್ಯ, ತೋಳಗಳ ರಕ್ಷಣೆಗಾಗಿ ಭಾರತದಲ್ಲಿರುವ ಏಕೈಕ ಅಭಯಾರಣ್ಯ. ಮ್ಯಾಗ್ನೋಲಿಯಾ ಬಿಂದು, ಸೂರ್ಯಾಸ್ತಕ್ಕಾಗಿ ಪರಿಚಿತವಾಗಿದೆ. ಸೂರ್ಯೋದಯ ಬಿಂದು. ಕೆಳಗಿನ ಘಾಘ್ರಿ ಜಲಪಾತ ನೇತರ್ಹಾಟ್‍ನಿಂದ ೧೦ ಕಿ.ಮಿ. ದೂರದಲ್ಲಿದೆ. ಕೋಯಲ್ ನದಿ ನೋಟದ ಬಿಂದು. ಸುಗ್ಗಾ ಬಾಂಧ್ ಜಲಪಾತ. ಸದನಿ ಜಲಪಾತ ನೇತರ್ಹಾಟ್‍ನಿಂದ ೩೫ ಕಿ.ಮಿ. ದೂರದಲ್ಲಿದೆ. ಬೇಟ್ಲಾ ರಾಷ್ಟ್ರೀಯ ಉದ್ಯಾನ ೯೪ ಕಿ.ಮಿ. ದೂರದಲ್ಲಿದೆ. ನೇತರ್ಹಾಟ್ ವಸತಿಶಾಲೆ ಭಾರತದಲ್ಲಿ ಉಳಿದುಕೊಂಡಿರುವ ಕೆಲವೇ ಕೆಲವು ಆಧುನಿಕ ಗುರುಕಲಗಳಲ್ಲಿ ಒಂದಾಗಿದೆ. ಪೆಯರ್ ತೋಟಗಳು ಮತ್ತು ಪೈನ್ ಅರಣ್ಯಗಳು - ಸ್ಥಳೀಯ ಅರಣ್ಯ ಇಲಾಖೆಯಿಂದ ನಿರ್ವಹಿಸಲ್ಪಡುತ್ತಿವೆ. == ಉಲ್ಲೇಖಗಳು ==