ನೈಜರ್ (ಅಧಿಕೃ‍ತವಾಗಿ ನೈಜರ್ ಗಣರಾಜ್ಯ) ಪಶ್ಚಿಮ ಆಫ್ರಿಕಾದಲ್ಲಿ ಇತರ ದೇಶಗಳಿಂದ ಪೂರ್ಣವಾಗಿ ಆವೃ‍ತವಾಗಿರುವ ರಾಷ್ಟ್ರ. ಈ ದೇಶದ ಹೆಸರು ನೈಜರ್ ನದಿಯಿಂದ ಬಂದಿದೆ. ನೈಜರ್‌ನ ದಕ್ಷಿಣದಲ್ಲಿ ನೈಜೀರಿಯ ಮತ್ತು ಬೆನಿನ್; ಪಶ್ಚಿಮದಲ್ಲಿ ಬುರ್ಕಿನ ಫಾಸೊ ಮತ್ತು ಮಾಲಿ; ಉತ್ತರಕ್ಕೆ ಅಲ್ಜೀರಿಯ ಮತ್ತು ಲಿಬ್ಯಾ ಹಾಗೂ ಪೂರ್ವದಲ್ಲಿ ಚಾಡ್ ದೇಶಗಳಿವೆ. ರಾಷ್ಟ್ರದ ರಾಜಧಾನಿ ನಿಯಾಮಿ.