ನೈರೋಬಿ ಕೀನ್ಯಾ ದೇಶದ ರಾಜಧಾನಿ ಮತ್ತದರ ಅತ್ಯಂತ ದೊಡ್ಡ ನಗರ. ನಗರ ಪ್ರದೇಶ ಮತ್ತು ಅದರ ಸುತ್ತುಮುತ್ತಲಿನ ಪ್ರದೇಶ ಸೇರಿ ನೈರೋಬಿ ಪ್ರಾಂತ್ಯವಾಗಿತ್ತದೆ. ನೈರೋಬಿ ಎಂದರೆ ಮಾಸೈ ಭಾಷೆಯಲ್ಲಿ ತಣ್ಣನೆಯ ನೀರಿನ ಪ್ರದೇಶ ಎಂದು ಅರ್ಥ. ಇದನ್ನು ಸೂರ್ಯನಲ್ಲಿರುವ ಹಸಿರು ನಗರ ಎಂದು ಕೂಡ ಕರೆಯುತ್ತಾರೆ. ೧೮೯೯ರಲ್ಲಿ ಸ್ಥಾಪಿತವಾದ ನೈರೋಬಿ ೧೯೬೩ರಲ್ಲಿ ಸ್ವತಂತ್ರ ಕೀನ್ಯ ಗಣರಾಜ್ಯದ ರಾಜಧಾನಿಯಾಯಿತು. ಸುಮಾರು ೩ ದಶಲಕ್ಷ ಜನಸಂಖ್ಯೆಯುಳ್ಲ ಈ ನಗರ ಪೂರ್ವ ಆಫ್ರಿಕದ ಅತ್ಯಂತ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == ನೈರೋಬಿ.ಕಾಂ ನೈರೋಬಿಯ ಶಾಲೆ ಮತ್ತು ಕಾಲೇಜುಗಳು 2009-11-23 ವೇಬ್ಯಾಕ್ ಮೆಷಿನ್ ನಲ್ಲಿ. ನೈರೋಬಿ ನಗರಸಭೆಯ ಅಧಿಕೃತ ತಾಣ 2009-04-15 ವೇಬ್ಯಾಕ್ ಮೆಷಿನ್ ನಲ್ಲಿ. ನೈರೋಬಿ ಶೇರು ಪೇಟೆ