ನೊಬೆಲಿಯಮ್ ಒಂದು ಕೃತಕವಾಗಿ ಸೃಷ್ಟಿಸಲ್ಪಟ್ಟ ವಿಕಿರಣಶೀಲಮೂಲಧಾತು. ಇದರ ೧೭ ಸಮಸ್ಥಾನಿಗಳನ್ನು ಗುರುತಿಸಲಾಗಿದ್ದು,ಅತ್ಯಂತ ಸ್ಥಿರ ಸಮಸ್ಥಾನಿ ೫೮ ನಿಮಿಷಗಳ ಅರ್ಧಾಯುಷ್ಯವನ್ನು ಹೊಂದಿದೆ.ಇದು ಅತ್ಯಂತ ತೀಕ್ಷ್ಣವಾದ ವಿಕಿರಣಶೀಲ ವಸ್ತುವಾಗಿದ್ದು, ಇದನ್ನು ಹೆಚ್ಚಿನ ಪ್ರಮಾಣದಲ್ಲಿ ಉತ್ಪಾದಿಸಲು ಸಾದ್ಯವಾಗದೆ ಇರುವುದರಿಂದ ಹೆಚ್ಚಿನ ಸಂಶೋಧನೆ ಸಾದ್ಯವಾಗಿಲ್ಲ.ಇದನ್ನು ನೊಬೆಲ್ ಪ್ರಶಸ್ತಿಯ ಸ್ಥಾಪಕ ಆಲ್‌ಫ್ರೆಡ್ ನೊಬೆಲ್ ರ ಗೌರವಾರ್ಥ ನೊಬೆಲಿಯಮ್ ಎಂದು ಹೆಸರಿಸಲಾಗಿದೆ.