ಹಿಂದೂ ಧರ್ಮದಲ್ಲಿ, ಪಂಡಿತನು ಜ್ಞಾನದ ಯಾವುದೇ ಕ್ಷೇತ್ರದ ಒಬ್ಬ ವಿದ್ವಾಂಸ ಅಥವಾ ಶಿಕ್ಷಕ, ವಿಶೇಷವಾಗಿ ವೈದಿಕ ಗ್ರಂಥಗಳು, ಧರ್ಮ, ಹಿಂದೂ ತತ್ವಶಾಸ್ತ್ರ, ಅಥವಾ ಸಂಗೀತದಂತಹ ಜಾತ್ಯತೀತ ವಿಷಯಗಳಲ್ಲಿ. ಅವನು ಗುರುಕುಲದಲ್ಲಿರುವ ಒಬ್ಬ ಗುರುವಾಗಿರಬಹುದು. ಸಂಸ್ಕೃತದಲ್ಲಿ, ಪಂಡಿತ ಪದವು ಸಾಮಾನ್ಯವಾಗಿ ಯಾವನಾದರೂ "ಬುದ್ಧಿವಂತ, ವಿದ್ಯಾವಂತ ಅಥವಾ ಕಲಿತ ವ್ಯಕ್ತಿ"ಯನ್ನು ಸೂಚಿಸುತ್ತದೆಂದು ಮೊನಿಯರ್ ವಿಲಿಯಮ್ಸ್ ಹೇಳುತ್ತಾರೆ. ಈ ಪದವನ್ನು ಪಂಡ್ ಶಬ್ದದಿಂದ ಪಡೆಯಲಾಗಿದೆ. ಇದರರ್ಥ "ಸಂಗ್ರಹಿಸು, ಪೇರಿಸು, ರಾಶಿಹಾಕು" ಎಂದು, ಮತ್ತು ಈ ಮೂಲವನ್ನು ಜ್ಞಾನದ ಅರ್ಥದಲ್ಲಿ ಬಳಸಲಾಗುತ್ತದೆ. ಈ ಪದವು ವೈದಿಕ ಮತ್ತು ವೈದಿಕೋತ್ತರ ಪಠ್ಯಗಳಲ್ಲಿ ಕಂಡುಬರುತ್ತದೆ, ಆದರೆ ಯಾವುದೇ ಪೂರ್ವಾಪರ ಸಾಮಾಜಿಕ ಸಂದರ್ಭವಿಲ್ಲದೆ. ವಸಾಹತು ಯುಗದ ಸಾಹಿತ್ಯದಲ್ಲಿ, ಈ ಪದವು ಸಾಮಾನ್ಯವಾಗಿ ಹಿಂದೂ ಕಾನೂನಿನಲ್ಲಿ ಪರಿಣತಿ ಹೊಂದಿದ ಬ್ರಾಹ್ಮಣರನ್ನು ಸೂಚಿಸುತ್ತದೆ. ಸಂಬಂಧಿತ ಪದವಾದ ಪುರೋಹಿತ ಮನೆ ಅರ್ಚಕನನ್ನು ಸೂಚಿಸುತ್ತದೆ. == ಉಲ್ಲೇಖಗಳು ==