ರಾಜಕೀಯದಲ್ಲಿ, ಪಕ್ಷಾಂತರ ಎಂದರೆ ಒಂದು ಗುಂಪಿಗಾಗಿ ನಿಷ್ಠೆಯನ್ನು ತೊರೆದು ಅದರ ಬದಲಾಗಿ ಮತ್ತೊಂದು ಗುಂಪಿಗಾಗಿ ನಿಷ್ಠೆ ವ್ಯಕ್ತಪಡಿಸುವುದು, ಮತ್ತು ಈ ರೀತಿಯನ್ನು ಮೊದಲ ಗುಂಪು ಅಕ್ರಮವೆಂದು ಪರಿಗಣಿಸುತ್ತದೆ. ಪಕ್ಷಾಂತರ ಮಾಡುವವನನ್ನು ಪಕ್ಷಾಂತರಿ ಎಂದು ಕರೆಯಲಾಗುತ್ತದೆ. ಹೆಚ್ಚು ವಿಶಾಲವಾಗಿ, ಇದು ಯಾವುದಕ್ಕೆ ಒಬ್ಬರು ಯಾವುದೋ ಬಂಧನದಿಂದ ಕಟ್ಟಲ್ಪಟ್ಟಿರುತ್ತಾರೊ (ಉದಾಹರಣೆಗೆ ನಿಷ್ಠೆ ಅಥವಾ ಕರ್ತವ್ಯ), ಆ ಒಬ್ಬ ವ್ಯಕ್ತಿ, ಉದ್ದೇಶ, ಅಥವಾ ಸಿದ್ಧಾಂತವನ್ನು ತ್ಯಜಿಸುವುದನ್ನು ಒಳಗೊಳ್ಳುತ್ತದೆ. ಭಾರತ ಸೇರಿದಂತೆ ಅನೇಕ ದೇಶಗಳಲ್ಲಿ, ಪಕ್ಷಾಂತರವನ್ನು ತಡೆಯಲು ಪಕ್ಷಾಂತರ ವಿರೋಧಿ ಕಾನೂನು ಜಾರಿಯಲ್ಲಿದೆ. ಪಕ್ಷದ ಕಾರ್ಯನೀತಿಯ ವಿರುದ್ಧ ಮತಚಲಾಯಿಸುವುದರಿಂದ ಸ್ಥಾನವನ್ನು ಕಳೆದುಕೊಳ್ಳುವುದು (ಉದಾ. ಮಂತ್ರಿಯಾಗಿ ಅಥವಾ ಖಾತಾ ಟೀಕಾಕಾರನಾಗಿ) ಅಥವಾ ಪಕ್ಷದ ಸಮಿತಿಯಿಂದ ಹೊರಹಾಕಲ್ಪಡುವಂತಹ ಪರಿಣಾಮಗಳು ಉಂಟಾಗಬಹುದು. ಈ ಅಭ್ಯಾಸಗಳು ಬಹುತೇಕ ದೇಶಗಳಲ್ಲಿ ಕಾನೂನಾತ್ಮಕವಾಗಿ ಅಂಗೀಕಾರಾರ್ಹವಾದರೂ, ಪಕ್ಷಾಂತರವು ವಿವಾದ ಮತ್ತು ಮಾಧ್ಯಮದವರ ಗಮನ ಸೆಳೆತಕ್ಕೆ ಕಾರಣವಾಗಬಹುದು. == ಉಲ್ಲೇಖಗಳು ==