ಪರಮಾತ್ಮ 2011ರಲ್ಲಿ ಬಿಡುಗಡೆಯಾದ ಕನ್ನಡ ಭಾಷೆಯ ಚಿತ್ರ. ಯೋಗರಾಜ್ ಭಟ್ ರವರು ಈ ಚಿತ್ರಕ್ಕೆ ನಿರ್ದೇಶನ ಮತ್ತು ಸಹ ನಿರ್ಮಾಣ ಮಾಡಿದ್ದಾರೆ.ಇದರಲ್ಲಿಪುನೀತ್ ರಾಜ್‌ಕುಮಾರ್ ಮತ್ತು ದೀಪಾ ಸನ್ನಿಧಿ ಮುಖ್ಯ ಪಾತ್ರಗಳಲ್ಲಿನಟಿಸಿದ್ದಾರೆ.ಈ ಚಿತ್ರವು 6 ಅಕ್ಟೋಬರ್ 2011 ವಿಜಯದಶಮಿ ಹಬ್ಬದ ಸಂದರ್ಭದಲ್ಲಿ ಬಿಡುಗಡೆಯಾಯಿತು. ನಿರ್ಮಾಣ ಹಂತದಲ್ಲಿದ್ದಾಗಲೇ ಚಿತ್ರದ ಟಿವಿ ಹಕ್ಕುಗಳು ದಾಖಲೆಯ ₹ 3.5 ಕೋಟಿಗೆ ಮಾರಾಟವಾಯಿತು.ಬಿಡುಗಡೆಗೆ ಮುಂಚೆಯೇ,ಚಿತ್ರವು ಪ್ರಸಾರ ಮತ್ತು ವಿತರಣಾ ಹಕ್ಕುಗಳನ್ನು ಒಳಗೊಂಡಂತೆ ₹ 25 ಕೋಟಿಗಿಂತ ಹೆಚ್ಚಿನ ಮೊತ್ತವನ್ನು ಗಳಿಸಿತು. == ಪಾತ್ರವರ್ಗ == ಪರಮತ್ಮಾ/ಕರಡಿ ಪಾತ್ರದಲ್ಲಿ ಪುನೀತ್ ರಾಜ್‌ಕುಮಾರ್ ದೀಪಾ/ತಿಥಿ ವಡೆ ಪಾತ್ರದಲ್ಲಿ ದೀಪಾ ಸನ್ನಿಧಿ ಸಾನ್ವಿ/ಪಸೀನಾ ಪಾತ್ರದಲ್ಲಿ ಐಂದ್ರಿತಾ ರೇ ಜಯಂತ್ ಪಾತ್ರದಲ್ಲಿ ಅನಂತ್ ನಾಗ್ ರಮ್ಯಾ ಬಾರ್ನಾ ಶ್ರೀನಿವಾಸ್ ಪಾತ್ರದಲ್ಲಿ ಅವಿನಾಶ್ ಅಣ್ಣಯ್ಯ ಪಾತ್ರದಲ್ಲಿ ರಂಗಾಯಣ ರಘು ಅಪ್ಪಣ್ಣ ಪಾತ್ರದಲ್ಲಿ ದತ್ತಣ್ಣ ರಾಜು ತಾಳಿಕೋಟೆ ಕೆರೋಸಿನ್ ಪಾತ್ರದಲ್ಲಿ ಶ್ವೇತಾ ಪಂಡಿತ್ == ನಿರ್ಮಾಣ == ಪುನೀತ್ ರಾಜ್‌ಕುಮಾರ್ ಅಭಿನಯದ ಲಗೋರಿ ಹೆಸರಿನ ಚಲನಚಿತ್ರವನ್ನು 2009 ರಲ್ಲಿ ಚಿತ್ರೀಕರಿಸಬೇಕಾಗಿತ್ತು, ಆದರೆ ನಿರ್ಮಾಣದ ವೆಚ್ಚವು ಹೆಚ್ಚಿಸಿರುವುದರಿಂದ ನಿರ್ಮಾಪಕ ರಾಕ್‌ಲೈನ್ ವೆಂಕಟೇಶ್ ಚಿತ್ರದಿಂದ ಹಿಂದೆ ಸರಿದರು, ನಂತರ ಅದು ಸ್ಥಗಿತಗೊಂಡಿತು. 2011 ರಲ್ಲಿ, ಭಟ್ ಅವರ 2010 ರ ನಿರ್ಮಿತ ಚಿತ್ರ ಪಂಚರಂಗಿಯ ಯಶಸ್ಸಿನ ನಂತರ, ಅವರು ಪುನೀತ್ ರಾಜ್‌ಕುಮಾರ್ ಅಭಿನಯದ ಪರಮಾತ್ಮ ಚಿತ್ರವನ್ನು ನಿರ್ಮಾಪಕ ಜಯಣ್ಣ ರವರೊಂದಿಗೆ ಸಹ ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರದ ಕಥೆಯ ಪ್ರಕಾರ ಮೂವರು ನಟಿಯರು ನಟಿಸಬೇಕಿದೆ, ಅವರೇ: ದೀಪ ಸನ್ನಿಧಿ ಐಂದ್ರಿತಾ ರೈ ಮತ್ತು ರಮ್ಯಾ ಬಾರ್ನಾ . ಚಿತ್ರದ ಚಿತ್ರೀಕರಣ ಮಾರ್ಚ್ 3 ರಂದು ಸಕಲೇಶಪುರದಲ್ಲಿ ಪ್ರಾರಂಭವಾಯಿತು,ಚಿತ್ರವು ಅಕ್ಟೋಬರ್ 6, 2011 ರಂದು ಬಿಡುಗಡೆಯಾಗುತ್ತಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿಯ ಸುತ್ತ ಮುತ್ತ ಚಿತ್ರೀಕರಣ ನಡೆಯಿತು. == ಉಲ್ಲೇಖಗಳು ==