ಪರಾಠಾ ಭಾರತೀಯ ಉಪಖಂಡದಲ್ಲಿ ಹುಟ್ಟಿಕೊಂಡ ಒಂದು ಚಪಾತಿಯಂಥ ಖಾದ್ಯ. ಇದು ಭಾರತ , ಶ್ರೀಲಂಕಾ , ಪಾಕಿಸ್ತಾನ , ನೇಪಾಳ ಮತ್ತು ಬಾಂಗ್ಲಾದೇಶದ ಪ್ರದೇಶಗಳಲ್ಲಿ ಪ್ರಚಲಿತವಾಗಿದೆ . ಪರಾಠಾ ಪದವು ಪರಟ್ ಮತ್ತು ಆಟಾ ಶಬ್ದಗಳ ಸಮ್ಮಿಲನವಾಗಿದೆ ಮತ್ತು ಅಕ್ಷರಶಃ ಇದರರ್ಥ ಬೇಯಿಸಿದ ಕಣಕದ ಪದರಗಳು. == ಇತಿಹಾಸ == ಪರಾಠಾ ಎಂಬ ಹಿಂದೂಸ್ಥಾನಿ ಪದವು ಸಂಸ್ಕೃತದಿಂದ ಬಂದಿದೆ . ೧೩ ನೇ ಶತಮಾನದಲ್ಲಿ ಇಂದಿನ ಕರ್ನಾಟಕವನ್ನು ಆಳಿದ ಚಾಲುಕ್ಯ ರಾಜ ೩ನೇ ಸೋಮೇಶ್ವರನ ಕೃತಿಯಾದ ಮನಸೊಲ್ಲಾಸದಲ್ಲಿ ವಿವಿಧ ರೀತಿಯ ಗೋಧಿಯಿಂದ ತಯಾರಿಸಿದ ಖಾದ್ಯಗಳ ಬಗ್ಗೆ ಉಲ್ಲೇಖಿಸಲಾಗಿದೆ . ಬ್ಯಾನರ್ಜಿ ರವರ (೨೦೧೦) ಪ್ರಕಾರ , ಪರಾಠಾಗಳು ಪಂಜಾಬಿ ಮತ್ತು ಉತ್ತರ ಭಾರತದ ಅಡುಗೆಗೆ ಸಂಬಂಧಿಸಿವೆ. ಪರಾಠಾಗಳನ್ನು ವಿವಿಧ ರೀತಿಯ ಸ್ಟಫಿಂಗ್‌ಗಳೊಂದಿಗೆ ಪಂಜಾಬ್ ನಲ್ಲಿ ತಯಾರಿಸಲಾಗುತ್ತದೆ .‌ ಬ್ಯಾನರ್ಜಿ ಹೇಳುವಂತೆ , ಮೊಘಲರು ಸಹ ಪರಾಠಾಗಳ ಬಗ್ಗೆ ಒಲವು ಹೊಂದಿದ್ದರು , ಇದು ಡಾಕೈ ಪರಾಠಾ (ಬಹುಪದರದ ಪರಾಠಾ)ವನ್ನು ತಯಾರಿಸಲು ಉತ್ತೇಜನ ನೀಡಿತು . ಡಾಕೈ ಪರಾಠಾ ಎಂಬ ಹೆಸರು ಬಾಂಗ್ಲಾದೇಶದ ಡಾಕಾದಿಂದ ಸಿಕ್ಕಿದೆ . == ಸರಳ ಮತ್ತು ಸ್ಟಫ್ಡ್ ಪ್ರಭೇದಗಳು == ಭಾರತೀಯ ಉಪಖಂಡದ ಭಾಗದಲ್ಲಿ ಪರಾಠಾಗಳು ಅತ್ಯಂತ ಜನಪ್ರಿಯವಾದ ಫ್ಲಾಟ್ ಬ್ರೆಡ್‌ಗಳಲ್ಲಿ ಒಂದಾಗಿದೆ . ತವಾ ಮೇಲೆ ಸಂಪೂರ್ಣವಾಗಿ ಗೋಧಿ ಹಿಟ್ಟಿನಿಂದ ತಯಾರಿಸಿದ ಉಂಡೆಗಳನ್ನು ಲಟ್ಟಿಸಿ ಬೇಯಿಸುವ ಮೂಲಕ ತಯಾರಿಸಲಾಗುತ್ತದೆ . ಪರಾಠಾಗಳು ಚಪಾತಿ / ರೋಟಿಗಳಿಂತ ದಪ್ಪವಾಗಿರುತ್ತದೆ . ಇದಕಕೆ ಕಾರಣ ಪರಾಠಾ ವನ್ನು ತಯಾರಿಸುವಾಗ ಹೆಚ್ಚಿನ ಪ್ರಮಾಣದಲ್ಲಿ ತುಪ್ಪ ಮತ್ತು ಎಣ್ಣೆಯನ್ನು ಸವರುತ್ತಾರೆ .ಹಾಗೂ ಕೆಲವೊಮ್ಮೆ ಕ್ಯಾರೆಟ್ , ಬಟಾಟೆ ಯಂತಹ ತರಕಾರಿಗಳನ್ನು ಉಪಯೋಗಿಸಿ ಸ್ಟಫಿಂಗ್‌ ಮಾಡಲಾಗುತ್ತದೆ . ಪರಾಠಾಗಳಿಗೆ ಸಾಮಾನ್ಯವಾಗಿ ಹಿಸುಕಿದ , ಮಸಾಲೆಯುಕ್ತ ಆಲೂಗಡ್ಡೆ , ದಾಲ್ (ಮಸೂರ) , ಎಲೆ ತರಕಾರಿಗಳು, ಮೂಲಂಗಿಗಳು, ಹೂಕೋಸು ಅಥವಾ ಪನೀರ್ ಮುಂತಾದ ಅನೇಕ ಪರ್ಯಾಯಗಳನ್ನು ಸ್ಟಫಿಂಗ್‌ ಗಾಗಿ ಉಪಯೋಗಿಸಬಹುದು . ಪರಾಠಾಗಳನ್ನು ಉಪಾಹಾರ ಭಕ್ಷ್ಯವಾಗಿ ಅಥವಾ ಚಹಾ-ಸಮಯದಲ್ಲಿ ಲಘು ಆಹಾರವಾಗಿ ಸೇವಿಸಬಹುದು. == ಸೇವನೆ == ಪರಾಠಾ ಭಾರತೀಯ ಉಪಖಂಡದ ಸಾಂಪ್ರದಾಯಿಕ ಉಪಹಾರದ ಪ್ರಮುಖ ಭಾಗವಾಗಿದೆ. ಸಾಂಪ್ರದಾಯಿಕವಾಗಿ , ಇದನ್ನು ತುಪ್ಪ ಬಳಸಿ ತಯಾರಿಸಲಾಗುತ್ತದೆ ಆದರೆ ಎಣ್ಣೆಯನ್ನು ಸಹ ಬಳಸಲಾಗುತ್ತದೆ. ಸಾಮಾನ್ಯವಾಗಿ ಪರಾಠಾವನ್ನು ಬೆಣ್ಣೆಯೊಂದಿಗೆ ತಿನ್ನುತ್ತಾರೆ. ಮೊಸರು, ಹುರಿದ ಮೊಟ್ಟೆ, ಆಮ್ಲೆಟ್, ಮಟನ್ ಖೀಮಾ ಮಟನ್, ನಿಹಾರಿ , ಜೀರಾ ಆಲೂ , ದಾಲ್ ಅಥವಾ ರೈತದ ಜೊತೆಗೆ ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸುತ್ತಾರೆ . == ವಿಧಗಳು == ಅಜ್ವೈನ್‌ ಪರಾಠಾ , ಆಲೂ ಪರಾಠಾ , ಆಲೂ ಚೀಸ್‌ ಪರಾಠಾ , ಅಂಡಾ ಪರಾಠಾ , ಬೂಂದಿ ಪರಾಠಾ , ಚನಾ ಪರಾಠಾ , ಚನಾ ದಾಲ್‌ ಪರಾಠಾ , ಚಿಕನ್‌ ಪರಾಠಾ, ದಾಲ್‌ ಪರಾಠಾ ,ಗೋಬಿ ಪರಾಠಾ , ಜೈಪುರಿ ಪರಾಠಾ , ಕೇರಳ ಪರಾಠಾ , ಲಚ್ಚಾ ಪರಾಠಾ ,ಗಾಜರ್‌ ಪರಾಠಾ , ಧನಿಯಾ ಪರಾಠಾ , ಡಾಕೈ ಪರಾಠಾ ,ಚಿಲ್ಲೀ ಪರಾಠಾ ,ಮಟರ್‌ ಪರಾಠಾ , ಮೀಠಾ ಪರಾಠಾ , ಮೇಥಿ ಪರಾಠಾ , ಮಟನ್‌ ಪರಾಠಾ ,ಮಿಕ್ಸ್‌ ಪರಾಠಾ , ಪಾಲಕ್‌ ಪರಾಠಾ , ಪನೀರ್‌ ಪರಾಠಾ , ಪ್ಲೈನ್‌ ಪರಾಠಾ , ಪುದೀನಾ ಪರಾಠಾ ,ಪ್ಯಾಸ್‌ ಕಾ ಪರಾಠಾ ,ತಂದೂರಿ ಪರಾಠಾ , ಟೊಮೇಟೊ ಪರಾಠಾ ,ಖೀಮಾ ಪರಾಠಾ ,ಮಕ್ಕಾ ಪರಾಠಾ ,ಲೌಕಿ ಪರಾಠಾ . == ಪರಾಠಾಕ್ಕಿರುವ ಇತರ ಹೆಸರುಗಳು == ಪಾರಂಥ , ಪರೌನ್ಥಾ, ಪ್ರೋನ್ಥಾ, ಪಾರೊಂಟೆ(ಪಂಜಾಬಿಯಲ್ಲಿ), ಪೊರೋಟಾ(ಬಂಗಾಳಿ ಮತ್ತು ಮಲೆಯಾಳಂ), ಪಲಾಟಾ (ಬರ್ಮಾದಲ್ಲಿ), ಪೊರೋಥಾ(ಅಸ್ಸಾಮಿಯಲ್ಲಿ), ಫೊರೋತಾ (ಸಿಲೇಟಿ ಭಾಷೆಯಲ್ಲಿ) ಮತ್ತು ಫರಾತಾ (ಮೌರಿಟಿಯಸ್‌ ನಲ್ಲಿ, ಶ್ರೀಲಂಕಾ ಮತ್ತು ಮಾಲ್ಡೀವ್ಸ್). == ರೆಡಿಮೇಡ್‌ ಪರಾಠಾಗಳು == ಪರಾಠಾಗಳನ್ನು ತಯಾರಿಸುವುದು ಕಷ್ಟಕರವಾಗಿದ್ದರಿಂದ ಇದೀಗ ಮಾರುಕಟ್ಟೆಯಲ್ಲಿ ರೆಡಿಮೇಡ್‌ ಪರಾಠಾಗಳೂ ಲಭ್ಯವಿದೆ . == ಉಲ್ಲೇಖಗಳು ==