ಮಾನವನ ವಿಕಾಸದ ಇತಿಹಾಸವು ಉಪಕರಣಗಳು ಅಥವಾ ಪರಿಕರಗಳನ್ನು ()ಗುರುತಿಸುವುದರಿಂದಲೇ ಪ್ರಾರಂಭವಾಗುತ್ತದೆ. ಸಾಮಾನ್ಯವಾಗಿ ಈ ಪರಿಕರಗಳು ಕಲ್ಲಿನವೇ ಆಗಿರುತ್ತವೆ. ಇದರ ಅರ್ಥ ಮಾನವ ಕಟ್ಟಿಗೆ ಅಥವಾ ಮೂಳೆಗಳನ್ನು ಅಥವಾ ಇತರ ವಸ್ತುಗಳ ಪರಿಕರ ಬಳಸಲಿಲ್ಲವೆಂದಲ್ಲ. ಆದರೆ ಇವು ಬಹಳ ಕಾಲ ಉಳಿದುಕೊಂಡು ಬಂದು ಪುರಾವೆ ಒದಗಿಸಲಾರವು. ಕೆಲವೊಮ್ಮೆ ಇವುಗಳನ್ನು ಆಯುಧಗಳೆಂದೂ ಸಹ ಕರೆಯಲಾಗುತ್ತದೆ. ಆದರೆ, ಈ ಬಗೆಗೆ ಚರ್ಚೆಯೊಂದು ನಡೆದಂತೆ ತೋರುತ್ತದೆ. ಬ್ರಿಟಿಶ್ -ಅಮೆರಿಕ ಸಂಯುಕ್ತ ಸಂಸ್ಥಾನದ ಮಾನವಶಾಸ್ತ್ರಜ್ಞ ಎಮ್ . ಎಪ್. ಅಶ್ಲೆ ಮೊಂಟಗು (.. ) ಮಾನವ ಮತ್ತು ಆಕ್ರಮಣಶೀಲತೆಯ ಬಗೆಗೆ ಬರೆಯುತ್ತಾ, ಯುರೋಪಿನ ಹಲವರ `ಮಾನವನು ಮೂಲತಹ ಆಕ್ರಮಣಕಾರಿ `ಎಂಬ ನಿಲುವನ್ನು ಮಾನವಶಾಸ್ತ್ರ ಬೆಂಬಲಿಸುವುದಿಲ್ಲ ಎಂದು ವಾದಿಸುತ್ತಾ, ಇಂತಹುದೇ ತಪ್ಪು ನಿಲುವು ಪ್ರೈಮೇಟ್‍ಗಳ ಹಲ್ಲು, ಉಗುರುಗಳನ್ನೂ ಆಯುಧಗಳನ್ನಾಗಿಸಿದೆ ಎನ್ನುತ್ತಾರೆ. ಬಹುಶಃ ಈ ಹಿನ್ನೆಲೆಯಲ್ಲಿಯೇ ಕನಿಷ್ಟ ಇಂಗ್ಲೀಶ್‍ನಲ್ಲಿ `` ಎಂದೇ ಬಳಸಲಾಗುತ್ತಿದ್ದೆ ಹಾಗೂ ಕನ್ನಡದಲ್ಲಿ ಉಪಕರಣ ಅಥವಾ ಪರಿಕರ. ಈ ಆಸಕ್ತಿದಾಯ ಕ ಚರ್ಚೆಗೆ ಬ್ರಿಟಾನಿಕ ಸಿಡಿ ಲೇಖನ ನೋಡಿ. == ಟಿಪ್ಪಣಿಗಳು == == ಪರಾಮರ್ಶನಗಳು == , , , , 2002