ಪಲ್ಲಾಡಿಯಂ ಅನ್ನು ವಿಲಿಯಂ ಹೈಡೆಮೊ ಲ್ಲಾಸ್ಟನ್ ಎಂಬುವವರು ೧೮೦೩ರಲ್ಲಿ ಕಂಡುಹಿಡಿದರು. ಅದು ಹೊಳಪಿನ ಬೆಳ್ಳಿಯ ಬಿಳುಪು ಬಣ್ಣದ ಲೋಹ. ಅದರ ಚಿಹ್ನೆ ಪಿಡಿ() ಮತ್ತು ಪರಮಾಣು ಸಂಖ್ಯೆ ೪೬. ಪಲ್ಲಾಡಿಯಂ ಎಂಬುದು ಗ್ರೀಕ್ ಪದ. ಪಲ್ಲಾಡಿಯಂ , ಪ್ಲಾಟಿನಂ, ರ್‍ಓಡಿಯಂ, ರುಥೇನಿಯಂ, ಇರಿಡಿಯಂ ಮತ್ತು ಆಸ್ಮಿಯಂ, ಇವುಗಳನ್ನು ಪ್ಲಾಟಿನಂ ಗುಂಪು ಲೋಹಗಳು() ಎಂದು ಕರೆಯಲಾಗುತ್ತದೆ. ಈ ಎಲ್ಲಾ ಲೋಹಗಳ ರಾಸಾಯನಿಕ ಗುಣಲಕ್ಷಣಗಳು ಸಾಮಾನ್ಯ ಆದರೆ ಪಲ್ಲಾಡಿಯಂನ ಕರಗುವ ಬಿಂದು ಅವುಗಳ ಹೋಲಿಕೆಯಲ್ಲಿ ಕಡಿಮೆ. ಗುಣಲಕ್ಷಣಗಳು: ಪಲ್ಲಾಡಿಯಂ ಗುಂಪು ೧೦ಕ್ಕೆ ಸೇರಿದ ಲೋಹ. ಗುಂಪು ೧೦ರ ಇತರ ಅಂಶಗಳಾದ ನಯೋಬಿಯಂ(೪೧), ರುಥೇನಿಯಂ(೪೪) ಮತ್ತು ರೋಢಿಯಂ(೪೫) ಗಳಿಗಿಂತ ಪಲ್ಲಾಡಿಯಂ ಭಿನ್ನ. ಹೇಗೆಂದರೆ ಈ ಇತರ ಅಂಶಗಳ ಅತ್ಯಂತ ಹೊರಗಿನ ಎಲೆಕ್ಟ್ರಾನ್ ಚಿಪ್ಪುಗಳಲ್ಲಿ ಹಿಂದಿನ ಅಂಶಕ್ಕಿಂತ ಕಡಿಮೆ ಭರ್ತಿಯಾದ ಎಲೆಕ್ಟ್ರಾನ್ ಚಿಪ್ಪುಗಳು ಇರುತ್ತವೆ, ಆದರೆ ಪಲ್ಲಾಡಿಯಂನ ವೇಲೆನ್ಸಿ ಶೆಲ್ ಅಲ್ಲಿ ೧೦ ಎಲೆಕ್ಟ್ರಾನ್ ಇರುತ್ತದೆ. ಪಲ್ಲಾಡಿಯಂ ಪ್ಲಾಟಿನಂ ಹೋಲುವ ಒಂದು ಮೃದು ಬೆಳ್ಳಿ ಬಿಳಿ ಲೋಹ. ಪ್ಲಾಟಿನಂ ಗುಂಪಿಗೆ ಸೇರಿದ ಲೋಹಗಳಲ್ಲಿ ಪಲ್ಲಾಡಿಯಂ ಅತಿ ಕಡಿಮೆ ಕರಗುವ ಬಿಂದು ಹೊಂದಿದೆ. ಪಲ್ಲಾಡಿಯಂನ ಸಾಮಾನ್ಯ ಉತ್ಕರ್ಷಣ ಸ್ಥಿತಿಗಳು ೦, +೧, +೨ ಮತ್ತು +೪.