ಪಲ್ಲಾಸ್ ಎನ್ನುವುದು ನಾಲ್ಕು ಪ್ರಕಾಶತಮ, ಪ್ರಾಯಶಃ ಅತಿದೊಡ್ಡ, ಕ್ಷುದ್ರಗ್ರಹಗಳ ಪೈಕಿ ಒಂದು. ಉಳಿದವು ಅನುಕ್ರಮವಾಗಿ ಸಿರಿಸ್, ಜೂನೋ ಮತ್ತು ವೆಸ್ಟ. ಇದನ್ನು 1802 ಮಾರ್ಚ್ 28 ರಂದು, ಜರ್ಮನಿಯ ಖಗೋಳವಿಜ್ಞಾನಿ ಹೈನ್ರಿಕ್ ಆಲ್ಬರ್ಸ್ (1758-1840) ಆವಿಷ್ಕರಿಸಿದ. ಈ ಕ್ಷುದ್ರಗ್ರಹವನ್ನು ಕುರಿತ ವೈಜ್ಞಾನಿಕ ಅಂಕೆಅಂಶಗಳು ಹೀಗಿವೆ: ರಾಶಿ 2.6 1020 ಕೆಜಿ, ತ್ರಿಜ್ಯ 240 ಕಿಮೀ, ಆವರ್ತನಾವಧೀ 10 ಗಂಟೆಗಳು, ಪರಿಭ್ರಮಣಾವಧಿ 4.61 ವರ್ಷಗಳು, ಸೂರ್ಯನಿಂದ ಸರಾಸರಿ ದೂರ 2,768 ಖಮಾ, ಕಕ್ಷೆಯ ಉತ್ಕೇಂದ್ರತೆ 0.235, ಕ್ರಾಂತಿವೃತ್ತಕ್ಕೆ ಕಕ್ಷೆಯ ಬಾಗು 34.80, ಪ್ರತಿಫಲನ ಸಾಮರ್ಥ್ಯ 0.13, ಆಲ್ಬೆಡೋ 0.07. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == Encyclopædia , . . " - ". , (). 15 2009. 20 2009.