ಅಘ ಇಲ್ಲಿ ಪುನರ್ನಿರ್ದೇಶಿಸುತ್ತದೆ. ದುಃಖ ಲೇಖನಕ್ಕಾಗಿ ಇಲ್ಲಿ ನೋಡಿ ಪ್ರಪಂಚದ ಅನೇಕ ಧರ್ಮಗಳಲ್ಲಿ ನೀತಿಗಳ ಉಲ್ಲಂಘನೆಯೇ ಪಾಪ. ಹಿಂದೂ ಧರ್ಮದಲ್ಲಿ ಈ ಕೆಳಗಿನವನ್ನು ಅರಿಷಡ್ವರ್ಗಗಳೆಂದು ಹೇಳುವರು. ಮನುಷ್ಯ ನಲ್ಲಿರುವ ಪ್ರಕೃತಿ ಸಹಜ ಗುಣಗಳು. ಅವು ಪಾಪ ಕರ್ಮಗಳಿಗೆ ಕಾರಣ ವಾಗುತ್ತವೆ. ಕಾಮ ಎಂದರೆ ಬಯಕೆ; ಇದು ಒಳ್ಳೆಯದಿದ್ದರೆ, ಧರ್ಮಸಮ್ಮತವಾದರೆ ತಪ್ಪಲ್ಲ. ಹಾಗೆಯೇ ಕ್ರೋಧ- ನ್ಯಾಯಕ್ಕಾಗಿ ಕ್ರೋಧ ತಪ್ಪಲ್ಲ. ಲೋಭ -ಜಿಪುಣತನ- ಅನಗತ್ಯ ವೆಚ್ಚ ಮಾಡದಿರುವುದು ತಪ್ಪು ಎನ್ನಲಾಗದು. ಹೀಗೆ ಮೋಹ- ಅತಿ ಪ್ರೇಮ - ಇದು ಪತ್ನ್ನೀಪುತ್ರಮೇಲೆ ಅಥವಾ ಬಂಧುಗಳ ಮೇಲೆ, ಭೂಮಿ-ಕಾಣಿಯ ಮೇಲೆ ಇದ್ದು ಬೇರೆಯವರಿಗೆ ತೊಂದರೆ ಕೊಡದಿದ್ದರೆ ಪಾಪವಿಲ್ಲ. ಇತ್ಯಾದಿ.. ಕಾಮ ಕ್ರೋಧ ಲೋಭ ಮೋಹ ಮದ ಮಾತ್ಸರ್ಯ ಯಾರೋ ಒಬ್ಬ ಶಿಷ್ಯನು ವ್ಯಾಸರನ್ನು ಕುರಿತು, ೧೮ ಪುರಾಣಗಳನ್ನೂ, ಶ್ರುತಿ ಸ್ಮೃತಿಗಳನ್ನೆಲ್ಲಾ ಓದಿ ಧರ್ಮ ಸೂಕ್ಷ್ಮವನ್ನು ತಿಳಿಯುವುದು ಅಸಾಧ್ಯವೆಂದಾಗ, (ಒಂದೇ) ಅರ್ಧ ಶ್ಲೋಕದಲ್ಲಿ ಅವುಗಳೆಲ್ಲದರ ಸಾರಾಂಶವನ್ನೂ, ಧರ್ಮದ ಸಾರವನ್ನೂ ತಿಳಿಸುತ್ತೇನೆಂದು ಈ ಶ್ಲೋಕವನ್ನು ಹೇಳಿದರೆಂದು ಪ್ರತೀತಿ. ಅರ್ಧ ಶ್ಲೋಕದಲ್ಲಿ ಕೋಟಿ ಗ್ರಂಥದಲ್ಲಿ ಹೇಳಿದುದನ್ನು ಹೇಳುತ್ತೇನೆ; 'ಪರೋಪಕಾರವೇ ಪುಣ್ಯ,, ಪರ ಪೀಡನೆಯೇ ಪಾಪ. ಪಂಚ ಮಹಾ ಪಾತಕಗಳ (ಪಾಪಗಳ) ವಿವರ ಈ ರೀತಿ ಇದೆ ( ಪ್ರಮುಖ ಪಾಪಗಳೆಂದು ಭಾವಿಸಲಾಗುತ್ತದೆ:) ೧. ಬ್ರಹ್ಮ ಹತ್ಯ, ೨. ಸುರಾಪಾನ, ೩. ಸ್ವರ್ಣಸ್ತೇಯ, ೪.ಗುರುತಲ್ಪ ಗಮನ, ೫. ತತಸಂಯೋಗಿ (೫ ಅವರ ಸಹವಾಸ ಮಾಡುವವನು, ಈ ನಾಲ್ಕು ಪಾಪಿಗಳ ಸಹವಾಸ ಮಾಡುವವನು) ಬಸವಣ್ಣನವರ ವಚನ : ಅಯ್ಯಾ ಎಂದರೆ ಸ್ವರ್ಗ ; ಎಲಓ (ಎಲವೋ) ಎಂದರೆ ನರಕ. ಬೇರೆಯವರ ಮನ ನೋಯಿಸಿದರೆ ಪಾಪ. == ಭಗವದ್ಗೀತೆ == === ನೋಡಿ : === ಭಗವದ್ಗೀತಾ ತಾತ್ಪರ್ಯ ಅಧ್ಯಾಯ ೨-೩ == ಉಲ್ಲೇಖ ==