ಪಾಪೆಯು (ಕನೀನಿಕೆ) ಕಣ್ಣಿನ ಕನೀನಿಕಾ ಪಟದ ಮಧ್ಯದಲ್ಲಿ ಸ್ಥಿತವಾಗಿರುವ ಕಪ್ಪುಬಣ್ಣದ ರಂಧ್ರ. ಇದು ಬೆಳಕು ರೆಟಿನಾದ ಮೇಲೆ ಬೀಳಲು ಅವಕಾಶ ನೀಡುತ್ತದೆ. ಪಾಪೆಯನ್ನು ಪ್ರವೇಶಿಸುವ ಬೆಳಕಿನ ಕಿರಣಗಳು ಕಣ್ಣಿನೊಳಗಿನ ಅಂಗಾಂಶಗಳಿಂದ ನೇರವಾಗಿ ಹೀರಲ್ಪಡುವ ಕಾರಣದಿಂದ, ಅಥವಾ ಕಣ್ಣಿನೊಳಗೆ ಕಿರಿದಾದ ಪಾಪೆಯಿಂದ ಬಹುತೇಕವಾಗಿ ಹೊರಬರಲು ಆಗದ ಕಿರಣಗಳಿಂದ ಎಲ್ಲೆಡೆ ಆಗುವ ಪ್ರತಿಫಲನಗಳ ನಂತರ ಹೀರಲ್ಪಡುವ ಕಾರಣದಿಂದ ಇದು ಕಪ್ಪಾಗಿ ಕಾಣುತ್ತದೆ. ಮಾನವರಲ್ಲಿ, ಪಾಪೆಯು ದುಂಡಗಿರುತ್ತದೆ. ಆದರೆ ಕೆಲವು ಬೆಕ್ಕುಗಳಂತಹ ಇತರ ಜೀವಿಗಳು ಲಂಬವಾಗಿ ಸೀಳಿರುವ ಪಾಪೆಗಳನ್ನು ಹೊಂದಿರುತ್ತವೆ. ಮೇಕೆಗಳು ಅಡ್ಡವಾಗಿರುವ ಪಾಪೆಗಳನ್ನು ಹೊಂದಿದ್ದರೆ, ಕೆಲವು ಹೆಮ್ಮೀನುಗಳು ಉಂಗುರಾಕಾರದ ಪಾಪೆಗಳನ್ನು ಹೊಂದಿರುತ್ತವೆ. == ಕಾರ್ಯ == ಕನೀನಿಕಾ ಪಟವು ಸಂಕೋಚಕ ರಚನೆಯಾಗಿದ್ದು, ಮುಖ್ಯವಾಗಿ ಪಾಪೆಯನ್ನು ಸುತ್ತುವರೆದಿರುವ ನಯ ಸ್ನಾಯುವನ್ನು ಹೊಂದಿರುತ್ತದೆ. ಬೆಳಕು ಪಾಪೆಯ ಮೂಲಕ ಕಣ್ಣನ್ನು ಪ್ರವೇಶಿಸುತ್ತದೆ, ಮತ್ತು ಕನೀನಿಕಾ ಪಟವು ಪಾಪೆಯ ಗಾತ್ರವನ್ನು ನಿಯಂತ್ರಿಸುವ ಮೂಲಕ ಬೆಳಕಿನ ಪ್ರಮಾಣವನ್ನು ನಿಯಂತ್ರಿಸುತ್ತದೆ. == ಉಲ್ಲೇಖಗಳು ==