ಪಿನ್ನಿ ಒಂದು ಬಗೆಯ ಪಂಜಾಬಿ ಮತ್ತು ಉತ್ತರ ಭಾರತೀಯ ಪಾಕಶೈಲಿಯ ಖಾದ್ಯ. ಇದನ್ನು ಹೆಚ್ಚಾಗಿ ಚಳಿಗಾಲದಲ್ಲಿ ತಿನ್ನಲಾಗುತ್ತದೆ. ಇದನ್ನು ಭೋಜನ ನಂತರ ತಿನ್ನುವ ಸಿಹಿ ತಿನಿಸಾಗಿ ಬಡಿಸಲಾಗುತ್ತದೆ. ಇದನ್ನು ದೇಸಿ ತುಪ್ಪ, ಗೋಧಿ ಹಿಟ್ಟು, ಬೆಲ್ಲ ಮತ್ತು ಬಾದಾಮಿಗಳಿಂದ ತಯಾರಿಸಲಾಗುತ್ತದೆ. ಒಣದ್ರಾಕ್ಷಿಗಳನ್ನು ಕೂಡ ಬಳಸಬಹುದು. ಉದ್ದಿನ ಹಿಟ್ಟಿನ ಪಿನ್ನಿ ಪಿನ್ನಿಯ ಒಂದು ವಿಧವಾಗಿದೆ. == ಘಟಕಾಂಶಗಳು == ಹೆಚ್ಚಿನ ರುಚಿಗಾಗಿ, ಪಿನ್ನಿಯಲ್ಲಿ ಖೋವಾವನ್ನು ಬಳಸಲಾಗುತ್ತದೆ. ಪಿನ್ನಿ ದೀರ್ಘ ಕಾಲದವರೆಗೆ ಹಾಳಾಗುವುದಿಲ್ಲ ಮತ್ತು ಇವನ್ನು ತಣ್ಣಗಾಗಿಸುವುದು ಅಗತ್ಯವಿಲ್ಲ. ಪಿನ್ನಿಗಳ ಮೇಲೆ ಕುಟ್ಟಿದ ಏಲಕ್ಕಿ ಪುಡಿಯನ್ನು ಉದುರಿಸಲಾಗುತ್ತದೆ ಮತ್ತು ಸಾಧ್ಯವಾದರೆ ಬಿಸಿಯಾಗಿ ಚಹಾದೊಂದಿಗೆ ಅಥವಾ ಬಿಸಿ ಕ್ಷೀರೋತ್ಪನ್ನಗಳೊಂದಿಗೆ ಬಡಿಸಲಾಗುತ್ತದೆ. == ಉಲ್ಲೇಖಗಳು ==