'ಪುಣ್ಯಕೋಟಿ' ತಯಾರಿಕೆಯ ಹಂತದಲ್ಲಿರುವ, ಇನ್ನೂ ಬಿಡುಗಡೆಯಾಗದ ಸಂಸ್ಕೃತ ಭಾಷೆಯ ಭಾರತೀಯ ಅನಿಮೇಷನ್ ಚಿತ್ರವಾಗಿದೆ, ಈ ಚಿತ್ರವನ್ನು ರವಿಶಂಕರ್ ವಿ ನಿರ್ದೇಶಿಸಿದ್ದಾರೆ.ಈ ಚಲನಚಿತ್ರವನ್ನು ವಿವಿಧ ಮೂಲಗಳಿಂದ ಹಣವನ್ನು ಸಂಗ್ರಹಿಸಿ( ) ಮತ್ತು ವಿವಿಧ ಕಡೆಗಳಿಂದ ಮತ್ತು ಜನರಿಂದ ಅಭಿಪ್ರಾಯಗಳನ್ನು ಸಂಗ್ರಹಿಸಿ( ) ತಯಾರಿಸಲಾಗುತ್ತಿದೆ. ಪುಣ್ಯಕೋಟಿ ಜುಲೈ 2019 ರಲ್ಲಿ ಬಿಡುಗಡೆಯಾಗಬೇಕಿದ್ದ ಮೊದಲ ಸಂಸ್ಕೃತ ಅನಿಮೇಟೆಡ್ ಚಲನಚಿತ್ರವಾಗಿದೆ. ಇದು ರವಿಶಂಕರ್ ವಿ ಮಕ್ಕಳಿಗಾಗಿ ಬರೆದ ಚಿತ್ರ ಪುಸ್ತಕದ ರೂಪಾಂತರವಾಗಿದೆ. == ಕಥಾವಸ್ತು == ಈ ಚಿತ್ರವು ಎಲ್ಲಾ ಸಮಯದಲ್ಲೂ ಸತ್ಯವನ್ನು ಮಾತನಾಡುವ ಹಸುವಿನ ಬಗ್ಗೆ ಕನ್ನಡ ಭಾಷೆಯಲ್ಲಿ ಬರೆದ ಗೋವಿನ ಹಾಡು ಎಂಬ ಕರ್ನಾಟಕದ ಪ್ರಸಿದ್ಧ ಜಾನಪದ ಕಥೆಯನ್ನು ಆಧರಿಸಿದೆ. ಜಾನಪದ-ಹಾಡಿನ ಮೂಲ ಮೂಲವೆಂದರೆ ಪದ್ಮ ಪುರಾಣದ ಶ್ರೀಕಿ ಖಂಡದ ಹದಿನೆಂಟನೇ ಅಧ್ಯಾಯ.ಈ ಕಥೆಯು ಮನುಷ್ಯ-ಪ್ರಾಣಿಗಳ ಸಂಘರ್ಷವನ್ನು ಮನರಂಜನೆಯ ಮತ್ತು ತಿಳಿವಳಿಕೆಯ ರೂಪದಲ್ಲಿ ಚಿತ್ರಿಸುತ್ತದೆ. ಚಲನಚಿತ್ರವು ಪ್ರಾಮಾಣಿಕತೆಯ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಬದುಕುವ ಸಂದೇಶವನ್ನು ಸಾರುತ್ತದೆ. ಈ ಕಥೆಯು ವೈದಿಕ ಕಾಲದಲ್ಲಿ ಕಾವೇರಿ ನದಿಯ ದಡದಲ್ಲಿರುವ ಕರುನಾಡು ಎಂಬ ಹಳ್ಳಿಯಲ್ಲಿ ನಡೆದಿರುವಂತೆ ಚಿತ್ರಿಸಲಾಗಿದೆ. == ತಯಾರಿಕೆಯ ತಂಡ == ನಿರ್ದೇಶಕ: ರವಿಶಂಕರ್ ವಿ ಸೃಜನಶೀಲ ನಿರ್ದೇಶಕ: ಗಿರೀಶ್ ಎ.ವಿ ಸಂಗೀತ: ಇಸಿಗ್ನಾನಿ ಇಳಯರಾಜಾ ಸಂಪಾದಕ: ಮನೋಜ್ ಕಣ್ಣೋತ್ ಸಾಹಿತ್ಯ: ಶಂಕರ್ ರಾಜಾರಾಮನ್ ಸಂವಹನ: ಗೀಗಿ ಮ್ಯಾಥ್ಯೂಸ್ ಧ್ವನಿ ವಿನ್ಯಾಸ: ರಾಬಿನ್ ಕೆ ಮಾರ್ಗದರ್ಶನ: ಮೋಹನ್‌ದಾಸ್ ಪೈ === ಧ್ವನಿ ನೀಡಿದವರು === ೧. ಪುಣ್ಯಕೋಟಿ-ರೇವತಿ ೨. ಅರ್ಬುಟ-ನರಸಿಂಹಮೂರ್ತಿ ೩. ಕಾಳಿಂಗ-ರೋಜರ್ ನಾರಾಯಣ್ ೪. ಗೋಪಾಜಿ-ಪ್ರೋ.ಎಸ್,ಆರ್.ಲೀಲಾ ೫. ಮುಖ್ಯಸ್ಥ-ವಿದ್ಯಾಶಂಕರ್ ೬. ಪುಟ್ಟ-ಸ್ನೇಹಾ ರವಿಶಂಕರ್ ೭. ಚಿನ್ನ-ಸುಧನ್ವ ಪ್ರಸಾದ್ ೮. ಪುಷ್ಪಾ-ಸಾಗರಿಕಾ ೯. ಕಾವೇರಿ-ಮಾಧವಿ ಹೆಗ್ಡೆ ೧೦. ಪಂಗಿ-ಮಾಧವಿ ಹೆಗ್ಡೆ ೧೧.ಕುಂಗಿ-ಅನುಪಮಾ ಹೊಸಕೆರೆ ೧೨.ಗಂಗಮ್ಮ-ಅನುಪಮಾ ಹೊಸಕೆರೆ ೧೩. ಇಂಜಿನಿಯರ್-ವಿದ್ಯಾಶಂಕರ್ ೧೪. ವಣಿಕ-ಆನಂದ್ ರಾಜಮಣಿ ೧೫.ಪುರೋಹಿತ-ಆನಂದ್ ರಾಜಮಣಿ == ಇವನ್ನೂ ನೋಡಿ == ಗೋವಿನ ಹಾಡು == ಬಾಹ್ಯ ಕೊಂಡಿಗಳು == == ಉಲ್ಲೇಖಗಳು == == ಉಲ್ಲೇಖ ==