ಪುರಾಣಗಳು ಪುರಾತನ ಹಿಂದೂ ಧರ್ಮದ ಒಂದು ಸಾಹಿತ್ಯ ಪ್ರಕಾರ, ಇವು ವೇದಗಳಲ್ಲಿ ವರ್ಣಿಸಲಾದ ರಹಸ್ಯ,ಅರ್ಥಗಳನ್ನು ವಿವರವಾಗಿ ಬೋಧಿಸುವ ಗ್ರಂಥಗಳು. ಪುರಾಣಗಳಲ್ಲಿ ಮಹಾ ಪುರಾಣವೆಂದೂ, ಉಪ ಪುರಾಣವೆಂದೂ ಎರಡು ಭೇದಗಳಿವೆ. ಪುರಾಣಗಳನ್ನು ಅನೇಕ ಮಂದಿ ಮಹರ್ಷಿಗಳು ಬೇರೆ ಬೇರೆ ಕಾಲಗಳಲ್ಲಿ ರಚಿಸಿದರು. ಮಹಾಭಾರತ ಮತ್ತು ರಾಮಾಯಣಗಳು ಐತಿಹಾಸಿಕ ಮಹಾಕಾವ್ಯಗಳು, ಹಾಗಾಗಿ ಇವು ಪುರಾಣಗಳಲ್ಲಿ ಸೇರಿಲ್ಲ. == ಮಹಾಪುರಾಣಗಳು == ಮಹಾಪುರಾಣಗಳು ೧೮. ಮಹಾಪುರಾಣಗಳು ಮತ್ತು ಅವುಗಳ ಗ್ರಂಥ ಪರಿಮಾಣ (೩೨ ಅಕ್ಷರಗಳುಳ್ಳ ಒಂದು ಅನುಷ್ಟುಪ್ ಶ್ಲೋಕಕ್ಕೆ ಗ್ರಂಥವೆಂದು ಹೆಸರು.) ೧೮ ಮಹಾಪುರಾಣಗಳು ಹೀಗಿವೆ:- ಮದ್ವಯಂ ಭದ್ವಯಂ ಚೈವ ಬ್ರತ್ರಯಂ ವಚತುಷ್ಟಯಂ| ಅ ನಾ ಪ ಲಿಂ ಗ ಕೂ ಸ್ಕಾನಿ ಪುರಾಣಾನಿ ಪ್ರಚಕ್ಷತೇ|| ಅಂದರೆ:-ಅಷ್ಟಾದಶಪುರಾಣಗಳು ಮಕಾರಾದಿಯಾಗಿ ಎರಡು 1) ಮತ್ಸ್ಯ ಮತ್ತು 2) ಮಾರ್ಕಂಡೇಯ ಭಕಾರಾದಿಯಾಗಿ ಎರಡು- 3) ಭವಿಷ್ಯ ಮತ್ತು 4) ಭಾಗವತ; ಬ್ರಕಾರಾದಿಯಾಗಿ ಮೂರು- 5) ಬ್ರಹ್ಮಾಂಡ, 6) ಬ್ರಹ್ಮವೈವರ್ತ, ಮತ್ತು 7) ಬ್ರಾಹ್ಮ; ವಕಾರಾದಿಯಾಗಿ ನಾಲ್ಕು- 8) ವಾಮನ, 9) ವರಾಹ, 10) ವಿಷ್ಣು ಮತ್ತು 11) ವಾಯು; 13) ಅಗ್ನಿ, 13) ನಾರದ, 14) ಪದ್ಮ, 15) ಲಿಂಗ, 16) ಗರುಡ, 17) ಕೂರ್ಮ, 18) ಸ್ಕಂದ. ಸಾಂಪ್ರದಾಯಿಕ ಗಣನೆಯ ಮೇರೆಗೆ ಬ್ರಾಹ್ಮ, ವೈಷ್ಣವ, ವಾಯವ್ಯ, ಭಾಗವತ, ನಾರದೀಯ, ಮಾರ್ಕಂಡೇಯ, ಆಗ್ನೇಯ, ಭವಿಷ್ಯ, ಬ್ರಹ್ಮವೈವರ್ತ, ಮತ್ಸ್ಯ, ವರಾಹ, ಲೈಂಗ, ಸ್ಕಾಂದ, ವಾಮನ, ಕೌರ್ಮ, ಗಾರುಡ ಮತ್ತು ಬ್ರಹ್ಮಾಂಡಗಳೆಂಬುವೇ 18 ಮಹಾಪುರಾಣಗಳು. ಈ ಪಟ್ಟಿಯಲ್ಲಿ ವಾಯವ್ಯಕ್ಕೆ ಬದಲಾಗಿ ದೇವೀಭಾಗವತವನ್ನೂ ಸೇರಿಸಿದ ಪಾಠಾಂತರಗಳಿವೆ. ಆದರಿವು ವಾಸ್ತವಿಕವಾಗಿ ಉಪಪುರಾಣಗಳು. ಹರಿವಂಶವನ್ನೂ ಅಷ್ಟಾದಶಪುರಾಣಗಳ ಜೊತೆಗೆ ಸೇರಿಸುವವರಿದ್ದಾರೆ. ಅದು ಅಷ್ಟೇನೂ ಉಚಿತವಲ್ಲ. == ಪುರಾಣಗಳ ಪಟ್ಟಿ == === ಹೆಚ್ಚಿನ ಓದಿಗೆ === ಸೃಷ್ಟಿ ಮತ್ತು ಪುರಾಣ : Purāṇas? Purāṇas - 2 , Vāyu Purāṇa .. 200 . 2021-07-27 ವೇಬ್ಯಾಕ್ ಮೆಷಿನ್ ನಲ್ಲಿ. 2021-07-28 ವೇಬ್ಯಾಕ್ ಮೆಷಿನ್ ನಲ್ಲಿ. ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅಷ್ಟಾದಶಪುರಾಣಗಳು === ಉಲ್ಲೇಖಗಳು ===