ಶ್ರೀಭಗವಾನುವಾಚ: ಊರ್ಧ್ವಮೂಲಮಧಶಾಖಮಶ್ವತ್ಥಂ ಪ್ರಾಹುರವ್ಯಯಮ್ । ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ।।೧।। ಶ್ರೀ ಭಗವಂತನು ಹೀಗೆಂದನು: ಮೇಲುಗಡೆಯಲ್ಲಿ ಮೂಲವುಳ್ಳದ್ದು ಕೆಳದಿಕ್ಕಿಗೆ ಹರಡಿದ ಶಾಖೆಗಳುಳ್ಳದ್ದೂ ಅದ ಸಂಸಾರವೆಂಬ ಅಶ್ವತ್ಥವೃಕ್ಷವು ಅಂತ್ಯವಿಲ್ಲದ್ದೆಂದು ಹೇಳುತ್ತಾರೆ. ಈ ವೃಕ್ಷಕ್ಕೆ ವೇದಗಳೆ ಎಲೆಗಳು. ಈ ವೃಕ್ಷದ ಸ್ವರೂಪವನ್ನು ಮೂಲಸಹಿತಬಲ್ಲವನು ವೇದಾರ್ಥಜ್ಞನು. , . . ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ । ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ ।।೨।। ಕೆಳಗೆ ಮನುಷ್ಯರೇ ಮೊದಲಾದ ಜೀವಿಗಳಿಂದ ಹಿಡಿದು ಸ್ಥಾವರದವರೆಗೆ, ಮೇಲಕ್ಕೆ ಚತುರ್ಮುಖಬ್ರಹ್ಮಲೋಕದವರೆಗೆ ಈ ಸಂಸಾರವೃಕ್ಷದ ಕೊಂಬೆಗಳು ಹಬ್ಬಿಕೊಂಡಿವೆ. ಇವು ಸತ್ವರಜಸ್ತಮೋಗುಣಗಳಿಂದ ಬೆಳೆದು ದಪ್ಪವಾಗಿವೆ. ಈ ಕೊಂಬೆಗಳನ್ನು ಶಬ್ದಸ್ಪರ್ಶಾದಿ ವಿಷಯಗಳೆಂಬ ಚಿಗುರುಗಳು ಹುಟ್ಟಿವೆ. ಕರ್ಮಫಲಗಳಿಂದ ಹುಟ್ಟಿದ ಕೆಳಗೆ-ದೇವಾದಿಗಳಿಗಿಂತ ಕೆಳಗೆ ಮನುಷ್ಯಲೋಕದಲ್ಲಿ ವಿಷೇಶವಾಗಿ ಚಿಕ್ಕ ಚಿಕ್ಕ ಬೇರುಗಳಂತೆ ಹರಡಿಕೊಂಡಿವೆ. ನರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ್ ಚಾದಿರ್ನ ಚ ಸಂಪ್ರತಿಷ್ಠಾ । ಅಶ್ವತ್ಥಮೇನಂ ಸುವಿರೂಢ್ಮಮೂಲಮ್ ಅಸಂಗಶಸ್ತ್ರೇಣ ದೃಢೇನ ಛಿತ್ವಾ ।।೨।। ...