ಪೂರ್ವವು ನಾಲ್ಕು ಪ್ರಧಾನ ದಿಕ್ಕುಗಳಲ್ಲಿ ಒಂದಾಗಿದೆ. ಇದು ಪಶ್ಚಿಮ ದಿಕ್ಕಿಗೆ ವಿರುದ್ಧದಲ್ಲಿರುವ ದಿಕ್ಕಾಗಿದೆ. == ವ್ಯುತ್ಪತ್ತಿ == ಇತರ ಭಾಷೆಗಳಲ್ಲಿಯು ಪೂರ್ವವು ಸೂರ್ಯನು ಉದಯಿಸುವ ದಿಕ್ಕು ಎಂಬ ಅಂಶದಿಂದ ರೂಪುಗೊಂಡಿದೆ: ಇದನ್ನು ಇಂಗ್ಲೀಷ್‍ನಲ್ಲಿ ಇಸ್ಟ್ ಎಂದು ಕರಯುತ್ತಾರೆ. ಪ್ರೊಟೊ-ಜರ್ಮಾನಿಕ್‍ದಲ್ಲಿ *ಆಸ್-ಟು- ಅಥವಾ * ಆಸ್ಟ್ರಾ ಎಂದು ಕರೆಯುತ್ತಾರೆ. ಅಂದರೆ: - "ಪೂರ್ವ", "ಸೂರ್ಯೋದಯದ ಕಡೆಗೆ". ಪ್ರೋಟೋ-ಇಂಡೋ-ಯುರೋಪ್‍ದಲ್ಲಿ *ಆಸ್ ಅಂದರೆ - "ಶೈನ್," ಅಥವಾ "ಡಾನ್". ಹಳೆಯ ಹೈ ಜರ್ಮನ್‍ನಲ್ಲಿ *ಓಸ್ಟಾರ್ - "ಪೂರ್ವಕ್ಕೆ". ಲ್ಯಾಟಿನ್ ಓರಿಯನ್ಸ್ ಅಲ್ಲಿ 'ಪೂರ್ವ, ಸೂರ್ಯೋದಯ' ಎಂದು ಕರಯುತ್ತಾರೆ. ಪೂರ್ವವನ್ನು ಕೆಲವೊಮ್ಮೆ ಇ ಎಂದು ಸಂಕ್ಷಿಪ್ತಗೊಳಿಸಲಾಗುತ್ತದೆ. == ನ್ಯಾವಿಗೇಷನ್ == ಸಂಪ್ರದಾಯದಂತೆ, ನಕ್ಷೆಯ ಬಲಭಾಗವು ಪೂರ್ವವಾಗಿದೆ. ದಿಕ್ಸೂಚಿಯ ಬಳಕೆಯಿಂದ ಸಮಾವೇಶವನ್ನು ಅಭಿವೃದ್ಧಿಪಡಿಸಲಾಗಿದೆ. ಹಿಮ್ಮುಖವಾಗಿ ತಿರುಗುವ ಶುಕ್ರ ಮತ್ತು ಯುರೇನಸ್‌ನಂತಹ ಗ್ರಹಗಳ ನಕ್ಷೆಗಳಲ್ಲಿ ಎಡಭಾಗವು ಪೂರ್ವದಲ್ಲಿದೆ. ದಿಕ್ಸೂಚಿಯನ್ನು ಬಳಸಿಕೊಂಡು ಪೂರ್ವಕ್ಕೆ ಹೋಗಲು, ಒಬ್ಬರು ೯೦° ನ ಬೇರಿಂಗ್ ಅನ್ನು ಹೊಂದಿಸುತ್ತಾರೆ. == ಸಾಂಸ್ಕೃತಿಕ == ಪೂರ್ವವು ಭೂಮಿಯು ತನ್ನ ಅಕ್ಷದ ಸುತ್ತ ತಿರುಗಿಸುವ ದಿಕ್ಕು ಹಾಗೂ ಪೂರ್ವವು ಸೂರ್ಯನು ಉದಯಿಸುವ ದಿಕ್ಕು. ಪೂರ್ವದ ಕಡೆಗೆ ಪ್ರಾರ್ಥನೆ ಮಾಡುವ ಅಭ್ಯಾಸವು ಕ್ರಿಶ್ಚಿಯನ್ ಧರ್ಮದಲ್ಲಿದೆ. ಕ್ರಿಶ್ಚಿಯನ್ ಚರ್ಚ್‌ಗಳು ಸಾಂಪ್ರದಾಯಿಕವಾಗಿ ಪೂರ್ವದ ಕಡೆಗೆ ಆಧಾರಿತವಾಗಿರುತ್ತದೆ. ಧಾರ್ಮಿಕವಾಗಿ ಪೂರ್ವದಲ್ಲಿ ಬಲಿಪೀಠವನ್ನು ಹೊಂದಿರುವ ಈ ಸಂಪ್ರದಾಯವು ಚರ್ಚ್ ದೃಷ್ಟಿಕೋನದ ಪ್ರಾರ್ಥನೆ ಪೂರ್ವ ಮತ್ತು ಪಶ್ಚಿಮದ ಒಂದು ಭಾಗವಾಗಿದೆ. ಏಷ್ಯಾದ ಖಂಡದಲ್ಲಿ ಇದನ್ನು ದೂರದ ಪೂರ್ವ, ಮಧ್ಯಪ್ರಾಚ್ಯ ಮತ್ತು ಸಮೀಪದ ಪೂರ್ವ ಎಂದು ವಿಂಗಡಿಸಲಾಗಿದೆ. == ಸಹ ನೋಡಿ == ಮಧ್ಯಂತರ ಪ್ರದೇಶ ಈಸ್ಟಿಂಗ್ == ಉಲ್ಲೇಖಗಳು ==