ಪೇಠಾ ಉತ್ತರ ಭಾರತದ ಒಂದು ಅರೆಪಾರದರ್ಶಕ, ಮೃದು ಸಿಹಿ ಮಿಠಾಯಿ. ಸಾಮಾನ್ಯವಾಗಿ ಆಯಾತಾಕಾರ ಅಥವಾ ಸುರುಳೆಯಾಕಾರದ್ದಾಗಿರುವ ಇದನ್ನು ಬೂದುಗುಂಬಳಕಾಯಿಯಿಂದ ತಯಾರಿಸಲಾಗುತ್ತದೆ. ಹೆಚ್ಚುತ್ತಿರುವ ಬೇಡಿಕೆ ಮತ್ತು ನಾವೀನ್ಯದೊಂದಿಗೆ, ಮೂಲ ಖಾದ್ಯದ ಹೆಚ್ಚು ವೈವಿಧ್ಯಗಳು ಲಭ್ಯವಿವೆ. ಅನೇಕ ಸ್ವಾದಯುಕ್ತ ರೂಪಗಳು ಲಭ್ಯವಿವೆ, ಉದಾ. ಕೇಸರ್ ಪೇಠಾ, ಅಂಗೂರಿ ಪೇಠಾ ಇತ್ಯಾದಿ. ಘಟಕಾಂಶಗಳನ್ನು ಆಧರಿಸಿ ಕೆಲವು ಇತರ ರೂಪಗಳಿವೆ, ಒಂದು ಕೊಬ್ಬರಿ ಬೆರೆಸಿದ್ದು, ಮತ್ತೊಂದು ಕೆಲವು ಒಣಹಣ್ಣುಗಳು, ಬಾದಾಮಿ, ಗೋಡಂಬಿ ಇತ್ಯಾದಿ ಹಾಕಿದ್ದು. ಕೆಲವೊಮ್ಮೆ ಪೇಠಾಕ್ಕೆ ಪರಿಮಳ ನೀಡಲು ಕೇವಡಾ ಪರಿಮಳವನ್ನು ಬಳಸಲಾಗುತ್ತದೆ. == ಇತಿಹಾಸ == ಪೇಠಾ ಮುಘಲ್ ಸಾಮ್ರಾಟ ಶಾಹ್ ಜಹಾನ್‍ನ ಅಡಿಗೆಮನೆಗಳಲ್ಲಿ ಹುಟ್ಟಿಕೊಂಡಿತು ಎಂದು ಹೇಳಲಾಗಿದೆ. ಆಗ್ರಾದಲ್ಲಿ ತಯಾರಾದ ಪೇಠಾಕ್ಕೆ ಜಿಐ ಪಟ್ಟಿ ದೊರಕಿದೆ. ಇದರಿಂದ ಅದರ ಮೂಲವು ದೃಢೀಕರಣಗೊಳ್ಳುತ್ತದೆ. == ಉಲ್ಲೇಖಗಳು ==