ಪೊರ್ಬಂದರ್ ಪಶ್ಚಿಮ ಭಾರತದ ಗುಜರಾತ್ ರಾಜ್ಯದ 33 ಜಿಲ್ಲೆಗಳಲ್ಲಿ ಒಂದು. ಜಿಲ್ಲೆಯು 2,316 ಚದರ ಕಿಲೋಮೀಟರ್ ಪ್ರದೇಶವನ್ನು ಹೊಂದಿ ಇದು 5.85,449(೨೦೧೧) ಜನಸಂಖ್ಯೆಯನ್ನು ಹೊಂದಿದೆ. ಕಾತಿಯಾವಾರ್ ಪರ್ಯಾಯ ದ್ವೀಪದಲ್ಲಿರುವ ಇದು,ಜುನಾಗಡ ಜಿಲ್ಲೆಯಿ೦ದ ಬೇರಾಗಿಸಿ ಈ ಜಿಲ್ಲೆಯನ್ನು ರಚಿಸಲಾಯಿತು. ಪೊರ್ಬಂದರ್ ನಗರ ಈ ಜಿಲ್ಲೆಯ ಆಡಳಿತ ಕೇಂದ್ರ. ಜಿಲ್ಲೆಯ ಉತ್ತರಕ್ಕೆ ಜಾಮ್ನಗರ್ ಮತ್ತು ದೇವಭೂಮಿ ದ್ವಾರಕ, ಪೂರ್ವಕ್ಕೆ ಜುನಾಗಧ್ ಮತ್ತು ರಾಜ್ಕೋಟ್ ಜಿಲ್ಲೆ ಹಾಗು ಪಶ್ಚಿಮ ಮತ್ತು ದಕ್ಷಿಣಕ್ಕೆ ಅರಬ್ಬೀ ಸಮುದ್ರವನ್ನು ಹೊ೦ದಿದೆ. == ಇತಿಹಾಸ == ಪೊರ್ಬ೦ದರ್ ಮಹಾತ್ಮ ಗಾ೦ಧಿಯ ಜನ್ಮಸ್ಥಳ. ಮಹಾಭಾರತದಲ್ಲಿಯೂ ಸಹ ಪೊರ್ಬ೦ದರ್ ಉಲ್ಲೇಖವಿದ್ದು , ಕೃಷ್ಣನ ಬಾಲ್ಯ ಸ್ನೇಹಿತ ಸುಧಾಮನ ಊರು ಎ೦ದು ಹೇಳಲಾಗಿದೆ. == ಆಡಳಿತ == 3 ತಾಲ್ಲೂಕುಗಳು : ಪೊರ್ಬ೦ದರ್ , ರನಾವವ್ , ಕುಟಿಯಾನ == ಆರ್ಥಿಕತೆ == === ಕೃಷಿ === ಪೋರಬಂದರ್ ಜಿಲ್ಲೆಯಲ್ಲಿ ಉತ್ಪತ್ತಿಯಾಗುವ ಪ್ರಮುಖ ಬೆಳೆಗಳು: ಹತ್ತಿ, ಕಡಲೆಕಾಯಿ, ಜೋಳ, ಗೋಧಿ == ಬಾಹ್ಯ ಕೊಂಡಿಗಳು == ಅಧಿಕೃತ ಜಾಲತಾಣ 2020-11-03 ವೇಬ್ಯಾಕ್ ಮೆಷಿನ್ ನಲ್ಲಿ.