ಈ ಸಸ್ಯವು ಪಾಲಿಕಾರ್ಪಿಯ ಕೊರಿಂಬೋಸ ( (.) .) ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದ್ದು, ಕ್ಯಾರಿಯೊಫಿಲ್ಲೇಸಿ () ಎಂಬ ಸಸ್ಯ ಕುಟುಂಬಕ್ಕೆ ಸೇರಿದೆ. == ಇತರ ಹೆಸರುಗಳು == ಅರಿಶಿನಸಾಸಿವೆ == ಇತರ ಭಾಷೆಯ ಹೆಸರುಗಳು == ಸಂಸ್ಕೃತ: ಭಿಸಾಟ್ಟ ತಮಿಳ್: ನಿಲೈಸೇಡಚಿ ತೆಲುಗು: ಬೊಮ್ಮಸರಿ, ರಜುಮ == ಸಸ್ಯವರ್ಣನೆ == ಈ ಗಿಡವು ಕೆಂಪು ಭೂಮಿಯಲ್ಲಿ, ನದಿಯ ದಡೆಯಲ್ಲಿ ಮತ್ತು ಬೀಳು ಭೂಮಿಯಲ್ಲಿ ಬೆಳೆಯುತ್ತದೆ. ಇದು ಸಾಮಾನ್ಯವಾಗಿ ೧೫ ರಿಂದ ೨೫ ಸೆ. ಮೀ. ಎತ್ತರ ಬೆಳೆಯುತ್ತದೆ. ಸಸ್ಯದ ಎಲ್ಲಾ ಭಾಗಗಳ ಮೇಲೆ ರೋಮಗಳಿರುತ್ತವೆ. ಸಾಸಿವೆ ಗಿಡವು ನದಿತೀರ ಮತ್ತು ತೇವಭರಿತ ಪ್ರದೇಶಗಳಲ್ಲಿ ಕಾಣಸಿಗುತ್ತದೆ. == ಪ್ರಯೋಜನಗಳು == ವಿಷಜಂತುಗಳು ಕಡಿದ ಜಾಗದ ಮೇಲೆ ಈ ಗಿಡದ ಎಲೆಗಳನ್ನು ಹಾಕಿಟ್ಟರೆ, ವಿಷವು ದೇಹಕ್ಕೆ ಪಸರಿಸದಂತೆ ಮಾಡುತ್ತದೆ. ಈ ಎಲೆಯ ಚೂರ್ಣ ಸೇವನೆ ಕಾಮಾಲೆರೋಗಕ್ಕೆ ಉತ್ತಮ ಔಷಧವಾಗಿದೆ. ಹೂವಿನ ಮೊಗ್ಗು ಅರೆದು ಸೇವನೆ ಮಾಡಿದರೆ ವಾತ ಶಮನವಾಗುತ್ತದೆ. == ಉಲ್ಲೇಖಗಳು ==