ಪ್ರತಿಮಾದೇವಿ (ಏಪ್ರಿಲ್ ೯, ೧೯೩೨ - ಏಪ್ರಿಲ್ ೬, ೨೦೨೧), ಕನ್ನಡ ಚಿತ್ರರಂಗ ಮತ್ತು ರಂಗಭೂಮಿ ನಟಿ. ಇವರು ೧೯೪೭ರಲ್ಲಿ 'ಕೃಷ್ಣಲೀಲಾ' ಚಿತ್ರದ ಮೂಲಕ ಚಿತ್ರರಂಗ ಪ್ರವೇಶ ಮಾಡಿದರು. ಚಿತ್ರಮಂದಿರಗಳಲ್ಲಿ ೧೦೦ ದಿನಗಳನ್ನು ಪೂರೈಸಿದ ಮೊದಲ ಕನ್ನಡ ಚಿತ್ರ ೧೯೫೧ರಲ್ಲಿ ಬಿಡುಗಡೆಯಾದ 'ಜಗನ್ಮೋಹಿನಿ'ಯಲ್ಲಿ ಅವರು ಮುಖ್ಯ ಪಾತ್ರದಲ್ಲಿ ನಟಿಸಿದರು. == ವೈಯಕ್ತಿಕ ಜೀವನ == ದೇವಿ ಅವರ ಹುಟ್ಟುಹೆಸರು ಮೋಹಿನಿ. ಹುಟ್ಟಿದ್ದು ಫೆಬ್ರುವರಿ ೯, ೧೯೩೨ರಲ್ಲಿ. ಪ್ರತಿಮಾದೇವಿಯವರು ಕನ್ನಡ ಚಿತ್ರರಂಗದ ನಿರ್ಮಾಪಕ-ನಿರ್ದೇಶಕ, ಮಹಾತ್ಮ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಪತ್ನಿ. ಕನ್ನಡದ ನಿರ್ಮಾಪಕ - ನಿರ್ದೇಶಕ ಎಸ್. ವಿ. ರಾಜೇಂದ್ರಸಿಂಗ್, ನಟಿ ನಿರ್ಮಾಪಕಿ – ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಪ್ರತಿಮಾದೇವಿ ಅವರ ಮಕ್ಕಳು. == ಹಲವಾರು ಚಿತ್ರಗಳಲ್ಲಿ == ಕೃಷ್ಣಲೀಲಾ, ನಾಗಕನ್ಯೆ, ಜಗನ್ಮೋಹಿನಿ, ಶ್ರೀನಿವಾಸ ಕಲ್ಯಾಣ, ಮುಟ್ಟಿದ್ದೆಲ್ಲಾ ಚೀನಾ, ಚಂಚಲಕುಮಾರಿ, ಧರ್ಮಸ್ಥಳ ಮಹಾತ್ಮೆ, ಪ್ರಭುಲಿಂಗ ಲೀಲೆಮಂಗಳ ಸೂತ್ರ, ಧರಣಿ ಮಂಡಲ ಮಧ್ಯದೊಳಗೆ, ರಾಮಾ ಶಾಮಾ ಭಾಮಾ ಮುಂತಾದ ಸುಮಾರು ಅರವತ್ತೈದು ಚಿತ್ರಗಳಲ್ಲಿ ಪ್ರತಿಮಾದೆವಿಯವರು ನಟಿಸಿದ್ದಾರೆ. ಜಗನ್ಮೋಹಿನಿ, ವರದಕ್ಷಿಣೆ, ಧರ್ಮಸ್ಥಳ ಮಹಾತ್ಮೆಯಲ್ಲಿನ ಅಭಿನಯಕ್ಕೆ ಪ್ರತಿಮಾದೇವಿಯವರು ಪ್ರಸಿದ್ಧಿ ಗಳಿಸಿದ್ದರು. == ನಿಧನ == ಪ್ರತಿಮದೇವಿ ಅವರು ಏಪ್ರಿಲ್ ೬, ೨೦೨೧ರಂದು ಮೈಸೂರಿನ ಸರಸ್ವತೀಪುರದ ತಮ್ಮ ಮನೆಯಲ್ಲಿ ಸಾವನ್ನಪ್ಪಿದರು. ಅವರಿಗೆ ೮೮ ವರ್ಷ ವಯಸ್ಸಾಗಿತ್ತು. == ಚಿತ್ರಗಳ ಪಟ್ಟಿ == == ಉಲ್ಲೇಖಗಳು ==