ಪ್ರತಿಲಿಪಿ ಎಂಬುದು ಭಾರತೀಯ ಆನ್‌ಲೈನ್ ಸ್ವಯಂ-ಪ್ರಕಾಶನ ಮತ್ತು ಕೇಳೊತ್ತಗೆ (ಆಡಿಯೊಬುಕ್) ಪೋರ್ಟಲ್ ಆಗಿದೆ. ಇದು ಹನ್ನೆರಡು ಭಾಷೆಗಳಲ್ಲಿ ವಿಷಯವನ್ನು ಒಳಗೊಂಡಿದೆ. ಕ್ರಮವಾಗಿ ಹಿಂದಿ, ಉರ್ದು, ಇಂಗ್ಲಿಷ್, ಗುಜರಾತಿ, ಬೆಂಗಾಲಿ, ಮರಾಠಿ, ಮಲಯಾಳಂ, ತಮಿಳು, ಕನ್ನಡ, ತೆಲುಗು, ಪಂಜಾಬಿ ಮತ್ತು ಒಡಿಯಾ. == ಇತಿಹಾಸ == ಪ್ರತಿಲಿಪಿ ಎಂಬುದು ಸಂಸ್ಕೃತ ಪದವಾಗಿದ್ದು, "ನೀವು ಓದಿದಂತೆಯೇ ಆಗುತ್ತೀರಿ" ಎಂಬ ಅರ್ಥವನ್ನು ಕೊಡುತ್ತದೆ.ಇದು ಕಥೆಗಳು, ಕವನಗಳು, ಪ್ರಬಂಧಗಳು ಮತ್ತು ಲೇಖನಗಳಂತಹ ಮೂಲ ಕೃತಿಗಳನ್ನು ಪ್ರಕಟಿಸಲು ಮತ್ತು ಓದಲು ಬಳಕೆದಾರರಿಗೆ ಅವಕಾಶ ನೀಡುತ್ತದೆ. ಇದು ಓದುಗರಿಗೆ ಇತರರು ಪೋಸ್ಟ್ ಮಾಡಿದ ವಿಷಯವನ್ನು ರೇಟ್ ಮಾಡಲು, ಲೇಖಕರಿಗೆ ಚಂದಾದಾರರಾಗಲು ಮತ್ತು ಸಂದೇಶ ಕಳುಹಿಸುವ ಮೂಲಕ ಅವರ ಅನುಯಾಯಿಗಳೊಂದಿಗೆ ಸಂವಹನ ನಡೆಸಲು ಅನುಮತಿಸುತ್ತದೆ. ಇದನ್ನು ಸೆಪ್ಟೆಂಬರ್ ೨೦೧೪ ರಲ್ಲಿ ರಂಜೀತ್ ಪ್ರತಾಪ್ ಸಿಂಗ್, ಪ್ರಶಾಂತ್ ಗುಪ್ತಾ, ರಾಹುಲ್ ರಂಜನ್, ಸಹೃದಯಿ ಮೋದಿ ಮತ್ತು ಶಂಕರನಾರಾಯಣನ್ ದೇವರಾಜನ್ ಅವರು ಭಾರತೀಯ ಭಾಷೆಗಳನ್ನು ಉತ್ತೇಜಿಸುವ ಉದ್ದೇಶದಿಂದ ಪ್ರಾರಂಭಿಸಿದರು. ಅದರ ಆರಂಭಿಕ ಹಂತದಲ್ಲಿ, ಇದು ಸ್ವಯಂ-ನಿಧಿಯ ವೇದಿಕೆಯಾಗಿತ್ತು. ನಂತರ ರಚನೆಕಾರರು ಮಾರ್ಚ್ ೨೦೧೫ ರಲ್ಲಿ ಟಿಲ್ಯಾಬ್ಸ್ (ಟೈಮ್ಸ್ ಇಂಟರ್ನೆಟ್ ಆಕ್ಸಿಲರೇಟರ್) ನಿಂದ ₹೩೦,೦೦,೦೦೦ ಹಣವನ್ನು ಸಂಗ್ರಹಿಸಿದರು ಮತ್ತು ೨೦೧೬ ರಲ್ಲಿ ನೆ‍ಕ್ಸಸ್ ವೆಂಚರ್ ಪಾಲುದಾರರ ನೇತೃತ್ವದ ಹೂಡಿಕೆದಾರರಿಂದ ಯು.ಎಸ್$೧೦,೦೦,೦೦೦ ಸಂಗ್ರಹಿಸಿದರು. ಅದರ ಪ್ರಾರಂಭದಲ್ಲಿ, ವೇದಿಕೆಯು ಕೇವಲ ಎರಡು ಭಾಷೆಗಳಲ್ಲಿ ವಿಷಯವನ್ನು ಒಳಗೊಂಡಿತ್ತು ಕ್ರಮವಾಗಿ, ಹಿಂದಿ ಮತ್ತು ಗುಜರಾತಿ. ಇದು ನಂತರ ಆರು ಭಾಷೆಗಳಿಗೆ ವಿಸ್ತರಿಸಿತು; ಬೆಂಗಾಲಿ, ಮರಾಠಿ, ಕನ್ನಡ, ತಮಿಳು, ತೆಲುಗು ಮತ್ತು ಮಲಯಾಳಂ. ಇದು ಫೆಬ್ರವರಿ ೨೦೧೮ ರಲ್ಲಿ ಒಮಿಡಿಯಾರ್ ನೆಟ್‌ವರ್ಕ್ ನೇತೃತ್ವದ ಸರಣಿ ಎ ರೌಂಡ್‌ನಿಂದ ಯು.ಎಸ್$೪೩,೦೦,೦೦೦ ಸಂಗ್ರಹಿಸಿತು ಮತ್ತು ೨೦೨೦ ರಲ್ಲಿ ಟೆನ್ಸೆಂಟ್ ನೇತೃತ್ವದ ಸಿರೀಸ್ ಸಿ ಯ ಫಂಡಿಂಗ್ ಸುತ್ತಿನಲ್ಲಿ ₹೭೬,೦೦,೦೦,೦೦೦ ಗಳಿಸಿತು. == ಪ್ರಶಸ್ತಿ == ಪ್ರತಿಲಿಪಿಗೆ ಐಐಟಿ ಬಾಂಬೆಯಿಂದ ಅತ್ಯುತ್ತಮ ವ್ಯವಹಾರ ಕಲ್ಪನೆಗಾಗಿ 'ಯುರೇಕಾ ಪ್ರಶಸ್ತಿ' ಮತ್ತು ಅತ್ಯುತ್ತಮ ಸ್ಟಾರ್ಟ್‌ಅಪ್‌ಗಾಗಿ 'ಸ್ಟಾರ್ಟ್‌ಅಪ್ ಲಾಂಚ್‌ಪ್ಯಾಡ್' ಪ್ರಶಸ್ತಿಯನ್ನು ನೀಡಲಾಯಿತು. == ಉಲ್ಲೇಖಗಳು ==