ಪ್ರಭಾಮಂಡಲವು (ಪ್ರಭಾವಳಿ) ಕಲೆಯಲ್ಲಿ ಒಬ್ಬ ವ್ಯಕ್ತಿಯನ್ನು ಸುತ್ತುವರಿಯುವ ಬೆಳಕಿನ ಕಿರಣಗಳ ಮುಕುಟ, ಬೆಳಕಿನ ವೃತ್ತ ಅಥವಾ ಬಿಂಬ. ಪವಿತ್ರ ವ್ಯಕ್ತಿಗಳನ್ನು ಸೂಚಿಸಲು ಇದನ್ನು ಅನೇಕ ಧರ್ಮಗಳ ಮೂರ್ತಿಶಿಲ್ಪದಲ್ಲಿ ಬಳಸಲಾಗಿದೆ, ಮತ್ತು ವಿವಿಧ ಅವಧಿಗಳಲ್ಲಿ ಅರಸರು ಅಥವಾ ವೀರರ ಚಿತ್ರಗಳಲ್ಲಿಯೂ ಬಳಸಲಾಗಿದೆ. ಪ್ರಾಚೀನ ಗ್ರೀಸ್, ಪ್ರಾಚೀನ ರೋಮ್, ಇತರ ಧರ್ಮಗಳ ಪೈಕಿ ಹಿಂದೂ ಧರ್ಮ, ಬೌದ್ಧ ಧರ್ಮ, ಇಸ್ಲಾಂ ಧರ್ಮ ಮತ್ತು ಕ್ರೈಸ್ತ ಧರ್ಮದ ಪವಿತ್ರ ಕಲೆಯಲ್ಲಿ, ಪೂಜ್ಯ ವ್ಯಕ್ತಿಗಳನ್ನು ತಲೆಯ ಸುತ್ತ, ಅಥವಾ ಸಂಪೂರ್ಣ ಶರೀರದ ಸುತ್ತ, ವೃತ್ತಾಕಾರದ ಕಾಂತಿ, ಅಥವಾ ಏಷ್ಯನ್ ಕಲೆಯಲ್ಲಿ ಜ್ವಾಲೆಗಳ ರೂಪದಲ್ಲಿರುವ ಪ್ರಭಾಮಂಡಲದೊಂದಿಗೆ ಚಿತ್ರಿಸಬಹುದು. ಪ್ರಭಾಮಂಡಲಗಳನ್ನು ಬಹುತೇಕ ಯಾವುದೇ ಬಣ್ಣ ಅಥವಾ ಬಣ್ಣಗಳ ಸಂಯೋಜನೆಯಾಗಿ ತೋರಿಸಬಹುದು, ಆದರೆ ಬೆಳಕನ್ನು ಪ್ರತಿನಿಧಿಸುವಾಗ ಬಹುತೇಕ ವೇಳೆ ಬಂಗಾರದ ಬಣ್ಣ, ಹಳದಿ ಅಥವಾ ಬಿಳಿ ಬಣ್ಣದ್ದಾಗಿ ಅಥವಾ ಜ್ವಾಲೆಗಳನ್ನು ಪ್ರತಿನಿಧಿಸುವಾಗ ಕೆಂಪು ಬಣ್ಣದ್ದಾಗಿ ಚಿತ್ರಿಸಲಾಗುತ್ತದೆ. == ಉಲ್ಲೇಖಗಳು == , , : , . 384 (Münster), 2012, 978-3-86835-051-7 , , , . , 1560–1860, , , 2010, 978-1-85514-409-5 , Napoléon, : , , . , . . , ( , ) – , (. 25–165) , . , . ., , 800–1200, 1993, , 0-300-06493-4 , , (.): : , 1991, 0-8109-2526-5 , , , . , 1971 ( ), , , 0-85331-270-2 == ಬಾಹ್ಯ ಕೊಂಡಿಗಳು == , , , , ,