ಪ್ರಸ್ತಾರ ಎಂದರೆ ಲಘು ಗುರುಗಳನ್ನು ಗುರುತಿಸುವ ಕ್ರಿಯೆ. ಪ್ರಸ್ತಾರ ಎಂದರೆ ಕಾವ್ಯಗಳಲ್ಲಿ ಲಘು ಗುರುಗಳನ್ನು ಗುರುತಿಸುವ ಕೆಲಸ. ಕನ್ನಡದಲ್ಲಿ ಹಲವು ಬಗೆಯ ವೃತ್ತಗಳು, ಛಂದಸ್ಸು, ರಗಳೆ ಮತ್ತು ಇತರ ಬಗೆಗಳಿವೆ. ಅವೆಲ್ಲವನ್ನೂ ಕಾವ್ಯಗಳಿಗೆ ಪ್ರಸ್ತಾರ ಹಾಕುವ ಮೂಲಕವೇ ಕಂಡುಹಿಡೀಯಬಹುದು. == ಮೂಲ == ಯಾವುದೇ ಪದ್ಯದಲ್ಲಿ ಅಕ್ಷರಗಳನ್ನು ಗುಂಪು ಮಾಡಿ ವಿಂಗಡಿಸಿ, ಅದರ ಛಂದಸ್ಸು ಮತ್ತು ಇತರ ಗುಣಗಳನ್ನು ಗಮನಿಸಬೇಕಾದಾಗ, === ಮಾತ್ರಾಗಣ === ಮಾತ್ರೆಗಳ ಆಧಾರದಿಂದ ಗಣ ವಿಭಾಗ ಮಾಡುವುದೇ ಮಾತ್ರಾಗಣ. ಮೂರು, ನಾಲ್ಕು ಅಥವಾ ಐದು ಮಾತ್ರೆಗಳಿಗೆ ಒಂದೊಂದು ಗಣ ಮಾಡಲಾಗುವುದು. ಸಾಲಿನಲ್ಲಿರುವ ಎಲ್ಲಾ ಮಾತ್ರೆಗಳನ್ನು ಗಣಗಳಾಗಿ ವಿಂಗಡಿಸಬೇಕು. ==== ಮಾತ್ರೆ ==== ಒಂದೇ ಒಂದು ಅಕ್ಷರವನ್ನು ಉಚ್ಚರಿಸಲು ಬೇಕಾದ ಕಾಲವನ್ನು ಮಾತ್ರೆ ಅಥವಾ ಮಾತ್ರಾ ಎಂದು ಅಳೆಯಲಾಗುವುದು. ==== ಲಘು ==== ಒಂದು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಲಘು ಎನ್ನುವರು. ಪ್ರಸ್ತಾರ ಮಾಡುವಾಗ, ಎಲ್ಲಾ ಲಘು ಅಕ್ಷರಗಳನ್ನು ( ) ಎಂಬ ಚಿಹ್ನೆ ಬಳಸಿ ಗುರುತಿಸಲಾಗುತ್ತದೆ. ==== ಗುರು ==== ಎರಡು ಮಾತ್ರಾಕಾಲದಲ್ಲಿ ಉಚ್ಚರಿಸಲ್ಪಡುವ ಅಕ್ಷರಗಳನ್ನು ಗುರು ಎನ್ನುವರು. ಪ್ರಸ್ತಾರ ಮಾಡುವಾಗ, ಎಲ್ಲಾ ಗುರು ಅಕ್ಷರಗಳನ್ನು ( - )ಎಂಬ ಚಿಹ್ನೆ ಬಳಸಿ ಗುರುತಿಸಲಾಗುತ್ತದೆ. ==== ಕೆಳಗಿನ ಕಾರಣಗಳಿಂದ ಅಕ್ಷರವು ಗುರು ಎಂದು ಗುರುತಿಸಬಹುದು ==== ==== ಅಕ್ಷರವು ಲಘು ಎನಿಸುವ ಲಕ್ಷಣಗಳು ==== ಗುರು ಎನಿಸಿಕೊಳ್ಳುವ ಲಕ್ಷಣಗಳನ್ನು ಹೊಂದಿರದ ಅಕ್ಷರಗಳನ್ನು ಲಘು ಎಂದು ಪರಿಗಣಿಸಬೇಕು.