ಡಾ. ಪ್ರಿಯದರ್ಶಿನಿ ಭಾರತೀಯ ಚಿತ್ರರಂಗದ ಹಿನ್ನೆಲೆ ಗಾಯಕಿ, ಸಂಗೀತ ಸಂಶೋಧಕಿ, ಪ್ರಪ್ರಥಮವಾಗಿ ಸಂಗೀತ ನಿರ್ದೇಶಕ ಭಾರದ್ವಾಜ್ ಸಂಯೋಜನೆಯ 'ಕಾದಲ್ ಡಾಟ್ ಕಾಮ್' ಎಂಬ ತಮಿಳು ಚಿತ್ರಕ್ಕೆ ಹಿರಿಯಗಾಯಕ ಹರಿಹರನ್ ಅವರೊಂದಿಗೆ ಯುಗಳ ಗೀತೆ ಹಾಡುವ ಮೂಲಕ ಅವರು ತಮ್ಮ ಸಿನಿ ಗಾಯನ ವೃತ್ತಿ ಪ್ರಾರಂಭಿಸಿದರು. ಹಲವಾರು ಹಿಟ್ ಹಾಡುಗಳು ನೀಡುವುದರೊಂದಿಗೆ ತಮಿಳು, ತೆಲುಗು, ಕನ್ನಡ, ಮಲಯಾಲಂ ಹಿಂದಿ ಚಿತ್ರರಂಗದಲ್ಲಿ ಗಾಯಕಿಯಾಗಿ ತಮ್ಮದೇಯಾದ ಛಾಪು ಮೂಡಿಸಿದ್ದಾರೆ.ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ೧೦೦ ವರ್ಷಗಳ ಕನ್ನಡ ಮತ್ತು ತಮಿಳು ಸಿನಿಮಾ ಸಂಗೀತ ಒಂದು ಅಧ್ಯಯನ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ೧೦೮೦ ಪುಟಗಳ ಮಹಾಪ್ರಬಂಧದೊಂದಿಗೆ ‌ಪಿಎಚ್‌.ಡಿ ಡಾಕ್ಟರೇಟ್ ಪಡೆದ ಭಾರತದ ಮೊದಲ ಚಲನಚಿತ್ರ ಹಿನ್ನೆಲೆ ಗಾಯಕಿಯಾಗಿದ್ದಾರೆ == ಜನನ ಮತ್ತು ವಿದ್ಯಾಭ್ಯಾಸ == ಪ್ರಿಯದರ್ಶಿನಿ ತಮಿಳುನಾಡಿನ ಚನೈನಲ್ಲಿ ರಾಮ್ ಹಾಗೂ ಸುಮತಿ ದಂಪತಿಗಳಿಗೆ ಜನಿಸಿದರು. ೫ ನೇ ತರಗತಿವರೆಗೆ ದೋಹದಲ್ಲಿ ವ್ಯಾಸಂಗ ಮಾಡಿ ನಂತರ ಸಿಂಗಪೂರ್ ದೇಶದಲ್ಲಿ ಪ್ರಾಥವಿಕ, ಪ್ರೌಢ ಶಿಕ್ಷಣ ನಾರ್ತಲ್ಯಾಂಡ್ ಸ್ಕೂಲ್ ನಲ್ಲಿ ಓದಿ, ನನ್ಯಾಂಗ್ ಟೆಕ್ನಾಲಜಿಕಲ್ ಯೂನಿವರ್ಸಿಟಿಯಲ್ಲಿ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್ ಮುಗಿಸಿದರು. ವಿದ್ಯಾರ್ಥಿದೆಸೆಯಿಂದಲ‍ಲೇ ಹಲವಾರು ಪ್ರಶಸ್ತಿ, ಪುರಸ್ಕಾರಗಳನ್ನು ಪಡೆದರು. ಸಂಗೀತದಲ್ಲಿ ಬಹಳ ಆಸಕ್ತಿಯಿದ್ದ ಇವರು ಮೊದಲಿಗೆ ಕರ್ನಾಟಕ ಶಾಸ್ತ್ರೀಯ ಸಂಗೀತಾಭ್ಯಾಸದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡರು. ಸಿನಿಮಾ ಗಾಯನಕ್ಕೆ ಬೇಕಾದ ವಾಯ್ಸ್ ಕಲ್ಚರ್ಗಾಗಿ ಹಿಂದುಸ್ತಾನಿ ಸಂಗೀತ, ಆಲಾಪ್, ಠುಮರಿಗಳನ್ನು ಕಲೆತರು ಹಾಗೂ ಅಸೋಸಿಯೇಟ್ ಬೋರ್ಡ್ ಆಫ್ ರಾಯಲ್ ಸ್ಕೂಲ್ ಆಫ್ ಮ್ಯೂಸಿಕ್, ಲಂಡನ್ ನಿಂದ ಪಾಶ್ಚಾತ್ಯ ಸಂಗೀತ ಕಲಿತರು. == ವೃತ್ತಿ ಜೀವನ == ಸಂಗೀತ ನಿರ್ದೇಶಕ ಭಾರದ್ವಾಜ್ ಸಂಯೋಜನೆಯ ತಮಿಳಿನ 'ಕಾದಲ್ ಡಾಟ್ ಕಾಮ್' ಎಂಬ ಚಿತ್ರಕ್ಕೆ ಹಿರಿಯಗಾಯಕ ಹರಿಹರನ್ ಅವರೊಂದಿಗೆ ಯುಗಳ ಗೀತೆ ಹಾಡುವ ದೊಡ್ಡ ಅವಕಾಶ ಸಿಕ್ಕಿತು ನಂತರ ಶಿವಾಜಿ ಗಣೇಸನ್ ಪುತ್ರ ಪ್ರಭು ಅಭಿಸನಯ ‘ಕುಸ್ತಿ’ ಚಿತ್ರ ಬಹಳ ದೊಡ್ಡ ಯಶಸ್ಸು ತಂದುಕೊಟ್ಟಿತು. ನೇರ್ಮುಗಂ, ವಿನ್, ನಂದಿ, ಚಿತ್ರಗಳಲ್ಲಿ ಹಾಡಿದ್ದಾರೆ. ತೆಲುಗಿನಲ್ಲಿ ಅರ್ಜುನ್ ಸರ್ಜಾ ಅಭಿನಯದ ಗಿರಿ, ಸಿಂಹಬಲುಡು, ಮಾಣಿಕ್ಯಂ 420 ಚಿತ್ರಗಳು ಪ್ರಮುಕವು. "ಅಜ್ಜು" ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನದ ಹಾಡಿಗೆ ಹಾಡುವ ಮೂಲಕ ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟರು. ಕನ್ನಡದ ಖ್ಯಾತ ನಟ ಯಶ್ ಆಭಿನಯದ 'ರಾಕಿ' ಚಿತ್ರದಲ್ಲಿ ಎಸ್.ಪಿ.ಬಾಲಸುಬ್ರಹ್ಮಣ್ಯಂರೊಂದಿಗೆ ಯುಗಳಗೀತೆ ಹಾಡಿರುವುದು ವಿಶೇಷ. ಚಲುವಿನ ಚಿತ್ತಾರ, ಜ್ಯೂಲಿ, ನನ್ನೆದೆಯ ಹಾಡು, ಸೀನ, ಪ್ರೀತಿಯಿಂದ ರಮೇಶ್ ಹಲವಾರು ಚಿತ್ರಗಳು ಸೇರಿ ಸುಮಾರು110 ಕ್ಕೂ ಹೆಚ್ಚು ಚಲನಚಿತ್ರಗಳನ್ನು ಹಾಡಿದ್ದಾರೆ. ಅವರು ಭಾರದ್ವಾಜ್ ಹಂಸಲೇಖ ಮನೋ ಮೂರ್ತಿ, ಗುರುಕಿರಣ್, ಡಿ.ಇಮಾನ್, ಆರ್. ಪಿ. ಪಟ್ನಾಯಕ್, ಮಹೇಶ್ ಮಹದೇವ್, ರಾಜೇಶ್ ರಾಮನಾಥ್, ಕೆ. ಕಲ್ಯಾಣ್, ಎಸ್.ಎ. ರಾಜಕುಮಾರ್, ವೆಂಕಟ್, ಗಣೇಶ ನಾರಾಯಣ್, ಎಂ.ಎನ್. ಕೃಪಾಕರ್, , ಸಿ. ಆರ್. ಬಾಬಿ, ಎ.ಟಿ.ರವೀಶ್ ಮತ್ತು ಅನೇಕ ಸಂಗೀತ ನಿರ್ದೇಶಕರೊಂದಿಗೆ ಕೆಲಸ ನಿರ್ವಹಿಸಿರುತ್ತಾರೆ. ಅವರ ಇತ್ತೀಚಿನ ತಮಿಳು ಚಲನಚಿತ್ರ ನಾನ್ ದಾನ್ ಬಾಲಾ ಚಿತ್ರದ ಧ್ವನಿಸುರುಳಿಯನ್ನು ಆಸ್ಕರ್ ಪ್ರಶಸ್ತಿ ಪುರಸ್ಕೃತ ಸಂಗೀತ ನಿರ್ದೇಶಕ ಎ.ಆರ್.ರಹಮಾನ್ ಬಿಡುಗಡೆ ಮಾಡಿದರು. ಇವರು ಮೈಸೂರು ವಿಶ್ವವಿದ್ಯಾಲಯದಲ್ಲಿ ೧೦೦ ವರ್ಷಗಳ ಕನ್ನಡ ಮತ್ತು ತಮಿಳು ಸಿನಿಮಾ ಸಂಗೀತ ಒಂದು ಅಧ್ಯಯನ ಎಂಬ ವಿಷಯದಲ್ಲಿ ಸಂಶೋಧನೆ ನಡೆಸಿ ೧೦೮೦ ಪುಟಗಳ ಮಹಾಪ್ರಬಂಧದೊಂದಿಗೆ ‌ಪಿಎಚ್‌.ಡಿ ಡಾಕ್ಟರೇಟ್ ಪಡೆದ ಭಾರತೀಯ ಮೊದಲ ಹಿನ್ನೆಲೆ ಗಾಯಕಿ ಯಾಗಿದ್ದಾರೆ == ಡಿಸ್ಕೋಗ್ರಫಿ == === ಹಾಡಿರುವ ಕೆಲ ಚಲನಚಿತ್ರ ಗೀತೆಗಳು === === ಹಾಡಿರುವ ಕೆಲ ಚಲನಚಿತ್ರೇತರ ಗೀತೆಗಳು === == ಬಾಹ್ಯ ಲಿಂಕ್‌ಗಳು == == ಉಲ್ಲೇಖಗಳು ==