ಫಿರೋಜಾಬಾದ್ ಉತ್ತರ ಪ್ರದೇಶರಾಜ್ಯದ ಒಂದು ಜಿಲ್ಲಾ ಕೇಂದ್ರ.ಇದು ಅಕ್ಬರನ ಕಾಲದಿಂದಲೂ ಪ್ರಸಿದ್ಧ ಸ್ಥಳವಾಗಿದೆ. == ಭೌಗೋಳಿಕ == ಫಿರೋಜಾಬಾದ್ 27.15° 78.42°﻿ / 27.15; 78.42. ಅಕ್ಶಾಂಶ ರೇಖಾಂಶಗಳಲ್ಲಿ ಸ್ಥಿತವಾಗಿದ್ದು ಸಮುದ್ರಮಟ್ಟದಿಂದ ಇದರ ಎತ್ತರ 164 ಮೀಟರ್ (538 ). == ಹವಾಮಾನ == ಇಲ್ಲಿ ಬಹಳ ವೈಪರೀತ್ಯದಿಂದ ಕೂಡಿದ ಹವಾಮಾನವಿದ್ದು -೦ ಡಿಗ್ರಿ ಕನಿಷ್ಟ ತಾಪಮಾನ ಮತ್ತು ೪೫ ಡಿಗ್ರಿ ಗರಿಷ್ಟ ತಾಪಮಾನವಿರುತ್ತದೆ. == ಜನ ಜೀವನ == ಫಿರೋಜಾಬಾದ್‍ನ ಜನಸಂಖ್ಯೆ ೨೦೧೧ರ ಜನಗಣತಿಯಂತೆ 603,797 , ಇವರಲ್ಲಿ ಬಹುಸಂಖ್ಯಾಕರು ಹಿಂದೂ ಧರ್ಮವನ್ನು ಆಚರಣೆ ಮಾಡುತ್ತಾರೆ. == ವೈಶಿಷ್ಟ್ಯತೆ == ಸುಹಾಗ್ ನಗರಿ(ವಿವಾಹ ನಗರಿ) ಎಂದೇ ಕರೆಯಲ್ಪಡುವ ಆಗ್ರದ ಸಮೀಪದಲ್ಲಿರುವ ಫಿರೋಜಾಬಾದ್ ಮೊಘಲರ ಕಾಲದಿಂದಲೂ ಗಾಜಿನ ಬಳೆಗಳಿಗೆ ಮತ್ತು ಗಾಜಿನ ಕಲಾಕೃತಿಗಳಿಗೆ ಹೆಸರಾಗಿದೆ. ಉತ್ತರ ಭಾರತೀಯರ ಮದುವೆ ಮುಂತಾದ ಸಾಮಾಜಿಕ ಸಂಪ್ರದಾಯಗಳಲ್ಲಿ ಸಮಾರಂಭಕ್ಕೆ ತಕ್ಕ 'ಕಂಗನ್', 'ಕಡಾ,' ಮೊದಲಾದ ವರ್ಣ ರಂಜಿತ ಬಳೆಗಳು ಫಿರೋಜಾಬಾದ್‌ನಲ್ಲಿ ತಯಾರಾಗುತ್ತವೆ. == ಫಿರೋಜಾಬಾದ್‌ನ ಗಾಜಿನ ಕಾರ್ಖಾನೆಗಳು == ಫಿರೋಜಾಬಾದ್‌ನಲ್ಲಿ ಸುಮಾರು ೪೦೦ ಕ್ಕೂ ಹೆಚ್ಚು ಗಾಜಿನ ಕಾರ್ಖಾನೆಗಳಿವೆ. ಇಲ್ಲಿ ತರಹಾವರಿ ಬಣ್ಣ-ಬಣ್ಣದ ಗಾಜಿನ ಮೊಂಬತ್ತಿ ಸ್ಟಾಂಡ್‌ಗಳು, ಹೂದಾನಿಗಳು ತಯಾರಿಸಲ್ಪಡುತ್ತವೆ. ಸನ್ ೧೯೮೯ ರಿಂದ ಈಚೆಗೆ ವಿದೇಶಿ ಮಾರುಕಟ್ಟೆಯ ಬೇಡಿಕೆಗಳಿಗೆ ಸರಿಹೊಂದುವಂತಹ ಗಾಜಿನ ಸುಂದರ ತೂಗು ದೀಪಗಳು ತಯಾರಾಗುತ್ತಿವೆ. ಈಗೀಗ ಹೊಸಹೊಸ ವಿನ್ಯಾಸಗಳ ಸಾಮಾನುಗಳು ಮಾರುಕಟ್ಟೆಗೆ ಪ್ರವೇಶಿಸಿವೆ. ಗಾಜಿನ ಕ್ರಿಸ್ ಮಸ್ ಮರಗಳು, ಮಣಿಗಳು, ಪಶು-ಪಕ್ಷಿಗಳ ಪುಟ್ಟ ಗೊಂಬೆಗಳು ಮತ್ತು ಮಕ್ಕಳ ಆಟಿಕೆಯ ವಸ್ತುಗಳು ವಿದೇಶಕ್ಕೆ ಕೊಂಡೊಯಲ್ಪಡುತ್ತವೆ. ಸೋವಿಯಾಗಿಯೂ ಸುಂದರವಾಗಿಯೂ ಬಾಳಿಕೆಬರುವಂತೆ ವಿನ್ಯಾಸಮಾಡಿದ ಕಲಾವಸ್ತುಗಳಿಗೆ ಸ್ವಾಭಾವಿಕವಾಗಿಯೇ ಬೇಡಿಕೆ ಹೆಚ್ಚು. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == | 2013-12-12 ವೇಬ್ಯಾಕ್ ಮೆಷಿನ್ ನಲ್ಲಿ. - 2014-02-08 ವೇಬ್ಯಾಕ್ ಮೆಷಿನ್ ನಲ್ಲಿ. & , (..) . | , , , ,