ಬಂದಾರು ದಕ್ಷಿಣ ಭಾರತದ ಕರ್ನಾಟಕ ರಾಜ್ಯದ ಒಂದು ಹಳ್ಳಿಯಾಗಿದೆ. ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನ ಇದೆ. ಇದು ನೇತ್ರಾವತಿ ನದಿಯ ದಡದಲ್ಲಿದೆ. == ಬಗ್ಗೆ == ೨೦೧೧ ರ ಮಾಹಿತಿಯ ಪ್ರಕಾರ, ಬಂದಾರು ಗ್ರಾಮದ ಸ್ಥಳ ಸಂಕೇತ ಅಥವಾ ಹಳ್ಳಿಯ ಕೋಡ್ ೬೧೭೬೭೨ ಆಗಿದೆ. ಬಂದಾರು ಗ್ರಾಮವು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕಿನಲ್ಲಿ ಇದೆ. ಉಪ ಜಿಲ್ಲಾ ಕೇಂದ್ರ ಕಚೇರಿ ಬೆಳ್ತಂಗಡಿಯಿಂದ ೨೬ ಕಿ.ಮೀ ದೂರದಲ್ಲಿದೆ ಮತ್ತು ಜಿಲ್ಲೆಯ ಪ್ರಧಾನ ಮಂಗಳೂರು ಮಂಗಳೂರಿನಿಂದ ೭೦ ಕಿ.ಮೀ ದೂರದಲ್ಲಿದೆ. ೨೦೦೯ ಅಂಕಿಅಂಶಗಳ ಪ್ರಕಾರ ಬಂದಾರು ಗ್ರಾಮವು ಒಂದು ಗ್ರಾಮ ಪಂಚಾಯತ್ ಆಗಿದೆ. ಒಟ್ಟು ಭೌಗೋಳಿಕ ಪ್ರದೇಶವು ೨೦೪೪.೬೫ ಹೆಕ್ಟೇರ್ ಆಗಿದೆ. ಬಂದಾರಿನಲ್ಲಿ ೪೦೨೨ ಜನಸಂಖ್ಯೆಯನ್ನು ಹೊಂದಿದೆ. ಬಂದಾರು ಹಳ್ಳಿಯಲ್ಲಿ ಸುಮಾರು ೮೦೨ ಮನೆಗಳಿವೆ. ಬಂದಾರು ಪಟ್ಟಣದಿಂದ ಸುಮಾರು ೨೬ ಕಿ.ಮೀ ದೂರದಲ್ಲಿದೆ. == ಶಾಲೆಗಳು ಮತ್ತು ಕಾಲೇಜುಗಳು == ನಾಲ್ಕು ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿವೆ. ಸರ್ಕಾರಿ ಪ್ರಾಥಮಿಕ ಶಾಲೆ, ಬಂದಾರು ಇದನ್ನು 1954 ರಲ್ಲಿ ಸ್ಥಾಪಿಸಲಾಯಿತು ಮತ್ತು ಇದನ್ನು ಕರ್ನಾಟಕ ಶಿಕ್ಷಣ ಇಲಾಖೆ ನಿರ್ವಹಿಸುತ್ತದೆ. ಇದು ಬಂದಾರು ನಲ್ಲಿದೆ. ಇದು ಕರ್ನಾಟಕದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನಲ್ಲಿದೆ. ಶಾಲೆಯು ೧ ರಿಂದ ೮ ರವರೆಗಿನ ಶ್ರೇಣಿಗಳನ್ನು ಒಳಗೊಂಡಿದೆ. ಸರ್ಕಾರಿ ಪ್ರೌಢಶಾಲೆ, ಪೆರ್ಲ ಬೈಪಾಡಿ ಸರ್ಕಾರಿ ಪ್ರಾಥಮಿಕ ಶಾಲೆ, ಮೈರೊಳಡ್ಕ ಸರ್ಕಾರಿ ಪ್ರಾಥಮಿಕ ಶಾಲೆ, ಪೆರ್ಲ ಬೈಪಾಡಿ ಸರ್ಕಾರಿ ಪ್ರಾಥಮಿಕ ಶಾಲೆ, ಕುಂಟಲಪಲ್ಕೆ == ಉಲ್ಲೇಖಗಳು ==