ಬಗನಿ (ಬೈನೆ)ಮರ ತಾಳೆ ಜಾತಿಯ ಒಂದು ಮರ.ಕರ್ನಾಟಕದಲ್ಲಿ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಕಂಡು ಬರುವುದು. == ಸಸ್ಯಶಾಸ್ತ್ರೀಯ ವರ್ಗೀಕರಣ == ಇದು ಪಾಲ್ಮಸಿ ()ಕುಟುಂಬಕ್ಕೆ ಸೇರಿದ್ದು,ಕ್ಯಾರಿಯೋಟ ಉರೆನ್ಸ್ ( )ಎಂದು ಸಸ್ಯಶಾಸ್ತ್ರೀಯ ಹೆಸರು. == ಸಸ್ಯದ ಗುಣಲಕ್ಷಣಗಳು == ಇದು ನೀಳವಾಗಿ ಬೆಳೆಯುವ ಅಂದವಾದ ಮರ.ದೊಡ್ಡಗಾತ್ರದ ದ್ವಿಲತಾತಂತು ಎಲೆಗಳು.ಇದರ ಹೂಗೊಂಚಲು ಅಂದವಾಗಿ ಇರುವುದು. ದಾರುವು ನಾರುಮಯವಾಗಿ ಬಲಯುತವಾಗಿರುತ್ತದೆ. == ಉಪಯೋಗಗಳು == ಇದರ ದಾರುವು ಬಲಯುತವಾಗಿರುವುದರಿಂದ ಗೃಹ ನಿರ್ಮಾಣಕ್ಕೆ,ನೇಗಿಲು ಮುಂತಾದ ಕೃಷಿಉಪಕರಣಗಳ ತಯಾರಿಕೆಯಲ್ಲಿ,ಒನಕೆ,ನೀರುಗೊಳವೆಗಳ ರಚನೆಯಲ್ಲಿ ಉಪಯೋಗವಾಗುತ್ತದೆ.ಇದರ ಎಲೆಯಿಂದ ನಾರು ದೊರೆಯುತ್ತದೆ.ಇದರ ಹೂ ಗೊಂಚಲುಗಳನ್ನು ಅಲಂಕಾರಕ್ಕೆ ಬಳಸುತ್ತಾರೆ.ಹೂವಿನ ತೊಟ್ಟಿನಿಂದ ಹೆಂಡವನ್ನು ಭಟ್ಟಿ ಇಳಿಸುತ್ತಾರೆ.ಇದರ ಕಾಂಡದಿಂದ ಬರುವ ಪಿಷ್ಟ ಪದಾರ್ಥವನ್ನು ಸಬ್ಬಕ್ಕಿ ಯಂತೆ ಬಳಸುತ್ತಾರೆ. == ಅಧಾರ ಗ್ರಂಥಗಳು == ೧ ವನಸಿರಿ: ಅಜ್ಜಂಪುರ ಕೃಷ್ಣಸ್ವಾಮಿ