ಇದೊಂದು ಸ್ಥಳನಾಮ. ಕರ್ನಾಟಕ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಇರುವ ಒಂದು ಸ್ಥಳನಾಮವೇ ಬದಿಕಾನ. == ಪದ ನಿಷ್ಪತ್ತಿ == ಬದಿ+ಕಾನ=ಬದಿಕಾನ. ಬದಿ ಎಂದರೆ ಬರಿ, 'ಸಂಪತ್ತು', 'ಬದಿಬಂಗಾರ್'(ತುಳು ಪದ) ಎಂಬ ಅರ್ಥಗಳಿವೆ. ಇಂಗ್ಲಿಷಿನಲ್ಲಿ ಎಂಬ ಅರ್ಥ ಬರುತ್ತದೆ. 'ಕಾನ' ಎಂದರೆ ಕಾಡು ಎಂದರ್ಥ. ಕನ್ನಡದ ಕಾನನ ಎಂಬ ಪದವೇ ತುಳುವಿನಲ್ಲಿ ಕಾನ ಎಂಬುದಾಗಿ ಬಳಕೆಯಲ್ಲಿದೆ. ಬದಿಕಾನ ಎಂಬ ಈ ಸ್ಥಳದಲ್ಲಿ 'ಏಳೂರು ದೇವೆರ್ ' ದೇವಸ್ಥಾನ ಇತ್ತು ಎಮಬುದಕ್ಕೆ ಕುರುಹುಗಳಿವೆ. ಈಗ ಇದು ಜೀರ್ಣಾವಸ್ಥೆಯಲ್ಲಿ ಇದೆ. ಈಗ ನೋಡಲು ಒಂದು ಬನದಂತೆ ಇದೆ. == ಭೌಗೋಳಿಕ ವಿವರ == ಕರ್ನಾಟಕ ರಾಜ್ಯದ ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದಲ್ಲಿ ಈ ಸ್ಥಳವನ್ನು ಗಮನಿಸಬಹುದು.