ಬರಂತಿ ಭಾರತದ ಪಶ್ಚಿಮ ಬಂಗಾಳದ ಪುರೂಲಿಯಾ ಜಿಲ್ಲೆಯಲ್ಲಿನ ರಘುನಾಥ್‍ಪುರ್ ಉಪವಿಭಾಗದ ಸಂತುರಿಯಲ್ಲಿ (ಅಭಿವೃದ್ಧಿ ಕ್ಷೇತ್ರ) ಸ್ಥಿತವಾಗಿರುವ ಒಂದು ಚಿಕ್ಕ ಆದಿವಾಸಿ ಗ್ರಾಮವಾಗಿದೆ. ಇದು ಬರಂತಿ ಸರೋವರದ ಪಕ್ಕದಲ್ಲಿ ಸ್ಥಿತವಾಗಿದೆ. ಇದು ಒಂದು ಬೆಳೆಯುತ್ತಿರುವ, ಆದರೆ ಪ್ರಶಾಂತವಾದ ಪ್ರವಾಸಿ ತಾಣವಾಗಿದೆ. == ಪ್ರವಾಸೋದ್ಯಮ == ಬರಂತಿ ಗೊರೊಂಗಿ ಗುಡ್ಡದ ಮಡಿಲಿನಲ್ಲಿ ಸ್ಥಿತವಾಗಿರುವ ಬೆಳೆಯುತ್ತಿರುವ ಪ್ರವಾಸಿ ಕೇಂದ್ರವಾಗಿದೆ. ಈ ಹಳ್ಳಿಯನ್ನು ಒಂದು ಪಾರ್ಶ್ವದಲ್ಲಿ ಪಂಚ್‍ಕೋಟ್ ಗುಡ್ಡ ಸುತ್ತುವರಿದಿದೆ ಮತ್ತು ಇನ್ನೊಂದು ಪಾರ್ಶ್ವದಲ್ಲಿ ಬಿಹಾರಿನಾಥ್ ಗುಡ್ಡವು ಸುತ್ತುವರಿದಿದೆ. ರಾಮ್‍ಚಂದ್ರಾಪುರ್ ಮಧ್ಯಮ ನೀರಾವರಿ ಯೋಜನೆಯಡಿ ಒಂದು ಜಲಾಶಯವಿದೆ. ಇದರ ನೈಸರ್ಗಿಕ ಪರಿಸರದ ಕಾರಣ ಈ ಪ್ರದೇಶವು ಗುಡ್ಡ ಮತ್ತು ಅರಣ್ಯ ಚಾರಣಕ್ಕೆ ಜನಪ್ರಿಯವಾಗಿದೆ. ಬರಂತಿಯಿಂದ ಗಢ್ ಪಂಚ್‍ಕೋಟ್ ೧೨ ಕಿ.ಮಿ. ದೂರದಲ್ಲಿದೆ ಮತ್ತು ಜೊಯ್‍ಚಂದಿ ಪಹಾರ್ ೨೧ ಕಿ.ಮಿ. ದೂರದಲ್ಲಿದೆ. ಬಂಗಾಳದ ಅರಕು ಕಣಿವೆಯಾದ ಬಿಹಾರಿನಾಥ್ ಬರಂತಿಯಿಂದ ೧೮ ಕಿ.ಮಿ. ದೂರದಲ್ಲಿದೆ. == ಛಾಯಾಂಕಣ == == ಉಲ್ಲೇಖಗಳು ==